ಅಮೆರಿಕಾ ಮತ್ತು ಚೀನಾ ನಡುವಿನ ಆರ್ಥಿಕ ಸಮರ ಈ ಜಗತ್ತಿಗೆ ಹೊಸದೇನೂ ಅಲ್ಲ. ಎರಡು ಶತಮಾನಗಳ ಹಿಂದೆ ಅಮೆರಿಕಾ ಆಡಳಿತ ಹಲವಾರು ಷರತ್ತುಗಳನ್ನು ವಿಧಿಸಿತ್ತು ಮತ್ತು ಚೀನಾ ವಲಸಿಗರ ಮೇಲೆ ನಿರ್ಬಂಧವನ್ನು ವಿಧಿಸಿತ್ತು. 25 ವರ್ಷಗಳ ಹಿಂದಿಗಿಂತ ಚೀನಾ ಆರ್ಥಿಕತೆಯು 24 ಬಾರಿ ಏರಿಕೆಗೊಂಡಿದೆ, ಅಮೆರಿಕಾದ ನಂಬರ್ 1 ಸೂಪರ್ ಪವರ್ ಸ್ಥಾನಕ್ಕೆ ದೊಡ್ಡ ಬೆದರಿಕೆಯಾಗಿದೆ. ಎರಡು ವರ್ಷಗಳಿಂದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚೀನಾ ವಿರುದ್ಧ ಆಕ್ರಮಣಕಾರಿಯಾಗಿ ಮಾತನಾಡುತ್ತಿದ್ದಾರೆ. ಚೀನಾ ಸರಕುಗಳ ಮೇಲೆ ಅಮೆರಿಕಾದ ಸುಂಕ ವಿಧಿಸುವಿಕೆ ಮತ್ತು ಇತರ ವ್ಯಾಪಾರ ನಿರ್ಬಂಧಗಳ ಬಗ್ಗೆ ನಮಗೆ ತಿಳಿದೇ ಇದೆ. ಕೋವಿಡ್-19 ಸಾಂಕ್ರಾಮಿಕ ರೋಗ ಇದಕ್ಕೆ ಇನ್ನಷ್ಟು ತುಪ್ಪ ಸುರಿಯಲಿದೆ.
ಕಳೆದ 25 ವರ್ಷಗಳಲ್ಲಿ ಭಾರತ ತನ್ನನ್ನು ಬೆಳೆಯುತ್ತಿರುವ ಆರ್ಥಿಕ ಸ್ಥಾನದಲ್ಲಿ ಇರಿಸಿದೆ. ಭಾರತೀಯರು ತಮ್ಮ ಜೀವನ ಮಟ್ಟವನ್ನು ಸುಧಾರಿಸಿಕೊಂಡಿದ್ದಾರೆ. ಹಲವು ನಗರಗಳು ಸ್ಮಾರ್ಟ್ ಸಿಟಿಗಳಾಗಿ ಪರಿವರ್ತನೆಗೊಳ್ಳುತ್ತಿವೆ. ಭೂಮಿ, ಕಾರ್ಮಿಕರು, ಕೃಷಿ ಕೈಗಾರಿಕೆ ಮತ್ತು ಇತರ ಸುಧಾರಣೆಗಳು ಭಾರತವನ್ನು ಉದಯೋನ್ಮುಖ ವಿಶ್ವ ಆರ್ಥಿಕ ಶಕ್ತಿಯನ್ನಾಗಿ ರೂಪಿಸುತ್ತಿವೆ. ಚರ್ಚಾತ್ಮಕ ಭಾರತದಿಂದ ನಾವು ನಿಖರ ಭಾರತದತ್ತ ನಮ್ಮನ್ನು ಬದಲಾಯಿಸಿಕೊಂಡಿದ್ದೇವೆ. ಹಿಂದೆಂದಿಗಿಂತಲೂ ಹೆಚ್ಚು ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಆಡಳಿತದಲ್ಲಿ ನಾವು ನಂಬಿಕೆ ಇರಿಸಿದ್ದೇವೆ. ಸಮಾಜವಾಗಿ ಭಾರತವು ಅತ್ಯಂತ ತಳಮಟ್ಟದಿಂದಲೇ ಭಾರತೀಯ ಸಂಸ್ಕೃತಿ, ಮಾನವೀಯತೆ, ನಾಗರಿಕತೆ ಮತ್ತು ನೈತಿಕತೆಯನ್ನು ಜೀವಂತವಾಗಿಸಿದ್ದೇವೆ.
