“ಮೇ ಆಜಾದ್ ಹು ಔರ್ ಆಜಾದ್ ಹಿ ರಹೂಂಗಾ” ಎಂಬ ಉದ್ಘೋಷದಿಂದ ಆಜಾದ್ ಎಂದು ನಾಮಾಂಕಿತರಾದವರು ಚಂದ್ರಶೇಖರ್ ಆಜಾದ್. 23 ಜುಲೈ 1906 ರಲ್ಲಿ ಜನಿಸಿದ ಚಂದ್ರಶೇಖರ ಆಜಾದ್ರವರು ಬಾದರ್ಕಾ ಉತ್ತರಪ್ರದೇಶ ಮಧ್ಯಪ್ರದೇಶದ ಜಬುವಾ ಜಿಲ್ಲೆಯಲ್ಲಿರುವ ಭಾವ್ರಾ ಎಂಬ ಹಳ್ಳಿಯಲ್ಲಿ ಜನಿಸಿದರು. ಪಂಡಿತ್ ಸೀತಾರಾಮ್ ತಿವಾರಿ ಮತ್ತು ಜಾಗ್ರಣೀ ದೇವಿಯವರ ಮಗನಾಗಿ ಜನಿಸಿದ ಆಜಾದ್ ಅವರ ಮೂಲ ಹೆಸರು ಚಂದ್ರಶೇಖರ್ ಸೀತಾರಾಮ್ ತಿವಾರಿ. ೧೯೧೯ರಲ್ಲಿ ಅಮೃತಸರದಲ್ಲಿ ನಡೆದ ಮಹಾರಕ್ತಪಾತವಾದ ಜಲಿಯನ್ವಾಲಾ ಬಾಗ್ ಹತ್ಯಾಕಾಂಡದ ಘಟನೆಯಿಂದ ಚಂದ್ರಶೇಖರ ಆಜಾದ್ರ ಮಾನಸ್ಸು ತೀವ್ರವಾಗಿ ನೊಂದಿತ್ತು .
ಗಾಂಧಿಜೀಯವರು 1921ರಲ್ಲಿ ಅಸಹಕಾರ ಚಳುವಳಿಯನ್ನು ಹಮ್ಮಿಕೊಂಡಾಗ, ನಡೆದ ಪ್ರತಿಭಟನೆಗಳಲ್ಲಿ ಅವರು ಸಕ್ರಿಯವಾಗಿ ತೊಡಗಿಕೊಂಡಿದ್ದರು. ಆ ಸಂದರ್ಭ ಅವರನ್ನು ಬಂಧಿಸಿ 15 ಚಾಟಿ ಏಟಿನ ಶಿಕ್ಷೆ ನೀಡಲಾಯಿತು. ಆ ಸಂದರ್ಭ ನಿನ್ನ ಹೆಸರೇನು ಎಂದು ಕೇಳಿದಾಗ ಆಜಾದ್ ಎಂದು ಹೇಳಿದರು ತದನಂತರ ಅವರು ತಾನು ಜೀವಂತ ವಿರುವ ತನಕ ಬ್ರಿಟಿಷರ ಕೈಗೆ ಸಿಗದಂತೆ ಪ್ರತಿಜ್ಞೆ ಮಾಡಿದರು. ಅಲ್ಲಿಂದ ಅವರು ಬ್ರಿಟಿಷರ ಕೈಗೆ ಸಿಕ್ಕಿದ್ದು ಹೆಣವಾಗಿ. ಅವರು ಅಕ್ಷರಹ ಅವರ ಪ್ರತಿಜ್ಞೆಯನ್ನು ನಿಜವಾಗಿಸಿದರು.
ಕ್ರಾಂತಿಕಾರಿ ಭರತ್ ಸಿಂಗ್ ಅವರ ಗುರುವಾಗಿ ಮಾರ್ಗದರ್ಶಕರಾಗಿ ಭಗತ್ರನ್ನು ಮುನ್ನಡೆಸಿದರು. ಆಜಾದ್ರವರು ಝಾನ್ಸಿಯನ್ನು ತಮ್ಮ ಕೇಂದ್ರವನ್ನಾಗಿ ಮಾಡಿಕೊಂಡಿದ್ದರು. ಅವರು ಝಾನ್ಸಿಯಿಂದ ೧೫ ಕಿ.ಮಿ ದೂರವಿರುವ ಆರ್ಚ್ಛಾ ಎಂಬ ಕಾಡನಲ್ಲಿ ತನ್ನ ಮತ್ತು ತನ್ನ ಸಹಪಾಠಿಗಳಿಗೆ ಗುರಿಯಿಟ್ಟು ಗುಂಡು ಹಾರಿಸುವುದನ್ನು ಅಭ್ಯಾಸ ಮಾಡಲು ಆ ಸ್ಥಳವನ್ನು ಆಯ್ಕೆಮಾಡಿದ್ದರು. ಅವರು ಹಾರಿಸಿದ ಗುಂಡು ಎಂದೂ ಗುರಿ ತಪ್ಪುತ್ತಿರಲಿಲ್ಲ ಎಂದು ಹೇಳಲಾಗುತ್ತದೆ.
27 ಫೆಬ್ರವರಿ 1931 ರಂದು ಆಲ್ಫ್ರೆಡ್ ಉದ್ಯಾನದಲ್ಲಿ ಅವರ ಸಹಪಾಠಿಯೊಂದಿಗೆ ತಿರುಗಾಡುತ್ತಿರುವಾಗ ಅವರ ಸ್ನೇಹಿತ ಪೊಲೀಸರಿಗೆ ಮಾಹಿತಿ ಮೇರೆಗೆ ಉದ್ಯಾನ ಸುತ್ತುವರೆದು ಅವರ ಮೇಲೆ ಧಾಳಿ ಮಾಡಲಾಯಿತು. ಆದರು ತನ್ನ ಪಿಸ್ತೂಲಿನಿಂದ ಆದಷ್ಟು ಪಾರಾಗಲೂ ಯತ್ನಿಸಿದರೂ ಆಗಲಿಲ್ಲ. ಕೊನೆಗೆ ಬ್ರಿಟಿಷರ ಕೈಗೆ ಸಿಕ್ಕಿಹಾಕಿಕೊಳ್ಳಬಾರದೆಂದೆ ತನ್ನ ಬಂದೂಕಿನಿಂದ ತನಗೆ ಗುಂಡು ಹೊಡೆದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.