ನವದೆಹಲಿ: ಇತ್ತೀಚಿಗೆ ಕಾಶ್ಮೀರದ ಬಗ್ಗೆ #ಸೇವ್ ಕಾಶ್ಮೀರ್ ಹ್ಯಾಶ್ಟ್ಯಾಗ್ ಬಳಸಿ ಟ್ವೀಟ್ ಮಾಡಿದ ಪಾಕಿಸ್ತಾನದ ಕ್ರಿಕೆಟಿಗ ಶಾಹಿದ್ ಅಫ್ರಿದಿಯ ವಿರುದ್ಧ ಭಾರತೀಯ ಕ್ರಿಕೆಟಿಗರು ಕಿಡಿಕಾರಿದ್ದಾರೆ. ಒಬ್ಬರ ಮೇಲೆ ಒಬ್ಬರಂತೆ ಟ್ವೀಟ್ ಮಾಡಿ ಆಫ್ರಿದಿ ಬೆವರಿಳಿಸಿದ್ದಾರೆ.
ಶುಕ್ರವಾರ ಟ್ವೀಟ್ ಮಾಡಿದ್ದ ಶಾಯಿದ್ ಆಫ್ರಿದಿ, “ಕಾಶ್ಮೀರದ ಸಂಕಷ್ಟವನ್ನು ಅರ್ಥ ಮಾಡಿಕೊಳ್ಳಲು ಧಾರ್ಮಿಕ ನಂಬಿಕೆಯಲ್ಲ, ಒಳ್ಳೆಯ ಜಾಗದಲ್ಲಿ ಒಳ್ಳೆಯ ಮನಸ್ಸಿದ್ದರೆ ಸಾಕು” ಎಂದಿದ್ದರು. ಇದಕ್ಕೆ ಸೇವ್ ಕಾಶ್ಮೀರ ಎಂಬ ಹ್ಯಾಶ್ ಟ್ಯಾಗ್ ಬಳಸಿದ್ದರು. ಮೋದಿ ಬಗ್ಗೆಯೂ ಅಫ್ರಿದಿ ವಿಷ ಕಾರಿದ್ದಾರೆ.
ಆಫ್ರಿದಿ ಟ್ವೀಟ್ ಬಗ್ಗೆ ಭಾರತೀಯರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಭಾರತೀಯ ಕ್ರಿಕೆಟಿಗರು ನೇರವಾಗಿ ಆಫ್ರಿದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಟ್ವೀಟ್ ಮಾಡಿರುವ ಬಿಜೆಪಿ ಸಂಸದ ಮತ್ತು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್, “16 ವರ್ಷದ ಆಫ್ರಿದಿ ಹೇಳುತ್ತಾರೆ, ಪಾಕಿಸ್ತಾನಕ್ಕೆ 7 ಲಕ್ಷ ಸೇನೆಯ ಬಲ, 20 ಕೋಟಿ ಜನರ ಬೆಂಬಲವಿದೆ ಎಂದು. ಆದರೂ 70 ವರ್ಷಗಳಿಂದ ಕಾಶ್ಮೀರಕ್ಕಾಗಿ ಬೇಡುತ್ತಿದೆ. ಆಫ್ರಿದಿ, ಇಮ್ರಾನ್ ಮತ್ತು ಬಜ್ವರಂತಹ ಜೋಕರ್ ಗಳು ಪಾಕಿಸ್ತಾನವನ್ನು ಮೂರ್ಖನನ್ನಾಗಿಸಲು ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಿಷಕಾರು ತ್ತಲೇ ಇದ್ದಾರೆ. ಆದರೆ ಜಡ್ಜ್ಮೆಂಟ್ ಡೇ ತನಕ ಅವರು ಕಾಶ್ಮೀರವನ್ನು ಪಡೆಯಲಾರರು. ಬಾಂಗ್ಲಾದೇಶದ ಬಗ್ಗೆ ನೆನಪಿದೆಯೇ?” ಎಂದಿದ್ದಾರೆ.
