ಮುಂಬೈ: ಸ್ಟ್ಯಾಂಡ್ ಅಪ್ ಕಾಮಿಡಿಗಳ ಮೂಲಕ ಹಿಂದೂ ಧರ್ಮ ಮತ್ತು ಹಿಂದೂಗಳ ಭಾವನೆಗಳಿಗೆ ಅವಹೇಳನ ಮಾಡುತ್ತಿದ್ದಾರೆ ಎಂದು ಆರೋಪಿಸಿ ಶೆಮರೂ ಎಂಟರ್ಟೈನ್ಮೆಂಟ್ ಲಿಮಿಟೆಡ್ ಮತ್ತು ನಟಿ ಸುರ್ಲಿನ್ ಕೌರ್ ವಿರುದ್ಧ ಇಸ್ಕಾನ್ ಮುಂಬೈ ಪೊಲೀಸರಿಗೆ ದೂರು ನೀಡಿದೆ. ಆನ್ಲೈನ್ ಮೂಲಕ ಆಯೋಜನೆ ಮಾಡುತ್ತಿರುವ ಸ್ಟ್ಯಾಂಡ್ ಅಪ್ ಕಾಮಿಡಿಗಳ ಮೂಲಕ ಹಿಂದೂ ಸಂಸ್ಕೃತಿಯ ಅವಹೇಳನ ಮಾಡುತ್ತಿರುವುದಾಗಿ ಇಸ್ಕಾನ್ ಸಂಸ್ಥೆ ಆರೋಪಿಸಿದೆ.
ಇಸ್ಕಾನ್ನ ಉಪಾಧ್ಯಕ್ಷ ಮತ್ತು ವಕ್ತಾರರೂ ಆಗಿರುವ ರಾಧಾರಮಣ್ ಅವರು ದೂರು ದಾಖಲಿಸಿದ್ದು, ಮನೋರಂಜನಾ ಸಂಸ್ಥೆ ಸಾಮಾಜಿಕ ಮಾಧ್ಯಮಗಳಾದ ಯೂಟ್ಯೂಬ್, ವೆಬ್ಸೈಟ್ಗಳಲ್ಲಿ ನಿರಂತರವಾಗಿ ಹಿಂದೂ ಧರ್ಮವನ್ನು ಅವಹೇಳನ ಮಾಡಲಾಗುತ್ತಿದೆ. ಹಿಂದೂಗಳ ಧಾರ್ಮಿಕ ಭಾವನೆಗೆ ಗಾಯವಾಗುವಂತಹ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆಯೂ ತಿಳಿಸಿದ್ದಾರೆ. ನಟಿ ಸುರ್ಲಿನ್ ಕೌರ್ ಬಳಕೆ ಮಾಡುತ್ತಿರುವ ಭಾಷೆಯೂ ಆಕ್ಷೇಪಾರ್ಹವಾಗಿದ್ದು, ಮಾನಹಾನಿ ಮಾಡುವಂತಹದ್ದಾಗಿದೆ ಎಂದೂ ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಈ ಕಾರ್ಯಕ್ರಮ ಸನಾತನ ಧರ್ಮ ಮತ್ತು ಭಕ್ತರ ಮನಸ್ಸಿಗೆ ನೋವನ್ನುಂಟುಮಾಡುತ್ತಿದೆ ಎಂದೂ ಅವರು ಹೇಳಿದ್ದಾರೆ.
