ಮುಂಬಯಿ: 270 ಮಂದಿಯ ಸಾವಿಗೆ ಕಾರಣೀಕರ್ತನಾದ ಉಗ್ರ ಯಾಕುಬ್ ಮೆಮೋನ್ನನ್ನು ಗಲ್ಲಿಗೇರಿಸಲು ದೇಶದ ಅತ್ಯುನ್ನತ ನ್ಯಾಯಾಲಯವೇ ಸಮ್ಮತಿ ಸೂಚಿಸಿದೆ. ಮಹಾರಾಷ್ಟ್ರ ಸರ್ಕಾರ ಕೂಡ ಜುಲೈ 30ರಂದು ಆತನನ್ನು ನೇಣಿಗೇರಿಸಲು ಸರ್ವ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಆದರೆ ಕೆಲವರು ಮೆಮೋನ್ ಮರಣದಂಡನೆಗೆ ಧಾರ್ಮಿಕ ಬಣ್ಣ ಲೇಪಿಸುತ್ತಿದ್ದಾರೆ. ಆತ ಮುಸ್ಲಿಂ ಎಂಬ ಕಾರಣಕ್ಕಾಗಿಯೇ ಮರಣದಂಡನೆ ನೀಡಲಾಗುತ್ತಿದೆ ಎಂದು ವಾದ ಮಂಡನೆ ಮಾಡುತ್ತಿದ್ದಾರೆ.
ಆಲ್ ಇಂಡಿಯಾ ಮಜ್ಲೀಸ್-ಇ-ಇತ್ತೆಹದುಲ್ ಮುಸ್ಲಿಮೀನ್ನ ಮುಖಂಡ ಅಸಾವುದ್ದೀನ್ ಓವೈಸಿ ಮೆಮೋನ್ ಗಲ್ಲಿಗೆ ವಿರೋಧ ವ್ಯಕ್ತಪಡಿಸಿದ್ದಾನೆ. ಆತ ಮುಸ್ಲಿಂ ಎಂಬ ಕಾರಣಕ್ಕಾಗಿಯೇ ಗಲ್ಲಿಗೇರಿಸಲಾಗುತ್ತಿದೆ ಎಂದು ಆರೋಪಿಸುತ್ತಿದ್ದಾನೆ.
ರಾಜೀವ್ ಗಾಂಧೀ, ಬೀಂತ್ ಸಿಂಗ್ ಆರೋಪಿಗಳನ್ನು ಇನ್ನೂ ಗಲ್ಲಿಗೇರಿಸಿಲ್ಲ. ಅವರಿಗೆ ರಾಜಕೀಯ ಬೆಂಬಲವಿರುವ ಕಾರಣ ಮರಣದಂಡನೆ ನೀಡಲು ಸರ್ಕಾರ ಹಿಂಜರಿಯುತ್ತಿದೆ. ಮೆಮೋನ್ ಮುಸ್ಲಿಂ ಆತನಿಗೆ ಯಾವ ಪಕ್ಷದ ಬೆಂಬಲವೂ ಇಲ್ಲ. ಹೀಗಾಗಿ ಆತನನ್ನು ಸುಲಭವಾಗಿ ನೇಣಿಗೇರಿಸಲಾಗುತ್ತಿದೆ ಎಂದು ಆರೋಪಿಸಿದ್ದಾನೆ.
ಗುಪ್ತಚರ ಇಲಾಖೆಯ ಮಾಜಿ ಅಧಿಕಾರಿಯೊಬ್ಬರೂ ಮೆಮೋನ್ಗೆ ಗಲ್ಲು ನೀಡುವುದು ಸರಿಯಲ್ಲ ಎಂದಿದ್ದಾರೆ. ಇನ್ನೂ ಕೆಲ ಬುದ್ಧಿಜೀವಿಗಳೂ ಮೆಮೋನ್ ಮರಣದಂಡನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಅಮಾಯಕ 270 ಮಂದಿಯನ್ನು ಕೊಂದು, 700ಕ್ಕೂ ಅಧಿಕ ಮಂದಿಯನ್ನು ಘಾಸಿಗೊಳಿಸಿದ ಮೆಮೋನ್ಗೆ ಇಷ್ಟೊಂದು ಅನುಕಂಪ ತೋರಿಸುವವರೂ ನಮ್ಮ ದೇಶದಲ್ಲಿದ್ದಾರೆ ಎಂಬುದು ದುರಾದೃಷ್ಟ. ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರವಿರುವುದರಿಂದ ಮೆಮೋನ್ ಗಲ್ಲಿಗೆ ಧಾರ್ಮಿಕ ಬಣ್ಣ ನೀಡುವುದೂ ಇವರಿಗೆ ಇನ್ನೂ ಸುಲಭದ ಕೆಲಸವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.