ನಾವು ಚೀನಾದಂತೆ ಅಲ್ಲ, ನಾವು ಸಂವಿಧಾನದಲ್ಲಿ ನಂಬಿಕೆ ಇರಿಸಿದ್ದೇವೆ. ಸರ್ವಾಧಿಕಾರಿ ನಿಯಮಗಳನ್ನು ನಾವು ಒಪ್ಪಿಕೊಳ್ಳುವುದಿಲ್ಲ. ಭಾರತೀಯ ಸಮಾಜವಾಗಿ ನಾವು ಮುಕ್ತ ಚಿಂತನೆ, ಅಭಿವ್ಯಕ್ತಿ ಸ್ವಾತಂತ್ರ್ಯ, ಮಂಡನೆಯ ಹಕ್ಕು ಇತ್ಯಾದಿ ಸಂವಿಧಾನ ನೀಡಿದ ಹಕ್ಕುಗಳನ್ನು ಶ್ಲಾಘಿಸುತ್ತೇವೆ ಮತ್ತು ಅನುಸರಿಸುತ್ತೇವೆ. ಜಗತ್ತಿಗೆ ಈಗ ಭಾರತದ ಬಗೆಗಿನ ಅಭಿಪ್ರಾಯವನ್ನು ಬದಲಾಯಿಸಿಕೊಳ್ಳಬೇಕಾಗಿದೆ, ಯಾಕೆಂದರೆ ಭಾರತ ಈಗ ಭೂತಕಾಲದ ವಿಷಯಗಳನ್ನು ಇರಿಸಿಕೊಳ್ಳುವ ಮೂಡ್ನಲ್ಲಿ ಇಲ್ಲ, ಭವಿಷ್ಯವನ್ನು ನಿಯಂತ್ರಿಸಿಕೊಳ್ಳುವ ಮನಸ್ಥಿತಿಯಲ್ಲೂ ಇಲ್ಲ. ಹಿಂದಿನ ಸಮಸ್ಯೆಗಳನ್ನು ಇಂದು ನಿವಾರಿಸಿಕೊಳ್ಳುವ ಪಥದಲ್ಲಿ ನಾವು ಸಾಗುತ್ತಿದ್ದೇವೆ.
ಭ್ರಷ್ಟಾಚಾರವನ್ನು ದೊಡ್ಡಮಟ್ಟದಲ್ಲಿ ನಿರ್ಮೂಲನೆ ಮಾಡುತ್ತಿದ್ದೇವೆ. ಅಪನಗದೀಕರಣ, ಡಿಜಿಟಲ್ ಇಂಡಿಯಾ, ಜನಧನ್ ಖಾತೆ, ಭೀಮ್, ಜಿಎಸ್ಟಿ ತೆರಿಗೆ ವ್ಯವಸ್ಥೆ ಇತ್ಯಾದಿ ಸುಧಾರಣೆಗಳು ಭಾರತದಲ್ಲಿ ವ್ಯವಹಾರ ಮತ್ತು ಆರ್ಥಿಕ ಜೀವನವನ್ನು ಹೆಚ್ಚು ಸುಲಲಿತಗೊಳಿಸಿದೆ. ಆನ್ಲೈನ್ ಅಥವಾ ನಗದುರಹಿತ ವರ್ಗಾವಣೆಗಳು ಭ್ರಷ್ಟಾಚಾರವನ್ನು, ಕಪ್ಪು ಹಣವನ್ನು ನಿರ್ಮೂಲನೆ ಮಾಡುತ್ತೇವೆ ಮತ್ತು ಸರಕಾರದ ಆದಾಯವನ್ನು ಬಹುಮಟ್ಟಿಗೆ ಏರಿಸುತ್ತಿವೆ. ಇದನ್ನು ಪುಷ್ಟೀಕರಿಸಲು ತೆರಿಗೆ ಸಂಗ್ರಹ ದತ್ತಾಂಶ ಸಾಕು. ಭಾರತ ವಿಶ್ವಬ್ಯಾಂಕಿನ ಸುಲಲಿತ ಉದ್ಯಮ ಸಮೀಕ್ಷೆಯಲ್ಲಿ ತನ್ನ ಶ್ರೇಯಾಂಕವನ್ನು ಸುಧಾರಿಸಿಕೊಂಡಿದೆ. 2018ರಲ್ಲಿ 77ನೇ ಸ್ಥಾನದಿಂದ ಪ್ರಸ್ತುತ 65ನೇ ಸ್ಥಾನಕ್ಕೆ ಜಿಗಿದಿದೆ.
