ಕೊಡರ್ಮ: ಜಾರ್ಖಾಂಡ್ ಶಿಕ್ಷಣ ಸಚಿವೆ ನೀರಾ ಯಾದವ್ ಅವರು ಜೀವಂತವಾಗಿರುವ ಮಾಜಿ ರಾಷ್ಟ್ರಪತಿಯವರ ಭಾವಚಿತ್ರಕ್ಕೆ ಕುಂಕುಮ ಹಾಕಿ, ಹೂವಿನ ಹಾರ ಹಾಕಿ ಶ್ರದ್ಧಾಂಜಲಿಯನ್ನು ಸರ್ಮಪಿಸಿದ್ದಾರೆ.
ಕೊಡರ್ಮದಲ್ಲಿ ನಡೆದ ಸಮಾರಂಭವೊಂದರಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಅದರಲ್ಲೂ ಶಿಕ್ಷಣ ಸಚಿವೆಯಾಗಿ ಅವರು ಈ ರೀತಿಯ ವರ್ತನೆ ತೋರಿಸಿದ್ದು ಎಲ್ಲರಲ್ಲೂ ಆಶ್ಚರ್ಯ ಉಂಟು ಮಾಡಿದೆ.
ಈ ಸಂದರ್ಭದಲ್ಲಿ ಶಾಸಕರು, ಆಲೆಯ ಶಿಕ್ಷಕರು ಸೇರಿದಂತೆ ಹಲವಾರು ಮಂದಿ ಸ್ಥಳದಲ್ಲಿದ್ದರೂ ಯಾರೊಬ್ಬರೂ ಈ ರೀತಿ ಮಾಡಬೇಡಿ ಎಂದು ಅವರಿಗೆ ಹೇಳದೇ ಇರುವುದು ಇವರ ಬುದ್ಧಿಗೇಡಿ ತನವನ್ನು ತೋರಿಸಿದೆ.
ಆದರೆ ಘಟನೆ ಬಗ್ಗೆ ಸಮಜಾಯಿಷಿ ಕೊಟ್ಟಿರುವ ಸಚಿವೆ, ಗಣ್ಯರನ್ನು ಹೂವಿನ ಹಾರ ಹಾಕಿ ಗೌರವಿಸುವುದರಲಿ ಯಾವುದೇ ತಪ್ಪಿಲ್ಲ, ಕಲಾಂ ಜೀವಂತವಿದ್ದರೆ ಎಂದು ತಿಳಿದೇ ಈ ರೀತಿ ಮಾಡುವುದಾಗಿ ಹೇಳಿಕೊಂಡಿದ್ದಾರೆ.
ಆದರೆ ಹಿಂದೂ ಸಂಪ್ರದಾಯದಲ್ಲಿ ಅಗಲಿದವರ ಭಾವಚಿತ್ರಕ್ಕೆ ಮಾತ್ರ ಹೂವಿನ ಹಾರ ಹಾಕಿ ಕುಂಕುಮ ಹಚ್ಚಲಾಗುತ್ತದೆ. ಆದರೂ ಸಚಿವೆ ಈ ರೀತಿಯ ವರ್ತನೆ ತೋರಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.