ನವದೆಹಲಿ: ಸಿಪಿಐ(ಎಂ) ಅಂತಾರಾಷ್ಟ್ರೀಯ ವಿಷಯಗಳಲ್ಲಿ ತನ್ನ ದ್ವಂದ್ವ ನೀತಿಯನ್ನು ಮತ್ತೊಮ್ಮೆ ಬಹಿರಂಗಪಡಿಸಿದೆ. ಹಮಾಸ್ ಪರವಾಗಿ ಕೇರಳದಲ್ಲಿ ಸಭೆಗಳು ನಡೆದಾಗ ಮೌನವಿದ್ದ ಎಡಪಂಥೀಯ ನಾಯಕರು ಈಗ ಇಸ್ರೇಲಿ ಹಣಕಾಸು ಸಚಿವ ಬೆಜಲೆಲ್ ಸ್ಮೋಟ್ರಿಚ್ ಅವರ ಭಾರತ ಭೇಟಿಯನ್ನು ಖಂಡಿಸಲು ಧಾವಿಸಿದ್ದಾರೆ.
ಭಾರತದ ಸ್ವಂತ ಕಾಳಜಿಗಳಿಗಿಂತ ವಿದೇಶಿ ಸಂಘರ್ಷಗಳಿಗೆ ಆದ್ಯತೆ ನೀಡುತ್ತಿರುವುದಕ್ಕಾಗಿ ಬಾಂಬೆ ಹೈಕೋರ್ಟ್ ಇತ್ತೀಚೆಗೆ ಸಿಪಿಐ(ಎಂ) ಅನ್ನು ತರಾಟೆಗೆ ತೆಗೆದುಕೊಂಡ ನಂತರವೂ ತಮ್ಮ ಚಾಳಿಯನ್ನು ಇವರು ಮುಂದುವರೆಸಿದ್ದಾರೆ. ಗಾಜಾ ಬಗ್ಗೆ ಕಾಳಜಿ ಹೊಂದುವ ಬದಲು “ದೇಶಭಕ್ತರಾಗಿರಿ” ಮತ್ತು ದೇಶೀಯ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿ ಎಂದು ನ್ಯಾಯಾಲಯ ಹೇಳಿದರೂ ವಿಚಲಿತರಾಗದ ಸಿಪಿಐ(ಎಂ) ಪೊಲಿಟ್ ಬ್ಯೂರೋ ಮತ್ತೊಮ್ಮೆ ದೇಶದ ಹಿತಾಸಕ್ತಿಗಳನ್ನು ಬದಿಗಿಟ್ಟು ಇಸ್ರೇಲ್ ಮೇಲೆ ದ್ವೇಷ ಕಾರುವ ಕೆಲ ಮಾಡುತ್ತಿದೆ.
ಸೆಪ್ಟೆಂಬರ್ 9 ರಂದು ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ, ಸಿಪಿಐ(ಎಂ) ಪೊಲಿಟ್ ಬ್ಯೂರೋ ಮೋದಿ ಸರ್ಕಾರ ಇಸ್ರೇಲ್ ಜೊತೆ ದ್ವಿಪಕ್ಷೀಯ ಹೂಡಿಕೆ ಒಪ್ಪಂದಕ್ಕೆ ಸಹಿ ಹಾಕಿದ್ದನ್ನು ಟೀಕಿಸಿದೆ. ಪಕ್ಷವು ಇಸ್ರೇಲ್ ಸಚಿವ ಸ್ಮೋಟ್ರಿಚ್ ಅವರನ್ನು “ಬಲಪಂಥೀಯ ಜನಾಂಗೀಯ ಪಕ್ಷ”ಕ್ಕೆ ಸೇರಿದವ ಎಂದು ಹಣೆಪಟ್ಟಿ ಕಟ್ಟಿದೆ ಮತ್ತು ಗಾಜಾದಲ್ಲಿ ಪ್ಯಾಲೆಸ್ಟೀನಿಯನ್ನರ ಬಲವಂತದ ಸ್ಥಳಾಂತರ ಮತ್ತು ಪಶ್ಚಿಮ ದಂಡೆಯ ಸ್ವಾಧೀನದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಆರೋಪಿಸಿದೆ.
