ವಾಷಿಂಗ್ಟನ್: ಜೂನ್ 16 ರಿಂದ ಚೀನಾದಿಂದ ಪ್ರಯಾಣಿಕರ ವಿಮಾನಯಾನವನ್ನು ಸ್ಥಗಿತಗೊಳಿಸಲಾಗುವುದು ಎಂದು ಅಮೆರಿಕಾ ಘೋಷಣೆ ಮಾಡಿದೆ. ಅಮೆರಿಕದ ವಿಮಾನಯಾನ ಸಂಸ್ಥೆಗಳು ಚೀನಾಕ್ಕೆ ವಿಮಾನ ಹಾರಾಟವನ್ನು ಪುನರಾರಂಭಿಸಲು ಚೀನಾ ನಿರಾಕರಿಸಿದ್ದಕ್ಕೆ ಪ್ರತೀಕಾರವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಟ್ರಂಪ್ ಆಡಳಿತ ಹೇಳಿದೆ. ಈ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಂತಿಮ ಅನುಮೋದನೆ ಇನ್ನಷ್ಟೇ ಸಿಗಬೇಕಿದೆ.
ಯುಎಸ್ ಸಾರಿಗೆ ಇಲಾಖೆಯ ಆದೇಶವು ನಾಲ್ಕು ವಿಮಾನಯಾನ ಸಂಸ್ಥೆಗಳಿಗೆ ಅನ್ವಯಿಸುತ್ತದೆ – ಏರ್ ಚೀನಾ, ಚೀನಾ ಈಸ್ಟರ್ನ್ ಏರ್ಲೈನ್ಸ್, ಚೀನಾ ಸದರ್ನ್ ಏರ್ಲೈನ್ಸ್ ಮತ್ತು ಹೈನಾನ್ ಏರ್ಲೈನ್ಸ್. ಸಾಂಕ್ರಾಮಿಕ ರೋಗದ ಸಮಯದಲ್ಲೂ ಉಭಯ ದೇಶಗಳ ನಡುವೆ ಹಾರಾಟವನ್ನು ಮುಂದುವರೆಸಲಾಗಿತ್ತು, ಆದರೂ ಕಡಿಮೆ ಹಾರಾಟವಿತ್ತು.
ಕರೋನವೈರಸ್ ಸಾಂಕ್ರಾಮಿಕದ ಹಿನ್ನಲೆಯಲ್ಲಿ ಚೀನಾವು, ಅಮೆರಿಕಾದ ಯುನೈಟೆಡ್ ಏರ್ಲೈನ್ಸ್ ಮತ್ತು ಡೆಲ್ಟಾ ಏರ್ಲೈನ್ಗೆ ನಿರ್ಬಂಧವನ್ನು ವಿಧಿಸಿತ್ತು. ಇದೀಗ ಚೀನಾದ 4 ಏರ್ಲೈನ್ಗಳನ್ನು ನಿಷೇಧಿಸಿ ಅಮೆರಿಕಾ ಪ್ರತಿಕಾರ ತೀರಿಸಿಕೊಂಡಿದೆ.
ಉಭಯ ದೇಶಗಳ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಚೀನಾ ವಿಮಾನಗಳನ್ನು ನಿಷೇಧಿಸಲು ಅಮೆರಿಕಾ ಮುಂದಾಗಿರುವುದು ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸುವ ಸಾಧ್ಯತೆ ಇದೆ. ಡೊನಾಲ್ಡ್ ಟ್ರಂಪ್ ಈ ಆದೇಶವನ್ನು ಜೂನ್ 16ಕ್ಕೂ ಮೊದಲೇ ಜಾರಿಗೆ ತರಬಹುದು ಎಂದು ಇಲಾಖೆ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.