ಭಾರತೀಯ ಆರ್ಥಿಕತೆಯಲ್ಲಿ ಮುಂಬರುವ ದಿನಗಳಲ್ಲಿ ದೊಡ್ಡಮಟ್ಟದ ನಾವಿನ್ಯ ಬದಲಾವಣೆಗಳು ಮತ್ತು ಸುಧಾರಣೆಗಳನ್ನು ನಾವು ಕಾಣಲಿದ್ದೇವೆ. ನಾವು ಹೊಸ ಮಾದರಿಯ ಸಂವಹನವನ್ನು ರಚಿಸುತ್ತಿದ್ದೇವೆ. ಆಧುನಿಕ ಮತ್ತು ನಾವಿನ್ಯ ತಂತ್ರಜ್ಞಾನವನ್ನು ಬಳಸುತ್ತಿದ್ದೇವೆ. ಮೊಬೈಲ್ ಮತ್ತು ಇಂಟರ್ನೆಟ್ ವ್ಯಾಪ್ತಿಯು ಭಾರತದ ಕುಗ್ರಾಮಗಳಿಗೂ ವ್ಯಾಪಿಸುತ್ತಿದೆ ಮತ್ತು ಎಲ್ಲರಿಗೂ ಸುಧಾರಿತ ಕನೆಕ್ಟಿವಿಟಿ ಸಿಗುತ್ತಿದೆ.
ಜಗತ್ತಿನಲ್ಲಿ ಅತಿ ಹೆಚ್ಚಿನ ರಸ್ತೆ ಸಂಪರ್ಕವನ್ನು ಭಾರತ ಹೊಂದಿದೆ. 5.89 ಮಿಲಿಯನ್ ಕಿಲೋಮೀಟರ್ ವ್ಯಾಪ್ತಿಯ ರಸ್ತೆ ನಮ್ಮದು. 2022ರ ವೇಳೆಗೆ ನಾವು 2 ಲಕ್ಷ ಕಿಲೋಮೀಟರ್ ಗುರಿಯನ್ನು ತಲುಪಲಿದ್ದೇವೆ. ಅಷ್ಟು ಮಾತ್ರವಲ್ಲ, ಜಲಮಾರ್ಗ, ಮೆಟ್ರೋ ಇತ್ಯಾದಿ ಸಾಂಪ್ರದಾಯಕವಲ್ಲದ ಸಾರಿಗೆ ವ್ಯವಸ್ಥೆಯನ್ನು ನಾವು ಹೊಂದುತ್ತಿದ್ದೇವೆ. ಮೆಗಾ ಯೋಜನೆಗಳಾದ ಸ್ಮಾರ್ಟ್ ಸಿಟಿ, ಡ್ಯಾಮ್, ಶಸ್ತ್ರಾಸ್ತ್ರ ಮತ್ತು ಮಿಲಿಟರಿ ಪರಿಕರಗಳ ತಯಾರಿಕೆ, ವಿಮಾನ ನಿಲ್ದಾಣ, ಸಾಗರ ಬಂದರು, ತೈಲ, ಸಾಂಪ್ರದಾಯಕ ವಲ್ಲದ ಇಂಧನ, ತಂತ್ರಜ್ಞಾನ ಸಂಶೋಧನೆ ಯೋಜನೆ, ವಿಜ್ಞಾನ, ಔಷಧಿ, ಮಾನವ ಜೀವನ ಅದರಲ್ಲೂ ಮುಖ್ಯವಾಗಿ ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ಮತ್ತು ಕಲ್ಯಾಣ ಹೀಗೆ ಹಲವಾರು ಮೇಘ ಯೋಜನೆಗಳಲ್ಲಿ ಹಣವನ್ನು ಹೂಡಿಕೆ ಮಾಡುತ್ತಿದ್ದೇವೆ.
