ನಕಲಿ ಸುದ್ದಿಗಳು ಯಾವಾಗಲೂ ಆಘಾತ ಹಾಗೂ ಅಶ್ಚರ್ಯದಿಂದ ಕೂಡಿದ್ದು ಜನರ ಭಾವನೆಗಳೊಂದಿಗೆ ಆಟವಾಡುತ್ತವೆ. ಇದು ಜನರ ಮಧ್ಯೆ ತಪ್ಪು ಮಾಹಿತಿಯನ್ನು ಬಿತ್ತರಿಸುವುದಕ್ಕಾಗಿಯೇ ಇರುವ ವಿಧಾನವಾಗಿದ್ದು ಸಹಜವಾಗಿಯೇ ವೇಗವಾಗಿ ಹರಡುತ್ತದೆ. ಈ ಕೆಳಗಿನ ಚಿತ್ರವು ಸದ್ಯಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಸುತ್ತಾಡುತ್ತಿರುವ ಇಂತಹದ್ದೇ ಒಂದು ಪ್ರಕರಣದ್ದಾಗಿದೆ.
ಈ ಪೋಸ್ಟ್ ಏನು ಹೇಳುತ್ತದೆ? ಆರ್ಎಸ್ಎಸ್ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್ ಅವರ ಫೋಟೋ ಇರುವ ಈ ಸಾಮಾಜಿಕ ಜಾಲತಾಣದ ಪೋಸ್ಟ್ ಪ್ರಕಾರ, ಮನುಸ್ಮೃತಿಯನ್ನು ಮರಳಿ ತರಲು ಮೋಹನ್ ಭಾಗವತ್ ಅವರು ವಿವಿಧ ಜಾತಿಗಳ ಬಗ್ಗೆ ಪುಸ್ತಕಗಳನ್ನು ಬರೆಸುತ್ತಿದ್ದಾರೆ. ಹಾಗೆಯೇ ಉತ್ತರಪ್ರದೇಶದ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ ಜಾತಿವಾರು ತರಬೇತಿ ಪ್ರಾರಂಭಿಸಿದ್ದು, ಉದಾಹರಣೆಗೆ ಕ್ಷೌರಿಕ ಸಮಾಜಕ್ಕೆ ಸೇರಿದವರು ಕ್ಷೌರಿಕರಾಗಿಯೇ ಮುಂದುವರೆಯುತ್ತಾರೆ ಎಂದು ಹೇಳಿದೆ.
ಇದರ ನಿಜಾಂಶವೇನು? ವಾಸ್ತವಿಕವಾಗಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ಪೋಟೋ 2014 ರದ್ದು. ಚಿತ್ರದಲ್ಲಿರುವ ಪುಸ್ತಕಗಳನ್ನು ಬರೆದವರು ಬಿಜೆಪಿಯ ವಕ್ತಾರ ಡಾ. ಬಿಜಯ್ ಸೋನಕರ್ ಶಾಸ್ತ್ರಿ. ಇದನ್ನು ಅವರ ವೆಬ್ಸೈಟ್ನಲ್ಲಿ ಖಾತರಿ ಪಡಿಸಿಕೊಳ್ಳಬಹುದಾಗಿದೆ. ಈ ಕಾರ್ಯಕ್ರಮದಲ್ಲಿ ಮೋಹನ್ ಭಾಗವತ್ ಅವರ ಜೊತೆಯಲ್ಲಿ ವಿಶ್ವ ಹಿಂದು ಪರಿಷತ್ತಿನ ನಾಯಕರಾದ ದಿ. ಅಶೋಕ ಸಿಂಘಲ್, ಸ್ಮೃತಿ ಇರಾನಿ, ಪ್ರಕಾಶ ಜಾವಡೇಕರ್ ಸೇರಿದಂತೆ ಅನೇಕ ರಾಜಕೀಯ ನಾಯಕರು ಉಪಸ್ಥಿತರಿದ್ದರು.
