ನವದೆಹಲಿ: ಕೊರೋನಾ ಕಾರಣದಿಂದ ದೇಶವ್ಯಾಪಿ ಲಾಕ್ಡೌನ್ ಕ್ರಮ ಸದ್ಯ ನಾಲ್ಕನೇ ಹಂತಕ್ಕೆ ತಲುಪಿದೆ. ಲಾಕ್ಡೌನ್ ನಿಯಮ ಜಾರಿಯಾದಾಗಿನಿಂದ ದೇಶದ ಆರ್ಥಿಕತೆ ವಿಷಮ ಸ್ಥಿತಿಗೆ ಹೋಗಿದ್ದು, ಆರ್ಥಿಕತೆಯನ್ನು ಮೇಲೆತ್ತುವ ನಿಟ್ಟಿನಲ್ಲಿ ಕೆಲವು ಸಮಯೋಚಿತ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ನಾಲ್ಕನೇ ಹಂತದ ಲಾಕ್ಡೌನ್ ಕ್ರಮವನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ.
ಲಾಕ್ಡೌನ್ ನಾಲ್ಕನೇ ಹಂತದಲ್ಲಿ ಅಂತರರಾಜ್ಯ ಪ್ರಯಾಣಕ್ಕೆ ಇ-ಪಾಸ್ ಅಗತ್ಯವಾಗಿದ್ದು, ಇಂತಹ ಪಾಸ್ಗಳನ್ನು ಪಡೆದುಕೊಳ್ಳುಲು ರಾಜ್ಯ ಸರ್ಕಾರಗಳು ಸೂಚಿಸಿದ ವೆಬ್ಸೈಟ್ ಗೆ ಹೋಗಿ, ಅಲ್ಲಿ ಅಗತ್ಯ ದಾಖಲೆಗಳನ್ನು ತುಂಬುವ ಮೂಲಕ ಇ- ಪಾಸ್ ಅರ್ಜಿಯನ್ನು ಸಲ್ಲಿಸುವ ಅವಕಾಶವನ್ನು ನೀಡಲಾಗಿದೆ.
ಇ-ಪಾಸ್ಗಳನ್ನು ಪಡೆದುಕೊಳ್ಳಲು ಸರ್ಕಾರ ರಾಷ್ಟ್ರೀಯ ಮಾಹಿತಿ ಕೇಂದ್ರ ಅಭಿವೃದ್ಧಿ ಮಾಡಿರುವ Single point access website: http://serviceonline.gov.in/epass/ ಅನ್ನು ಆರಂಭ ಮಾಡಿದ್ದು, ಇದರಲ್ಲಿ ಅರ್ಜಿ ಸಲ್ಲಿಸುವಂತೆ ಸೂಚಿಸಿದೆ. ಇದರಲ್ಲಿ ದೆಹಲಿಯಂತಹ ಮಹಾ ನಗರಗಳನ್ನು ಹೊರತುಪಡಿಸಿ ದೇಶದ 17 ರಾಜ್ಯಗಳ ಸಂಚಾರಕ್ಕೆ ಪಾಸ್ ನೀಡುವ ವ್ಯವಸ್ಥೆಯನ್ನು ಮಾಡಲಾಗಿದೆ. ವ್ಯಕ್ತಿ ತಾನು ಹೋಗಬೇಕಾದ ನಗರದ ಹೆಸರನ್ನು ನಮೂದಿಸಿದಾಗ ಅದಕ್ಕೆ ಸಂಬಂಧಿಸಿದ ಹೈಪರ್ಲಿಂಕ್ ಅನ್ನು ಈ ವೆಬ್ಸೈಟ್ ನೀಡುತ್ತದೆ. ಅದನ್ನು ಆಯ್ಕೆ ಮಾಡುವ ಮೂಲಕ ಹೋಗಬೇಕಾದ ಪ್ರದೇಶಕ್ಕೆ ಅಧಿಕೃತ ಪಾಸ್ ಪಡೆಯುವ ವ್ಯವಸ್ಥೆಯನ್ನು ಮಾಡಲಾಗಿದೆ.
ಇನ್ನು ಇದರಲ್ಲಿ ವ್ಯಕ್ತಿ ನಮೂದು ಮಾಡಿದ ಮೊಬೈಲ್ ಸಂಖ್ಯೆಗೆ ವೆಬ್ಸೈಟ್ನಿಂದ ಒಟಿಪಿ ಬರುವಂತೆಯೂ ವ್ಯವಸ್ಥೆ ಮಾಡಲಾಗಿದೆ. ನಂತರದಲ್ಲಿ ಈ ವೆಬ್ಸೈಟ್ ಮೂಲಕವೇ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ನಮೂದು ಮಾಡುವ ಮೂಲಕ ಇ ಪಾಸ್ ಗೆ ಅರ್ಜಿ ಸಲ್ಲಿಸುವಂತೆ ಸರ್ಕಾರ ಮಾಹಿತಿ ನೀಡಿದೆ.
ಎಲ್ಲಾ ವಿವರಗಳ ಸಲ್ಲಿಕೆಯ ನಂತರದಲ್ಲಿ ಸಂಬಂಧಿತ ಇಲಾಖೆ ಅದನ್ನು ಪರಿಶೀಲನೆ ಮಾಡಿ ಪಾಸ್ ನೀಡುವುದು ಅಥವಾ ನೀಡದೇ ಇರುವುದರ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತದೆ. ಒಂದು ವೇಳೆ ಇ-ಪಾಸ್ ಪಡೆಯಲು ಅರ್ಹತೆ ಇದ್ದಲ್ಲಿ ನಮೂದಿಸಿರುವ ಮೊಬೈಲ್ ಸಂಖ್ಯೆಗೆ ಲಿಂಕ್ ಒಂದನ್ನು ಇಲಾಖೆ ಸಂದೇಶದ ಮೂಲಕ ರವಾನೆ ಮಾಡುತ್ತದೆ. ಈ ಲಿಂಕ್ ಬಳಸಿ ಇ-ಪಾಸ್ಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು ಎಂದು ಸಂಬಂಧಿಸಿದ ಮೂಲಗಳು ಮಾಹಿತಿ ನೀಡಿವೆ. ಇದನ್ನು ಬಳಕೆ ಮಾಡುವ ಮೂಲಕ ಅಂತರರಾಜ್ಯ ಸಂಚಾರ ಮಾಡಬಹುದು ಎಂದೂ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.