ಕ್ಲೀನ್ ಇಂಡಿಯಾ, ಗ್ರೀನ್ ಇಂಡಿಯಾ ಎಂಬುದು ಈಗ 130 ಕೋಟಿ ಭಾರತೀಯರ ಘೋಷಣೆಯಾಗಿದೆ. ಭಾರತೀಯರು ಮಾತ್ರವಲ್ಲ ಇಡೀ ವಿಶ್ವವೇ ಸ್ವಚ್ಛ ಭಾರತದ ಅಭಿಯಾನಕ್ಕೆ ಶ್ಲಾಘನೆ ವ್ಯಕ್ತಪಡಿಸುತ್ತಿದೆ. ಭಾರತದ ಆರೋಗ್ಯ ಮಟ್ಟ ಮತ್ತು ಸ್ವಚ್ಛತೆಯ ಬಗೆಗಿನ ನಿರ್ಲಕ್ಷಕ್ಕೆ ಅಂತರರಾಷ್ಟ್ರೀಯ ಸಮುದಾಯವು ಖಂಡನೆಯನ್ನು ವ್ಯಕ್ತಪಡಿಸುತ್ತಿತ್ತು, ಆದರೆ ಭಾರತ ಈಗ ಸ್ವಚ್ಛತೆಯನ್ನು ಜನಾಂದೋಲನವಾಗಿ ಮಾಡಿಕೊಂಡಿದೆ. ಒಂದು ವೇಳೆ ಕಳೆದ ಆರು ವರ್ಷದಲ್ಲಿ ಎಲ್ಲಾ ಸುಧಾರಣೆಗಳು ನಡೆಯದೇ ಇರುತ್ತಿದ್ದರೆ, ಭಾರತವು ಸಾಂಕ್ರಾಮಿಕ ರೋಗವನ್ನು ಎದುರಿಸಲು ಸಾಧ್ಯವಾಗುತ್ತಿತ್ತೇ ? ಕಳೆದ ಆರು ವರ್ಷದಲ್ಲಿ ಮೋದಿ ಸರಕಾರವು ಭಾರತವನ್ನು ಹೇಗೆ ಬದಲಾಯಿಸಿತು ಎಂಬ ಬಗ್ಗೆ ಯಾರಾದರೂ ದೊಡ್ಡ ಥೀಸಿಸ್ ಅನ್ನೇ ಬರೆಯಬಹುದು. ಕೆಲವು ಸಂಸ್ಥೆಗಳು, ಮಾಧ್ಯಮಗಳು ವಿದೇಶಿ ಶಕ್ತಿಗಳ ಬೆಂಬಲದೊಂದಿಗೆ ಬದಲಾವಣೆಗಳನ್ನು ಟೀಕಿಸುತ್ತಿದೆ. ಅವರನ್ನು ಅವರ ಕೆಲಸ ಮಾಡಲು ಬಿಟ್ಟುಬಿಡೋಣ. ನಾವು ಗುರುಬಲ ದೇಶವಲ್ಲ ಎಂಬುದನ್ನು ಜಗತ್ತು ಈಗ ಅರ್ಥಮಾಡಿಕೊಂಡಿದೆ. ನಮ್ಮನ್ನು ನಾವು ಹೇಗೆ ಸಮರ್ಥಿಸಿಕೊಳ್ಳಬೇಕು ಮತ್ತು ಶತ್ರುಗಳೊಂದಿಗೆ ಹೇಗೆ ವ್ಯವಹರಿಸಬೇಕು ಎಂಬುದು ನಮಗೆ ತಿಳಿದಿದೆ. ರಾಷ್ಟ್ರೀಯ ಏಕತೆ ಮತ್ತು ಪ್ರಾದೇಶಿಕ ಸಾರ್ವಭೌಮತೆ ಭಾರತಕ್ಕೆ ಅತಿ ಮುಖ್ಯವಾದುದು. ನಮ್ಮ ರಕ್ಷಣಾ ಪಡೆಗಳು, ನಮ್ಮ ಸರಕಾರ ಮತ್ತು ಇತರ ಸಂಸ್ಥೆಗಳಿಗೆ ಅವುಗಳನ್ನು ಹೇಗೆ ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು ಎಂಬುದು ಗೊತ್ತಿದೆ. ಅಂತರಾಷ್ಟ್ರೀಯ ಹೂಡಿಕೆದಾರರು ಮತ್ತು ದೇಶಗಳು ಆಂತರಿಕ ಸ್ಥಿರತೆಯೊಂದಿಗೆ ಮೌಲ್ಯಗಳನ್ನು ಆದರಿಸಲಿವೆ.
ಭಾರತದಲ್ಲಿನ ಗುಣಾತ್ಮಕ ಮತ್ತು ಪ್ರಮಾಣಾತ್ಮಕ ಬದಲಾವಣೆಗಳು ವಿದೇಶಿ ಹೂಡಿಕೆದಾರರನ್ನು ಸೆಳೆಯುತ್ತಿವೆ. ಚೀನಾಗೆ ಪರ್ಯಾಯವಾಗಿ ಅವರು ಭಾರತವನ್ನು ನೋಡುತ್ತಿದ್ದಾರೆ. ಚೀನಾದಲ್ಲಿ ಹೂಡಿಕೆ ಮಾಡುವ ಮೂಲಕ ಅಪಾಯವನ್ನು ಎಳೆದುಕೊಳ್ಳುತ್ತಿದ್ದೇವೆ ಎಂಬುದನ್ನು ಹೆಚ್ಚಿನ ಸಂಸ್ಥೆಗಳು ಅರ್ಥಮಾಡಿಕೊಂಡಿದೆ. ಪ್ರಸ್ತುತ ಸಾಂಕ್ರಾಮಿಕ ರೋಗ ಭಯವನ್ನು ಹೆಚ್ಚು ಮಾಡಿದೆ. ಇತರ ಆಯ್ಕೆಗಳಿಗೆ ಅವಕಾಶ ನೀಡಲು ಅವುಗಳು ಬಯಸುತ್ತಿವೆ. ವಿಶ್ವ ಆರ್ಥಿಕತೆಯ ಉದಯಿಸುತ್ತಿರುವ ಭಾರತವು ಅವರಿಗೆ ಉತ್ತಮ ಆಯ್ಕೆಯಾಗಿದೆ.
ಮುಂಬರುವ ವರ್ಷಗಳಲ್ಲಿ ಭಾರತವು ವಿಶ್ವದ ಅತಿ ದೊಡ್ಡ ಜನಸಂಖ್ಯೆ ರಾಷ್ಟ್ರವಾಗಲಿದೆ. ಕೆಲವೇ ಸಮಯದಲ್ಲಿ ನಾವು ಜಗತ್ತಿನ ಮೂರನೇ ದೊಡ್ಡ ಆರ್ಥಿಕತೆಯಾಗಲಿದ್ದೇವೆ. ನವ ಭಾರತವಾಗಿ ನಾವು ಜಗತ್ತಿನ ಅತಿದೊಡ್ಡ ಪ್ರತಿಭೆಯನ್ನು ಹೊಂದಿದ್ದೇವೆ. ಇದು ಭಾರತದ ಹಿತಾಸಕ್ತಿ ಮಾತ್ರವಲ್ಲ, ಜಗತ್ತಿನ ಹೂಡಿಕೆಗೆ ಉತ್ತಮವಾಗಲಿದೆ.
