ನವದೆಹಲಿ: ಕೊರೋನಾ ಎಂಬ ಮಹಾಮಾರಿಗೆ ತತ್ತರಿಸಿರುವ ದೇಶಕ್ಕೆ ಅಗತ್ಯ ವೈದ್ಯಕೀಯ ಸಲಕರಣೆಗಳನ್ನು ಸಾಗಿಸುವಲ್ಲಿ ಲೈಫ್ಲೈನ್ ಉಡಾನ್ ಅಡಿಯಲ್ಲಿ ವಿಮಾನಗಳು ಬಳಕೆಯಾಗುತ್ತಿವೆ. ಈ ವರೆಗೆ 465 ವಿಮಾನಗಳು ದೇಶದ ಕಠಿಣ ಪ್ರದೇಶಗಳಿಗೆ ತೆರಳಿ ಅಗತ್ಯ ವೈದ್ಯಕೀಯ ನೆರವನ್ನು ನೀಡುವಲ್ಲಿ ಸಹಾಯ ಮಾಡಿದ್ದು, ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಕೇಂದ್ರ ಸರ್ಕಾರದ ಜೊತೆಗೆ ಕೈ ಜೋಡಿಸಿದೆ.
ಈ ವರೆಗೆ ಲೈಫ್ಲೈನ್ ಉಡಾನ್ ಅಡಿಯಲ್ಲಿ ವಿಮಾನಗಳು ಸುಮಾರು 4 ಲಕ್ಷದ 51 ಸಾವಿರ ಕಿಲೋ ಮೀಟರ್ಗಳಷ್ಟು ಹಾರಾಟ ನಡೆಸಿದ್ದು, 835 ಟನ್ ಗಳಿಗಿಂತಲೂ ಅಧಿಕ ಪ್ರಮಾಣದ ವೈದ್ಯಕೀಯ ಸಲಕರಣೆಗಳನ್ನು ಸಾಗಿಸಿವೆ. ದೇಶದ ಗುಡ್ಡಗಾಡು ಪ್ರದೇಶ, ಕಣಿವೆ ಪ್ರದೇಶ, ದ್ವೀಪ ಪ್ರದೇಶಗಳಿಗೂ ಕೇಂದ್ರ ಸರ್ಕಾರ ಇದೇ ವಿಮಾನಗಳನ್ನು ಬಳಸಿ ಅಗತ್ಯ ನೆರವನ್ನು ರವಾನಿಸಿದೆ.
ಇನ್ನು ಕಣಿವೆ ರಾಜ್ಯ ಜಮ್ಮು ಕಾಶ್ಮೀರ, ಲಡಾಕ್ ಮೊದಲಾದೆಡೆಗಳಲ್ಲಿ ಔಷಧಗಳ ಸಾಗಾಟ, ರೋಗಿಗಳ ಸ್ಥಳಾಂತರಗಳಂತಹ ಸೇವೆಗಳಲ್ಲಿಯೂ ಇದೇ ವಿಮಾನಗಳು ಕಾರ್ಯ ನಿರ್ವಹಿಸುತ್ತಿವೆ. ದೇಶೀಯ ಏರ್ ಇಂಡಿಯಾ, ಸ್ಪೈಸ್ ಜೆಟ್, ಇಂಡಿಗೋ, ಬ್ಲೂ ಡಾರ್ಟ್ ವಿಮಾನಗಳು ಇಂತಹ ಮಾದರಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿವೆ. ಈ ವರೆಗೆ ಏರ್ ಇಂಡಿಯಾ 972 ಟನ್ ಪ್ರಮಾಣದ ಅಗತ್ಯ ಸಾಮಗ್ರಿಗಳನ್ನು ಲೈಫ್ಲೈನ್ ಉಡಾನ್ ಅಡಿಯಲ್ಲಿ ಸಾಗಿಸಿದೆ. ಆ ಮೂಲಕ ಬೃಹತ್ ಸಂಕಷ್ಟದಿಂದ ಭಾರತವನ್ನು ಕಾಪಾಡಲು ವಿಮಾನಯಾನ ಸಚಿವಾಲಯವೂ ಕೇಂದ್ರದ ಜೊತೆಗೂಡಿ ತನ್ನದೇ ಆದ ಸೇವೆ ಸಲ್ಲಿಸುವ ಮೂಲಕ ಹೆಸರು ಗಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.