ನವದೆಹಲಿ: ಭಾರತದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ಜೀವನ ಚರಿತ್ರೆ ಬಿಡುಗಡೆಗೊಂಡಿದೆ. ಕೊರೋನಾ ಲಾಕ್ಡೌನ್ ಕಾರಣದಿಂದಾಗಿ ಈ ಪುಸ್ತಕದ ಬಿಡುಗಡೆಯನ್ನು ಆನ್ಲೈನ್ ಮೂಲಕ ಮಾಡಲಾಗಿದ್ದು, ನಿವೃತ್ತ ನ್ಯಾಯಮೂರ್ತಿ ಕೆ. ಜಿ. ಬಾಲಕೃಷ್ಣನ್ ಅವರು ಲೋಕಾರ್ಪಣೆ ಮಾಡಿದ್ದಾರೆ.
‘ನರೇಂದ್ರ ಮೋದಿ- ಹರ್ಬಿಂಜರ್ ಆಫ್ ಪ್ರಾಸ್ಪ್ಯಾರಿಟಿ ಆಂಡ್ ಅಪೋಸ್ಟಲ್ ಆಫ್ ವರ್ಲ್ಡ್ ಪೀಸ್ (ನರೇಂದ್ರ ಮೋದಿ- ಅಭಿವೃದ್ಧಿಯ ದೂತ ಮತ್ತು ವಿಶ್ವ ಶಾಂತಿಯ ಪ್ರಚಾರಕ) ಎಂಬ ಹೆಸರಿನ ನಮೋ ಆತ್ಮ ಚರಿತ್ರೆಯನ್ನು ಭಾರತೀಯ ಬಾರ್ ಕೌನ್ಸಿಲ್ ಅಧ್ಯಕ್ಷ ಅಗರ್ವಾಲ್ ಮತ್ತು ಅಮೆರಿಕನ್ ಲೇಖಕ, ಕವಿ ಎಲಿಜಬೆತ್ ಹೋರನ್ ಅವರು ರಚಿಸಿದ್ದಾರೆ.
ನರೇಂದ್ರ ದಾಮೋದರ್ ದಾಸ್ ಅವರ ಬಾಲ್ಯದಿಂದ ತೊಡಗಿದಂತೆ ಪ್ರಧಾನಿಯಾಗಿ ಆಡಳಿತ ನಡೆಸುತ್ತಿರುವಲ್ಲಿಯ ವರೆಗಿನ ವಿಚಾರಗಳ ಬಗೆಗೆ ಈ ಪುಸ್ತಕದಲ್ಲಿ ಬೆಳಕು ಚೆಲ್ಲಲಾಗಿದೆ. ಜೊತೆಗೆ ಮೋದಿ ಅವರ ಬಾಲ್ಯದ, ಮೊದಲಿನ ಜೀವನದ ಕೆಲವು ಚಿತ್ರಗಳನ್ನೂ ಈ ಆತ್ಮ ಚರಿತ್ರೆಯಲ್ಲಿ ಪ್ರಕಟಿಸಲಾಗಿದೆ.
ಇನ್ನು ಈ ಆತ್ಮ ಚರಿತ್ರೆ ಪುಸ್ತಕ ರೂಪದಲ್ಲಿ ಮತ್ತು ಇ- ಬಕ್, ಎರಡೂ ಮಾದರಿಯಲ್ಲಿಯೂ ಲಭ್ಯವಿದ್ದು, ಸುಮಾರು 20 ಭಾಷೆಗಳಲ್ಲಿ ಲಭ್ಯವಿದೆ. ವಿದೇಶೀ ಭಾಷೆಗಳಾದ ಇಂಗ್ಲಿಷ್, ಅರೇಬಿಕ್, ಡಚ್, ಫ್ರೆಂಚ್, ಜರ್ಮನ್, ಇಟಾಲಿಯನ್, ಜಪಾನೀಸ್, ರಷ್ಯನ್, ಸ್ಪಾನಿಷ್, ಮಾಂಡರಿನ್, ಭಾರತೀಯ ಭಾಷೆಗಳಾದ ಕನ್ನಡ, ಹಿಂದಿ, ಅಸ್ಸಾಂ, ಬಂಗಾಳಿ, ಗುಜರಾತಿ, ಮರಾಠಿ, ಪಂಜಾಬಿ, ತಮಿಳು, ತೆಲುಗು, ಉರ್ದು ಭಾಷೆಗಳಲ್ಲಿ ಈ ಕೃತಿ ಲಭ್ಯವಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.