ಚೀನಾದ ಕಮ್ಯುನಿಸ್ಟ್ ಪಕ್ಷದ ಮುಖವಾಣಿ ‘ದಿ ಗ್ಲೋಬಲ್ ಟೈಮ್ಸ್’ ಒಂದು ಲೇಖನವನ್ನು ಬರೆದಿದ್ದು, ಅದರಲ್ಲಿ ಭಾರತವು ಜಾಗತಿಕ ತಯಾರಕನಾಗಲು ಚೀನಾಗೆ ಸ್ಪರ್ಧೆಯೊಡ್ಡಲು ಸಾಧ್ಯವಿಲ್ಲ ಎಂಬುದನ್ನು ಉಲ್ಲೇಖಿಸಿದೆ. ಒಂದು ವೇಳೆ ಭಾರತವು ಚೀನಾ ಜೊತೆ ಸ್ಪರ್ಧಿಸಲು ಸಾಧ್ಯವಿಲ್ಲ ಎಂದು ದಿ ಗ್ಲೋಬಲ್ ಟೈಮ್ಸ್ ಅಂದುಕೊಂಡಿದ್ದೆ ಆದರೆ, ಅದು ಯಾಕೆ ಚೀನಾದಿಂದ ಹೊರಹೋಗಿ ಭಾರತದಲ್ಲಿ ಹೂಡಿಕೆ ಮಾಡಲು ಒಲವು ತೋರಿಸುತ್ತಿರುವ ಕಂಪನಿಗಳ ಬಗ್ಗೆ ಕೋಪ ವ್ಯಕ್ತಪಡಿಸಿದೆ? ಮತ್ತು ಯಾಕೆ ಅದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರ ಕಾರ್ಮಿಕ ಸುಧಾರಣೆಗಳ ಬಗ್ಗೆ ಮಾತನಾಡುತ್ತಿದೆ?
ನಾವು ಇಲ್ಲಿ ಅರ್ಥ ಮಾಡಿಕೊಳ್ಳಬೇಕಾದುದು ಏನೆಂದರೆ, ದಶಕಗಳ ಒಳಗೆ ಭಾರತವು ಸೂಪರ್ ಪವರ್ ಆಗಲಿದೆ ಎಂದು ಯಾರು ವಾದಿಸುತ್ತಿಲ್ಲ ಅಥವಾ ಚೀನಾದಿಂದ ಹೊರಹೋಗುತ್ತಿರುವ ಎಲ್ಲಾ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡುತ್ತವೆ ಎಂದು ವಾದಿಸುತ್ತಿಲ್ಲ. ಇದು ಜಿಯೋ ಪಾಲಿಟಿಕ್ಸ್. ಇಲ್ಲಿ ಪ್ರತಿಯೊಂದು ದೇಶಗಳು ಕೂಡ ಸ್ಪರ್ಧಿಗಳು, ಪರಿಸ್ಥಿತಿಯನ್ನು ತಮ್ಮ ಅವಕಾಶಕ್ಕೆ ಬಳಸಿಕೊಳ್ಳಲು ಹವಣಿಸುತ್ತಿವೆ. ಎಲ್ಲವೂ ಇಲ್ಲಿ ವ್ಯವಹಾರದ ಗೇಮ್. 1990 ರಿಂದ ಭಾರತ ಆರ್ಥಿಕ ಏರಿಕೆಯನ್ನು ಕಾಣುತ್ತಿದೆ. 21ನೇ ಶತಮಾನದ ಶ್ರೇಷ್ಠ ಪವರ್ ಅನಿಸುವ ಸಾಮರ್ಥ್ಯ ಭಾರತಕ್ಕೆ ಇದೆ. ಹೀಗಾಗಿ ಚೀನಾ ಮತ್ತು ಅಮೆರಿಕ ಭಾರತವನ್ನು ಕಡೆಗಣಿಸುವ ಹಾಗಿಲ್ಲ. ಭಾರತ ಮತ್ತು ಅಮೆರಿಕದ ಸಹಕಾರವೂ ಬಿಕ್ಕಟ್ಟನ್ನು ನಿರ್ವಹಿಸಲು ಅಂತರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವ, ಸವಾಲಿನ ಭವಿಷ್ಯವನ್ನು ಎದುರಿಸಲು ಅತ್ಯಂತ ಮಹತ್ವದ್ದು.