ಸ್ಮೋಟ್ರಿಚ್ ಅವರ “ವಿಸ್ತರಣಾವಾದಿ” ನೀತಿಗಳಿಂದಾಗಿ ಯುಕೆ, ಕೆನಡಾ, ಆಸ್ಟ್ರೇಲಿಯಾ, ನಾರ್ವೆ, ನೆದರ್ಲ್ಯಾಂಡ್ಸ್, ಸ್ಲೊವೇನಿಯಾ ಮತ್ತು ನ್ಯೂಜಿಲೆಂಡ್ ಸೇರಿದಂತೆ ಹಲವಾರು ದೇಶಗಳು ಅವರನ್ನು ನಿಷೇಧಿಸಿವೆ ಎಂದು ಸಿಪಿಐ(ಎಂ) ಹೇಳಿದೆ. ಭಾರತ ಅವರಿಗೆ ಆತಿಥ್ಯ ವಹಿಸಿರುವುದು “ನಾಚಿಕೆಗೇಡಿನ” ಸಂಗತಿ ಎಂದು ಬಣ್ಣಿಸಿರುವ ಪಕ್ಷವು, ಮೋದಿ ಸರ್ಕಾರವು ನೆತನ್ಯಾಹು ಆಡಳಿತದೊಂದಿಗೆ “ಆಳವಾದ ಮತ್ತು ಬೇರೂರಿರುವ ಸಂಬಂಧಗಳನ್ನು” ನಿರ್ಮಿಸಿದೆ ಮತ್ತು “ಗಾಜಾದಲ್ಲಿ ನಡೆಯುತ್ತಿರುವ ನರಮೇಧದಲ್ಲಿ ಭಾಗಿಯಾಗಿದೆ” ಎಂದು ಆರೋಪಿಸಿದೆ.
ತಕ್ಷಣದ ಕದನ ವಿರಾಮ ಘೋಷಿಸುವವರೆಗೆ ಮತ್ತು ನ್ಯಾಯಯುತ ಮತ್ತು ಶಾಂತಿಯುತ ಇತ್ಯರ್ಥ ಸಾಧಿಸುವವರೆಗೆ ಭಾರತವು ಇಸ್ರೇಲ್ನೊಂದಿಗಿನ ಎಲ್ಲಾ ಮಿಲಿಟರಿ, ಭದ್ರತೆ ಮತ್ತು ಆರ್ಥಿಕ ಸಹಕಾರವನ್ನು ರದ್ದುಗೊಳಿಸಬೇಕೆಂದು ಪೊಲಿಟ್ಬ್ಯುರೊ ಒತ್ತಾಯಿಸಿದೆ.
“ಬಲಪಂಥೀಯ ಉಗ್ರಗಾಮಿ ಮತ್ತು ಇಸ್ರೇಲ್ನ ಕ್ರೂರ ಆಕ್ರಮಣ ಮತ್ತು ವಿಸ್ತರಣಾವಾದಿ ಕಾರ್ಯಸೂಚಿಯ ಮುಖ್ಯ ಶಿಲ್ಪಿ ಇಸ್ರೇಲಿ ಹಣಕಾಸು ಸಚಿವ ಬೆಜಲೆಲ್ ಸ್ಮೋಟ್ರಿಚ್ ಅವರಿಗೆ ಆತಿಥ್ಯ ನೀಡುವ ಕೇಂದ್ರ ಸರ್ಕಾರದ ನಿರ್ಧಾರವನ್ನು ತೀವ್ರವಾಗಿ ಖಂಡಿಸುತ್ತೇನೆ” ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ X ನಲ್ಲಿ ಹೇಳಿದ್ದಾರೆ.
#CPIM Polit Bureau condemns the visit of the Israeli Finance Ministerhttps://t.co/7sWhYVJpLt pic.twitter.com/cgEwe47tXg
— CPI (M) (@cpimspeak) September 9, 2025
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.