ಮನೋರಂಜನೆಯ ಹೆಸರನ್ನಿಟ್ಟುಕೊಂಡು ಇತ್ತೀಚಿನ ದಿನಗಳಲ್ಲಿ ಹಿಂದೂ ಧರ್ಮದ ಅವಹೇಳನ, ಧಾರ್ಮಿಕ ನಂಬಿಕೆಗಳ ಮೇಲೆ ಗಾಯ ಮಾಡುವಂತಹ ಪ್ರಕ್ರಿಯೆಗಳು ನಡುದುಕೊಂಡು ಬರುತ್ತಿದೆ. ಕೆಲವು ಜನರು ಇದೇ ಕೆಲಸದಲ್ಲಿ ತೊಡಗಿಸಿಕೊಂಡಿರುವುದು ದುರಾದೃಷ್ಟ. ಹಿಂದೂ ದೇವತೆಗಳ ಅವಹೇಳನ, ಹಿಂದೂ ಧರ್ಮದ ಋಷಿ ಮುನಿಗಳಿಗೆ ಅವಮಾನ ಮಾಡುವುದನ್ನೇ ಕೆಲವು ಸಂಸ್ಥೆಗಳು ಮತ್ತು ಜನರು ಮಾಡಿಕೊಂಡು ಬರುತ್ತಿದ್ದಾರೆ. ಇದು ಅಪರಾಧವಾಗಿದ್ದು ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡುವ ದುಷ್ಟರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಹಿಂದೂ ಧರ್ಮದ ಜನರ ಸಹಿಷ್ಣುತಾ ಗುಣವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಟಿಕ್ಟಾಕ್ನಂತಹ ಹಲವಾರು ಅಪ್ಲಿಕೇಶನ್ಗಳನ್ನು ಬಳಸಿಕೊಂಡು ಜನರನ್ನು ದಾರಿ ತಪ್ಪಿಸುವ ನಿಟ್ಟಿನಲ್ಲಿಯೂ ಕೆಲವು ವಿಘ್ನ ಸಂತೋಷಿಗಳು ಕೆಲಸ ಮಾಡುತ್ತಿದ್ದಾರೆ. ಆ ಮೂಲಕ ಜನರನ್ನು ದಾರಿ ತಪ್ಪಿಸಿ, ದೇಶವನ್ನು ಸುಲಭವಾಗಿ ದೋಚುವ ಕೆಲಸವನ್ನು ಹಲವರು ಮಾಡುತ್ತಿರುವುದು ದುರಂತ ಎಂದು ಅವರು ತಿಳಿಸಿದ್ದಾರೆ.
ಇನ್ನು ದೂರಿಗೆ ಸಂಬಂಧಿಸಿದಂತೆ, ಸುರ್ಲಿನ್ ಕೌರ್ಳ ವಿಡಿಯೋವನ್ನು ಕೆಲವು ತಿಂಗಳುಗಳ ಹಿಂದೆಯೇ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ. ಆದರೆ ಇತ್ತೀಚೆಗೆ ಆ ವಿಡಿಯೋವನ್ನು ಶೇರ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಈ ವಿಡಿಯೋದಲ್ಲಿ ಕೌರ್ ಇಸ್ಕಾನ್ ಅನ್ನು ಹರಾಮಿ ಮತ್ತು ಅಶ್ಲೀಲ ಪ್ರಿಯ ಎಂದು ಹೇಳಿದ್ದಾರೆ. ಆ ಮೂಲಕ ಜನರ ಧಾರ್ಮಿಕ ನಂಬಿಕೆಗೆ ಘಾಸಿ ಮಾಡಿದ್ದಾಗಿಯೂ ಅವರು ತಿಳಿಸಿದ್ದಾರೆ.
Dear Sir @CPMumbaiPolice
Pls find our complaint agains Surleen Kaur & @ShemarooEnt for using inappropriate words for ISKCON, for our Rishis, Hindus.This is very unfortunate that there has been narrative building against the followers of Sanatan Dharma on different platforms pic.twitter.com/ldEDY47REY
— Radharamn Das (@RadharamnDas) May 28, 2020
ಹಿಂದಿನ ಕಾಲದ ಕಾಮ ಪುರಾಣವನ್ನು ಆಧಾರವಾಗಿಟ್ಟುಕೊಂಡು, ಋಷಿ ಮುನಿಗಳು ಕಾಮ ಪ್ರಚೋದಕ ಪಠ್ಯಗಳನ್ನು ಸಂಸ್ಕೃತದಲ್ಲಿ ಬರೆಯುತ್ತಿದ್ದರು ಎಂಬುದಾಗಿಯೂ ಹೇಳಿಕೆ ನೀಡಿದ್ದಾರೆ. ಖುಜರಾಹೋದಲ್ಲಿರುವ ಚಿತ್ರಕಲೆಗಳನ್ನು ನೋಡಿ ಅವೆಲ್ಲವುಗಳ ಕಾರಣದಿಂದಲೇ ಹಿಂದೂಗಳನ್ನು ಅಶ್ಲೀಲ ಪ್ರಿಯರು ಎಂಬುದಾಗಿಯೂ ಅವರು ಲೇವಡಿ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಆ ಮೂಲಕ ಭಾರತದ ಬಹುಸಂಖ್ಯಾತ ಹಿಂದೂ ಜನರ ಭಾವನೆಗಳ ಜೊತೆಗೆ ಸುರ್ಲಿನ್ ಆಟವಾಡಿದ್ದಾರೆ ಎಂಬುದಾಗಿಯೂ ದೂರಿನಲ್ಲಿ ಹೇಳಿದ್ದಾರೆ.