ಡಾ. ಬಿಜಯ್ ಸೋನಕರ್ ಶಾಸ್ತ್ರಿ ಅವರು 80 ರ ದಶಕದಿಂದ ಸಾಮಾಜಿಕ ರಾಜಕೀಯ ಕ್ಷೇತ್ರದಲ್ಲಿ ಸಕ್ರೀಯರಾಗಿದ್ದಾರೆ. ಅವರು ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಇವುಗಳಲ್ಲಿ ಹೆಚ್ಚಿನವು ದಲಿತ ಆಂದೋಲನ ಹಾಗೂ ದಲಿತ ಹಕ್ಕುಗಳ ಕುರಿತಾಗಿ ಇವೆ. ಅವರು ‘ದಲಿತ ಆಂದೋಲನ’ ಎಂಬ ಮ್ಯಾಗಝಿನ್ನ ಮುಖ್ಯ ಸಂಪಾದಕರಾಗಿಯೂ ಕೂಡ ಕಾರ್ಯನಿರ್ವಹಿಸುತ್ತಿದ್ದಾರೆ. ಇಂತಹ ಹಿನ್ನೆಲೆ ಹಾಗೂ ಸ್ಥಾನಮಾನ ಹೊಂದಿರುವ ವ್ಯಕ್ತಿ ಮೋಹನ್ ಭಾಗವತ್ ಅವರ ಸೂಚನೆ ಮೇರೆಗೆ ಪುಸ್ತಕಗಳನ್ನು ಬರೆಯುವುದು ಅಸಂಭವವೆನಿಸುತ್ತದೆ.
हिंदू समाज को एकजुट करने में जुटा संघ परिवार
नई दिल्ली, ब्यूरो। लोकसभा चुनाव में मिली ऐतिहासिक जीत के बाद संघ परिवार हिंदुओं को एकजुट करने की कोशिशों में जुट गया है। संघ परिवार की कोशिश 15 फीसदी दलितों को मुख्यधारा से जोड़ने की है। भाजपा प्रवक्ता डा.
ನಯಿ ದುನಿಯಾದಲ್ಲಿ ಪ್ರಕಟವಾದ ಸುದ್ದಿ
ಹಾಗಾದರೆ ಈ ಪುಸ್ತಕಗಳು ಏನು ಹೇಳುತ್ತವೆ? ಡಾ. ಬಿಜಯ ಸೋನಕರ ಶಾಸ್ತ್ರಿ ಅವರು ಖಟಿಕ್, ವಾಲ್ಮೀಕಿ, ಚಮ್ಮಾರ ಸಮುದಾಯಗಳ ಉಗಮಕ್ಕೆ ಐತಿಹಾಸಿಕ ಕಾರಣಗಳು ಮತ್ತು ಸಮಾಜದಲ್ಲಿ ಅವರ ಪ್ರಸ್ತುತ ಅವರ ಸ್ಥಿತಿಗತಿಗಳ ಬಗ್ಗೆ ವಿಶ್ಲೇಷಿಸಿದ್ದಾರೆ. ಈ ಮೂರು ಜಾತಿಗಳು ವಾಸ್ತವವಾಗಿ ಕ್ಷತ್ರಿಯ ಮತ್ತು ಬ್ರಾಹ್ಮಣರಿಂದ ಬಂದವರು ಎಂದು ಅವರು ತಮ್ಮ ಪುಸ್ತಕಗಳಲ್ಲಿ ಬರೆಯುತ್ತಾರೆ. ಅವರು ಯೋಧರು ಮತ್ತು ಹೆಮ್ಮೆಯ ಹಿಂದೂಗಳಾಗಿದ್ದವರು. ವಿದೇಶಿ ಆಕ್ರಮಣಕಾರರ ಎದುರು ತಲೆತಗ್ಗಿಸಲು ಅವರು ನಿರಾಕರಿಸಿದರು. ಈ ಕಾರಣಕ್ಕಾಗಿ, ಆಕ್ರಮಣಕಾರರಿಂದ ಅವರಿಗೆ ಶಿಕ್ಷೆ ನೀಡಲಾಗಿ ಸಮಾಜದಲ್ಲಿ ಕೀಳು ಎಂದು ಭಾವಿಸಲ್ಪಟ್ಟ ಕೆಲಸಗಳನ್ನು ಮಾಡಲು ಒತ್ತಾಯಿಸಲಾಯಿತು.
