ನವದೆಹಲಿ: ಅಬುಧಾಬಿ ಮೂಲದ ದಿಗ್ಗಜ ಹೂಡಿಕೆದಾರ ಮುಬಡಾಲಾ ಇನ್ವೆಸ್ಟ್ಮೆಂಟ್ ಕಂಪನಿ (Mubadala)ಯು ಜಿಯೋ ಪ್ಲಾಟ್ಫಾರ್ಮ್ಗಳಲ್ಲಿ 9,093.60 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲಿದೆ ಎಂದು ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಶುಕ್ರವಾರ ಘೋಷಣೆ ಮಾಡಿದೆ. 4.91 ಲಕ್ಷ ಕೋಟಿ ರೂಪಾಯಿಗಳ ಈಕ್ವಿಟಿ ಮೌಲ್ಯ ಮತ್ತು 5.16 ರೂಪಾಯಿಗಳ ಉದ್ಯಮ ಮೌಲ್ಯದೊಂದಿಗೆ ಹೂಡಿಕೆ ಮಾಡಲಿದೆ ಎಂದು ವರದಿಗಳು ತಿಳಿಸಿವೆ.
ಈ ಹೂಡಿಕೆಯೊಂದಿಗೆ, ಜಿಯೋ ಪ್ಲಾಟ್ಫಾರ್ಮ್ಗಳು ಫೇಸ್ಬುಕ್, ಸಿಲ್ವರ್ ಲೇಕ್, ವಿಸ್ಟಾ ಈಕ್ವಿಟಿ ಪಾರ್ಟ್ನರ್ಸ್, ಜನರಲ್ ಅಟ್ಲಾಂಟಿಕ್, ಕೆಕೆಆರ್ ಮತ್ತು ಮುಬಡಾಲಾ ಮುಂತಾದ ಪ್ರಮುಖ ಜಾಗತಿಕ ತಂತ್ರಜ್ಞಾನ ಮತ್ತು ಬೆಳವಣಿಗೆಯ ಹೂಡಿಕೆದಾರರಿಂದ ಆರು ವಾರಗಳಲ್ಲಿ 87,655.35 ಕೋಟಿ ರೂಪಾಯಿಗಳ ಹೂಡಿಕೆಯನ್ನು ಪಡೆದುಕೊಂಡಿದೆ.
“ಯುಎಇಯ ಜ್ಞಾನ ಆಧಾರಿತ ಆರ್ಥಿಕತೆಯನ್ನು ವೈವಿಧ್ಯಗೊಳಿಸಲು ಮತ್ತು ಜಾಗತಿಕವಾಗಿ ಸಂಪರ್ಕಿಸಲು ಮುಬಡಾಲಾದ ಕೆಲಸದ ಪ್ರಭಾವವನ್ನು ನಾನು ವೈಯಕ್ತಿಕವಾಗಿ ಅಬುಧಾಬಿಯೊಂದಿಗಿನ ನನ್ನ ದೀರ್ಘಕಾಲದ ಸಂಬಂಧಗಳ ಮೂಲಕ ನೋಡಿದ್ದೇನೆ. ಮುಬಡಾಲಾದ ಅನುಭವ ಮತ್ತು ವಿಶ್ವದಾದ್ಯಂತದ ಬೆಳವಣಿಗೆಯ ಪ್ರಯಾಣಗಳನ್ನು ಬೆಂಬಲಿಸುವ ಅದರ ಒಳನೋಟಗಳಿಂದ ನಾವು ಲಾಭ ಪಡೆಯುತ್ತೇವೆ” ಎಂದು ರಿಲಾಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಹೇಳಿದ್ದಾರೆ.
388 ಮಿಲಿಯನ್ಗೂ ಅಧಿಕ ಚಂದಾದಾರರನ್ನು ಹೊಂದಿರುವ ಜಿಯೋ ಪ್ಲಾಟ್ಫಾರ್ಮ್ಗಳು ತನ್ನ ಡಿಜಿಟಲ್ ಪರಿಸರ ವ್ಯವಸ್ಥೆಯಾದ್ಯಂತ ಪ್ರಮುಖ ಹೂಡಿಕೆಗಳನ್ನು ಮಾಡಿವೆ.
ಸಣ್ಣ ವ್ಯಾಪಾರಿಗಳು, ಸೂಕ್ಷ್ಮ ಉದ್ಯಮಗಳು ಮತ್ತು ರೈತರು ಸೇರಿದಂತೆ ದೇಶಾದ್ಯಂತ 1.3 ಶತಕೋಟಿ ಜನರಿಗೆ ಮತ್ತು ವ್ಯವಹಾರಗಳಿಗೆ ಡಿಜಿಟಲ್ ಇಂಡಿಯಾವನ್ನು ಸಕ್ರಿಯಗೊಳಿಸುವುದು ಜಿಯೋದ ದೃಷ್ಟಿಕೋನವಾಗಿದೆ, ಇದರಿಂದಾಗಿ ಸರ್ವರೂ ಅಂತರ್ಗತ ಬೆಳವಣಿಗೆಯ ಫಲವನ್ನು ಆನಂದಿಸಬಹುದು ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.