Pak has 7 lakh force backed by 20 Cr ppl says 16 yr old man @SAfridiOfficial. Yet begging for Kashmir for 70 yrs. Jokers like Afridi, Imran & Bajwa can spew venom against India & PM @narendramodi ji to fool Pak ppl but won’t get Kashmir till judgment day! Remember Bangladesh?
— Gautam Gambhir (@GautamGambhir) May 17, 2020
ಇನ್ನೋರ್ವ ಕ್ರಿಕೆಟಿಗ ಸುರೇಶ್ ರೈನಾ ಅವರು ಕೂಡ ಆಫ್ರಿದಿ ವಿರುದ್ಧ ಕಿಡಿಕಾರಿದ್ದು, “ವಾಸ್ತವದಲ್ಲಿ ಇರಲು ಜನರು ಏನೇನು ಮಾಡಬೇಕು! ಅದೂ ಈಗಾಗಲೇ ವಿಫಲಗೊಂಡಿರುವ ದೇಶದಲ್ಲಿ. ದೇಶಕ್ಕೆ ಏನಾದರೂ ಪ್ರಯೋಜನವಾಗುವುದನ್ನು ಮಾಡಿ ಮತ್ತು ಕಾಶ್ಮೀರವನ್ನು ಬಿಟ್ಟು ಬಿಡಿ” ಎಂದಿದ್ದಾರೆ.
ಅಲ್ಲದೆ, ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿ ಮುಂದುವರೆಯಲಿದೆ ಎಂದಿದ್ದಾರೆ. “ನಾನೊಬ್ಬ ಹೆಮ್ಮೆಯ ಕಾಶ್ಮೀರಿಗ. ಅದು ಭಾರತದ ಭಾಗವಾಗಿ ಸದಾ ಇರಲಿದೆ. ಜೈ ಹಿಂದ್” ಎಂದಿದ್ದಾರೆ.
Gosh! What all a person must do to remain relevant! Even more so for a nation that is living on alms. So, better do something for your failed nation and leave #Kashmir alone. I am a proud Kashmiri and it is and will always remain an inalienable part of India. Jai Hind!🇮🇳❤️💪
— Suresh Raina🇮🇳 (@ImRaina) May 17, 2020
ಯುವರಾಜ್ ಸಿಂಗ್ ಕೂಡ ಆಫ್ರಿದಿ ವಿರುದ್ಧ ಕಿಡಿಕಾರಿದ್ದಾರೆ. “ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬಗೆಗಿನ ಆಫ್ರಿದಿ ಹೇಳಿಕೆ ಬೇಸರ ತರಿಸಿದೆ. ದೇಶಕ್ಕಾಗಿ ಆಡಿದ ಒಬ್ಬ ಜವಾಬ್ದಾರಿಯುತ ಭಾರತೀಯನಾಗಿ ಇಂತಹ ಹೇಳಿಕೆಗಳನ್ನು ನಾನು ಒಪ್ಪಿಕೊಳ್ಳುವುದಿಲ್ಲ. ಮಾನವೀಯತೆಗಾಗಿ ನಿಮ್ಮ ಕರೆಗೆ ನಾನು ಓಗೊಟ್ಟಿದ್ದೆ. ಆದರೆ ಮತ್ತೆಂದೂ ಈ ರೀತಿ ಮಾಡಲಾರೆ” ಎಂದಿದ್ದಾರೆ.
Really disappointed by @SAfridiOfficial‘s comments on our Hon’b PM @narendramodi ji. As a responsible Indian who has played for the country, I will never accept such words. I made an appeal on your behest for the sake of humanity. But never again.
Jai Hind 🇮🇳
— yuvraj singh (@YUVSTRONG12) May 17, 2020
ಹರ್ಭಜನ್ ಸಿಂಗ್ ಟ್ವೀಟ್ ಮಾಡಿ, “ನಾನು ಆಫ್ರಿದಿಯನ್ನು ಸ್ನೇಹಿತ ಎಂದು ಕರೆದ ಬಗ್ಗೆ ಬೇಸರವಾಗುತ್ತಿದೆ. ಸ್ನೇಹಿತ ಎಂದು ಕರೆಯಲು ಅರ್ಹತೆ ಇಲ್ಲದ ಮನುಷ್ಯ ಆತ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.