ಭಾರತಕ್ಕೆ ಆದರೆ ಯುವಜನತೆ ಅತಿದೊಡ್ಡ ಶಕ್ತಿಯಾಗಿದೆ. ಇರಾಕ್ ಮತ್ತು ಜಪಾನಿನಂತಹ ಮುಂದುವರಿದ ದೇಶಗಳು ವಯಸ್ಸಾದ ಜನಸಂಖ್ಯೆಯ ಸಮಸ್ಯೆಯನ್ನು ಎದುರಿಸುತ್ತಿದೆ. ಅಮೆರಿಕವು ಈ ಸಾಲಿನಲ್ಲಿದೆ. ಕೌಶಲ್ಯ ಭರಿತ ಯುವಜನತೆ ಭಾರತದ ಶಕ್ತಿಯಾಗಿದ್ದು, ಆರ್ಥಿಕ ಸೂಪರ್ ಪವರ್ ಆಗಲು ಪ್ರೇರಣೆಯೂ ಆಗಿದೆ.
ಭಾರತವು ಇನ್ನೂ ಸಾಕಷ್ಟು ಸುಧಾರಣೆಗಳನ್ನು ತರಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಪ್ರಾಕ್ಟಿಕಲ್ ಎಜುಕೇಶನ್, ಉದ್ಯಮದಲ್ಲಿ ಜಾಗತಿಕ ಮಾನದಂಡ, ತಂತ್ರಜ್ಞಾನಕ್ಕೆ ಹೆಚ್ಚಿನ ಸುಧಾರಿತ ಅವಕಾಶ, ವಿದೇಶಿ ಹೂಡಿಕೆ ಆಕರ್ಷಿಸಲು ಉದ್ಯಮ ಪರಿಸರದ ಸಾಂಸ್ಥೀಕರಣ ಇತ್ಯಾದಿಗಳಲ್ಲಿ ಭಾರತ ಇನ್ನೂ ಸಾಕಷ್ಟು ಸುಧಾರಣೆಗಳನ್ನು ಮಾಡಬೇಕಾಗಿದೆ. ಆದರೆ ಭಾರತವು ತನ್ನನ್ನು ತಾನು ಸುಧಾರಿಸಿಕೊಳ್ಳುತ್ತಿರುವ ರೀತಿ ನಿಜಕ್ಕೂ ಶ್ಲಾಘನಾರ್ಹ.
ಭಾರತ ತಂದಿರುವ ಎಲ್ಲಾ ಬದಲಾವಣೆಗಳು ಮತ್ತು ಸುಧಾರಣೆಗಳು ಸ್ವತಂತ್ರ ಮತ್ತು ಸಮಗ್ರವಾಗಿದೆ. ಪ್ರಸ್ತುತ ಲಾಕ್ಡೌನ್ ಕಾರಣದಿಂದಾಗಿ ಎಲ್ಲಾ ವಲಯದಲ್ಲೂ ಆರ್ಥಿಕತೆ ಹಿಂದುಳಿದಿದೆ. ಆದರೆ ಭಾರತದ ಆರ್ಥಿಕತೆಯು ಮತ್ತೆ ಪುಟಿದೇಳಲಿದೆ. ಶೇಕಡ 7 ರಿಂದ 8 ರಷ್ಟು ಪ್ರಗತಿಯನ್ನು ಸಾಧಿಸಲಿದೆ. ಜಾಗತಿಕ ಚಿಂತನೆ ಮತ್ತು ಸ್ಥಳೀಯ ಉತ್ಪಾದನೆ ನವ ಭಾರತದ ಹೊಸ ಮಂತ್ರವಾಗಲಿದೆ.
By Amita Apte (www.newsbharati.com)
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.