ಡಾ. ಮೋಹನ್ ಭಾಗವತ್ ಅವರು ಹೇಳಿದ್ದೇನು? ದಲಿತರಿಗೆ ಸಮಾಜದಲ್ಲಿ ಗೌರವಯುತ ಸ್ಥಾನಮಾನ ದೊರಕಬೇಕು, ಇದು ಅವರ ಹಕ್ಕು. ಅವರು ಕೂಡ ಹಿಂದು ಬಾಂಧವರೇ ಆಗಿರಿವ ಕಾರಣ ಸಮಾಜದ ಉನ್ನತ ಜಾತಿಗೆ ಸೇರಿದವರು ಅವರಿಗೆ ಸಹಾಯ ಮಾಡಬೇಕು. ಸಂಘ ದಲಿತರಿಗೆ ಮೀಸಲಾತಿ ನೀಡುವ ಪರವಾಗಿಯೇ ಇದೆ ಎಂದು ಪುನರುಚ್ಚರಿಸಿದರು. ದಲಿತರು ಸಾವಿರಾರು ವರ್ಷಗಳಿಂದ ಕಷ್ಟಗಳನ್ನು ಅನುಭವಿಸಿದ್ದಾರೆ. ಅವರಿಗೆ ಸಹಾಯ ಮಾಡಬೇಕಾದ ಸಂದರ್ಭದಲ್ಲಿ ನಾವು ಕಷ್ಟಗಳನ್ನು ಎದುರಿಸಬೇಕಾದಲ್ಲಿ ಅದನ್ನು ಸಂತೋಷದಿಂದ ಸ್ವೀಕರಿಸಿ ಸಹಾಯ ಮಾಡಬೇಕು.
ತೀರ್ಮಾನ: ಎಲ್ಲಾ ಸಂಗತಿಗಳನ್ನು ಗಮನಿಸಿದರೆ, ಈ ಸಾಮಾಜಿಕ ಮಾಧ್ಯಮದಲ್ಲಿನ ಪೋಸ್ಟ್ ನಕಲಿ ಎಂಬುದು ಬಹಳ ಸ್ಪಷ್ಟವಾಗಿದೆ. ಮೋಹನ್ ಭಾಗವತ್ ಯಾರಿಂದಲೂ ಪುಸ್ತಕಗಳನ್ನು ಬರೆಸುತ್ತಿಲ್ಲಾ ಮತ್ತು ಮನು ಸ್ಮೃತಿಯನ್ನು ಮರಳಿ ತರಲು ಅವರು ಬಯಸುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಹಿಂದೂಗಳ ನಡುವೆ ಬಿರುಕು ಮೂಡಿಸುವ ದುರುದ್ದೇಶದಿಂದ ಈ ರೀತಿಯ ಪೋಸ್ಟ್ನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಬರೆಯಲಾಗಿದೆ. ಯಾರಿಗೂ ಕೂಡ ಪತ್ತೆ ಹಚ್ಚಲು ಸಾಧ್ಯವಿಲ್ಲ ಎಂದು ಜಾಣತನದಿಂದ ಅವರು 2014 ರ ಒಂದು ಪೋಟೋವನ್ನು ಬಳಸಿದ್ದಾರೆ. ಜನರು ಇಂತಹ ದುರುದ್ದೇಶಪೂರಿತ ಪೋಸ್ಟ್ಗಳಿಗೆ ಬಲಿ ಬೀಳಬಾರದು ಎಂದು ಕೇಳಿಕೊಳ್ಳುತ್ತೇವೆ.
ಮೂಲ : ಅಮೋಲ್ ಪವಾರ್
ಕನ್ನಡಕ್ಕೆ : ಅಮೃತ್ ಜೋಶಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.