ಹೈದರಾಬಾದ್: ಅತೀ ಶ್ರೀಮಂತ ದೇಗುಲ ಎಂಬ ಖ್ಯಾತಿಗೆ ಪಾತ್ರವಾಗಿರುವ ತಿರುಪತಿ ತಿರುಮಲ ದೇವಸ್ಥಾನದ ಆಸ್ತಿಗಳನ್ನು ಹರಾಜು ಹಾಕಿ ಹಣ ಸಂಗ್ರಹ ಮಾಡಲು ಟಿಟಿಡಿ ಮುಂದಾಗಿತ್ತು. ಇದಕ್ಕೆ ಹಿಂದೂಗಳಿಂದ ಭಾರಿ ವಿರೋಧಗಳು ವ್ಯಕ್ತವಾದವು ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಟಿಟಿಡಿ ತಡೆಹಿಡಿದಿದೆ.
ಆಂಧ್ರಪ್ರದೇಶ ಸರ್ಕಾರದ ಕಪಿಮುಷ್ಠಿಯಲ್ಲಿರುವ ಟಿಟಿಡಿ, ಭಕ್ತರು ಶ್ರದ್ಧಾಭಕ್ತಿಯಿಂದ ವೆಂಕಟೇಶ್ವರನಿಗೆ ಅರ್ಪಿಸಿದ ಆಸ್ತಿಗಳನ್ನು ಹಿಂದುಮುಂದು ಯೋಚಿಸದೆ ಮಾರಾಟಕ್ಕೆ ಮುಂದಾಗಿದ್ದು ಹಿಂದೂಗಳ ಭಾವನೆಯನ್ನು ಕೆರಳಿಸಿದೆ. ನಂಬಿಕೆಯನ್ನೇ ಮಾರಾಟ ಮಾಡಲು ಹೊರಟಿರುವ ಟಿಟಿಡಿ ಕ್ರಮ ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಟಿಟಿಡಿಯನ್ನು ಸರಕಾರದ ಕಪಿಮುಷ್ಟಿಯಿಂದ ಮುಕ್ತಗೊಳಿಸಿ ಹಿಂದೂಗಳ ನಿಯಂತ್ರಣಕ್ಕೆ ನೀಡಬೇಕು ಎಂಬ ಕೂಗು ಬಲವಾಗಿ ಕೇಳಿಬರುತ್ತಿದೆ.
ಟಿಟಿಡಿ ಆಸ್ತಿಗಳನ್ನು ಮಾರಾಟ ಮಾಡುವ ತನ್ನ ನಿರ್ಧಾರದಿಂದ ಹಿಂದೆ ಸರಿದಿದ್ದರೂ, ಹಿಂದೂಗಳ ಆಕ್ರೋಶ ಮಾತ್ರ ತಣ್ಣಗಾಗಿಲ್ಲ. ಹೀಗಾಗಿ ಆನ್ಲೈನ್ ಪಿಟಿಷನ್ ಆರಂಭಗೊಂಡಿದ್ದು, ಟಿಟಿಡಿ ಅನ್ನು ಆಂಧ್ರಪ್ರದೇಶ ಸರಕಾರದ ನಿಯಂತ್ರಣದಿಂದ ಹೊರತರಬೇಕು ಮತ್ತು ಅದನ್ನು ಹಿಂದುಗಳ ಕೈಗೆ ನೀಡಬೇಕು ಎಂಬ ಬೇಡಿಕೆಯನ್ನು ಇದು ಇಟ್ಟಿದೆ.
ಪ್ರಧಾನಮಂತ್ರಿ ಮತ್ತು ಕೇಂದ್ರ ಗೃಹಸಚಿವರನ್ನು ಉದ್ದೇಶಿಸಿ ಈ ಪಿಟಿಶನ್, “ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮಂಡಳಿಯು ಆಂಧ್ರಪ್ರದೇಶ ಸರ್ಕಾರದ ನಿಯಂತ್ರಣದಲ್ಲಿದೆ ಮತ್ತು ಇದರ ಮುಖ್ಯಸ್ಥರನ್ನು ರಾಜಕೀಯ ಪಕ್ಷದ ಅಧಿಕಾರದ ಮೂಲಕ ಆಯ್ಕೆ ಮಾಡಲಾಗುತ್ತದೆ. ನಾವು ಹಿಂದೂಗಳು ಟಿಟಿಡಿ ಅನ್ನು ಸರಕಾರದ ನಿಯಂತ್ರಣದಿಂದ ಹೊರತರಬೇಕು ಮತ್ತು ಹಿಂದೂಗಳ ಆಡಳಿತಕ್ಕೆ ನೀಡಬೇಕು ಎಂದು ಒತ್ತಾಯಿಸುತ್ತೇವೆ. ಭಾರತ ಸರಕಾರವು ದೇಶದಾದ್ಯಂತ ಎಲ್ಲಾ ಹಿಂದೂ ದೇಗುಲಗಳನ್ನು ಸರಕಾರದ ನಿಯಂತ್ರಣದಿಂದ ಹೊರತರುವ ಮಸೂದೆಯನ್ನು ಜಾರಿಗೊಳಿಸಬೇಕು ಮತ್ತು ಹಿಂದೂಗಳ ಹಕ್ಕುಗಳನ್ನು ರಕ್ಷಣೆ ಮಾಡಬೇಕು” ಎಂದಿದೆ.
ಹಿಂದೂಯೇತರ ಮತ್ತು ಸುಡೋ ಹಿಂದೂ ರಾಜಕಾರಣಿಗಳ ಕೈಯಲ್ಲಿ ಭಕ್ತರು ನೀಡಿದ ಕೋಟ್ಯಾಂತರ ಹಣಗಳು ದುರ್ಬಳಕೆಯಾಗುತ್ತಿದೆ. ಕ್ರಿಶ್ಚಿಯನ್ ಮತ್ತು ಮುಸ್ಲಿಂ ಧರ್ಮಗಳ ಧಾರ್ಮಿಕ ಸಂಸ್ಥೆಗಳು ಅವರ ಕೈಯಲ್ಲೇ ಇದೆ. ಹೀಗಿರುವಾಗ ಹಿಂದೂಗಳ ಧಾರ್ಮಿಕ ಸಂಸ್ಥೆಗಳು ಸರಕಾರದ ನಿಯಂತ್ರಣದಲ್ಲಿ ಯಾಕೆ ಇರಬೇಕು ಎಂದಿದೆ.
Hon Prime minister of India , Home minister of India: Tirumala Tirupati Devastanam should be taken out of Govt control and governed by Hindus only – Sign the Petition! https://t.co/5tAGySvVcu via @ChangeOrg_India. Folks pl sign! GOI should hand over our temples to Hindus
— Mohandas Pai (@TVMohandasPai) May 25, 2020
ಜಾತ್ಯತೀತತೆ ಹೆಸರಿನಲ್ಲಿ ಹಿಂದೂ ಭಾವನೆಗಳಿಗೆ ಧಕ್ಕೆ ತರಲಾಗುತ್ತಿದೆ ಮತ್ತು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಪಿಟಿಷನ್ ಹೇಳಿದೆ. ಮೇ 26 ಕ್ಕೆ ಈ ಪಿಟಿಶನ್ 200000 ಸಹಿಗಳನ್ನು ಪಡೆದುಕೊಂಡಿದೆ.
Source : www.organiser.org
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.