ಇನ್ನು ಈ ವಿಡಿಯೋ ವಿರುದ್ಧ ನೀಡಲಾದ ದೂರಿನಲ್ಲಿ, ಮನುಷ್ಯ ನಾಗರೀಕತೆಗಳನ್ನು ಹೇಗೆ ನಾಶಮಾಡುತ್ತಿದ್ದಾನೆ ಎಂಬುದರ ಕುರಿತಾಗಿಯೂ ತಿಳಿಸಲಾಗಿದೆ. ಸಮಾಜದಲ್ಲಿ ಮಾತೃತ್ವದ ಪಾತ್ರವನ್ನು ನಾಶ ಮಾಡುವ ಮೂಲಕ, ಶಿಕ್ಷಕರ, ಶಿಕ್ಷಣದ ಪಾತ್ರವನ್ನು ನಾಶ ಮಾಡುವ ಮೂಲಕ, ಸಂಸ್ಕೃತಿಗಳನ್ನು ನಾಶ ಮಾಡುವ ಮೂಲಕ ಯುವ ಜನಾಂಗವನ್ನು ದಾರಿ ತಪ್ಪಿಸುವ ಕಾರ್ಯವಾಗುತ್ತಿದೆ. ಇಂತಹ ಕೆಲಸದಲ್ಲಿ ಕೆಲವು ಮಂದಿ ಭಾಗಿಗಳಾಗುತ್ತಿದ್ದು, ಸುರ್ಲಿನ್ ಕೌರ್ ಮತ್ತು ಶೆಮರೂ ಸಂಸ್ಥೆಯೂ ಇದನ್ನು ಮಾಡುತ್ತಿರುವುದಾಗಿ ಅವರು ಆರೋಪಿಸಿದ್ದಾರೆ.
ಇನ್ನು ದೂರು ದಾಖಲಾಗುತ್ತಿದ್ದಂತೆ ಶೆಮರೂ ಸಂಸ್ಥೆ ವಿವಿಧ ಫ್ಲ್ಯಾಟ್ಫಾರ್ಮ್ಗಳಲ್ಲಿ ಪ್ರಕಟಿಸಿದ್ದ ವಿಡಿಯೋವನ್ನು ತೆಗೆದು ಹಾಕಿದೆ. ಬಳಿಕ ವಿಡಿಯೋ ಅವಹೇಳನಕಾರಿಯಾಗಿದೆ ಎಂದು ಕಂಡು ಬಂದ ಹಿನ್ನೆಲೆಯಲ್ಲಿ ಅದನ್ನು ಅಳಿಸಲಾಗಿದೆ ಎಂದಿರುವ ಸಂಸ್ಥೆ ಇಸ್ಕಾನ್ ಬಳಿ ಕ್ಷಮೆಯನ್ನೂ ಯಾಚಿಸಿ ಟ್ವೀಟ್ ಮಾಡಿದೆ. ಇದರಿಂದ ಹಿಂದೂ ಬಾಂಧವರಿಗೆ ನೋವಾಗಿದ್ದು ಮುಂದಿನ ದಿನಗಳಲ್ಲಿ ಇಂತಹ ಸೂಕ್ಷ್ಮ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯ ನಿರ್ವಹಿಸುವುದಾಗಿಯೂ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.