ನವದೆಹಲಿ: ಭಾರತೀಯ ಪುರಾತತ್ವ ಇಲಾಖೆಯ ಸಂರಕ್ಷಣಾ ಯೋಜನೆಯ ಸಂದರ್ಭದಲ್ಲಿ 9ನೇ ಯುಗದ ಏಕಶಿಲೆಯ ಮರಳುಗಲ್ಲು ಶಿವಲಿಂಗ ಪತ್ತೆಯಾಗಿದೆ.
ವಿಯೆಟ್ನಾಂನ ಮೈ ಸನ್ ಅಭಯಾರಣ್ಯದಲ್ಲಿರುವ ಚಾಮ್ ದೇವಾಲಯ ಸಂಕೀರ್ಣದಿಂದ ಈ ಶಿವಲಿಂಗವನ್ನು ಬುಧವಾರ ಉತ್ಖನನ ಮಾಡಲಾಯಿತು.
ಈ ಕುರಿತು ಎಎಸ್ಐಯನ್ನು ಶ್ಲಾಘಿಸಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು, ಈ ಸಂಶೋಧನೆಯು ವಿಶ್ವದಾದ್ಯಂತದ ಶಿವ ಭಕ್ತರ ನಡುವೆ “ನಾಗರಿಕ ಸಂಪರ್ಕ” ಇತ್ತು ಎಂಬುದನ್ನು ಪುನರುಚ್ಚರಿಸುತ್ತದೆ ಎಂದು ಹೇಳಿದರು. ಉತ್ಖನನದ ಫೋಟೋಗಳನ್ನು ಅವರು ಟ್ವೀಟ್ ಮಾಡಿದ್ದಾರೆ ಮತ್ತು 2011 ರಲ್ಲಿ ಅಭಯಾರಣ್ಯಕ್ಕೆ ಅವರು ನೀಡಿದ್ದ ಭೇಟಿಯನ್ನು ನೆನಪಿಸಿಕೊಂಡಿದ್ದಾರೆ.
Reaffirming a civilisational connect.
Monolithic sandstone Shiv Linga of 9th c CE is latest find in ongoing conservation project. Applaud @ASIGoI team for their work at Cham Temple Complex, My Son, #Vietnam. Warmly recall my visit there in 2011. pic.twitter.com/7FHDB6NAxz
— Dr. S. Jaishankar (@DrSJaishankar) May 27, 2020
ಮತ್ತೊಂದು ಬೃಹತ್ ಆವಿಷ್ಕಾರದಲ್ಲಿ, ಇತ್ತೀಚಿಗೆ ಐದು ಅಡಿ ಶಿವಲಿಂಗ, ಏಳು ಕಪ್ಪು ಶಿಲೆಯ ಕಂಬಗಳು, ಆರು ಕೆಂಪು ಶಿಲೆ ಕಂಬಗಳು ಮತ್ತು ದೇವಿ-ದೇವತೆಗಳ ಮುರಿದ ವಿಗ್ರಹಗಳು ಅಯೋಧ್ಯ ರಾಮ ಜನ್ಮಭೂಮಿ ದೇವಾಲಯದ ಸ್ಥಳದಲ್ಲಿ ಕಂಡುಬಂದಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.