ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿ ಆರ್ ಡಿ ಓ) ರಕ್ಷಣ ಜೈವಿಕ ಇಂಜಿನಿಯರಿಂಗ್ ಮತ್ತು ಎಲೆಕ್ಟ್ರೋ ಮೆಡಿಕಲ್ ಲ್ಯಾಬೊರೇಟರಿ ಅವರ ಅಸ್ತಿತ್ವದಲ್ಲಿರುವ ಟಾಟಾ ಸುಮೊ ಮತ್ತು ಎಸ್ ಎಮ್ ಎಲ್ ಐಸುಜು ಅಂಬ್ಯುಲೆನ್ಸ್ಗಳನ್ನು ಮಾರ್ಪಾಡಿಸುವ ಪ್ರತಿಷ್ಠಿತ ಯೋಜನೆಯನ್ನು ಹುಬ್ಬಳ್ಳಿಯ ಜಗದೀಶ ಹಿರೇಮಠ ಅವರಿಂದ ಸ್ಥಾಪಿಸಲ್ಪಟ್ಟ ಏಬಲ್ ಡಿಸೈನ್ ಇಂಜಿನಿಯರಿಂಗ್ ಸರ್ವಿಸ್, ಹುಬ್ಬಳ್ಳಿ ಅವರು ಕೈಗೆತ್ತಿಕೊಂಡಿದ್ದಾರೆ. ಈ ಅಂಬ್ಯುಲೆನ್ಸ್ಗಳನ್ನು ಹಿಮಾಲಯ ಪ್ರದೇಶದಲ್ಲಿ ಗಾಯಗೊಂಡ ಸೈನಿಕರನ್ನು ಉಪಚರಿಸಲು ಮತ್ತು ಸಾಗಿಸಲು ಉಪಯೋಗಿಸಲಾಗುವಂತೆ ತಯಾರಿಸಲಾಗಿದೆ.
ಟಾಟಾ ಸುಮೊ ವಾಹನವು ಮೊದಲಿನಿಂದಲೂ ಭಾರತೀಯ ಸೇನೆಯಲ್ಲಿ ಯುದ್ದ ಭೂಮಿಯಲ್ಲೂ ಹಾಗೂ ಇನ್ನಿತರ ಚಟುವಟಿಕೆಯಲ್ಲಿ ಬಳಸಲ್ಪಡುತ್ತದೆ ಮಾರ್ಪಾಡಿಸಿದ ಸುಮೋ ಟೆಲಿ ಮೆಡಿಸಿನ್ ಯುನಿಟನ್ನು ಹೊಂದಿದೆ. ಈ ಸುಮೋವನ್ನು ವಿವಿಧ ಗುಡ್ಡಗಾಡು ಭೂ ಪ್ರದೇಶಗಳಲ್ಲಿ ಮಿಲಿಟರಿ ಪಡೆಗಳೊಂದಿಗೆ ಪ್ರತಿ ಬಂಡಾಯ ಕಾರ್ಯಾಚರಣೆಗಾಗಿ ಬಳಸಬಹುದು. ಎಸ್ ಎಮ್ ಎಲ್ ಐಸುಜು ವಾಹನವು ಎರಡು ಹೊರಕವಚ ಪದರುಗಳನ್ನು ಒಳಗೊಂಡಿದೆ. ಇದು ಒಳಗಿನ ಶಾಖವನ್ನು ನಿರ್ವಹಿಸುತ್ತದೆ. ಸಾಂಪ್ರದಾಯಕ ಸಸ್ಪೆನ್ಷನ್ ವ್ಯವಸ್ಥೆಯನ್ನು ಏರ್ ಸಸ್ಪೆನ್ಷನ್ ವ್ಯವಸ್ಥೆಗೆ ಮಾರ್ಪಡಿಸಿದೆ. ಈ ವ್ಯವಸ್ಥೆಯಿಂದ ಸಾಗಣೆಯಲ್ಲಿ ಆಘಾತಗಳು ಕಡಿಮೆ ಇರುತ್ತವೆ. ಎಲ್ಲಾ ಮಾರ್ಪಡಿಸಿದ ವ್ಯವಸ್ಥೆಗಳು ಮತ್ತು ಅಳವಡಿಸಿದ ಉಪಕರಣಗಳು ಅಡ್ವಾನ್ಸ್ ಲೈಫ್ ಸಪೋರ್ಟ್ ಮಾನದಂಡಗಳನ್ನು ಪೂರೈಸುತ್ತವೆ.
ಉತ್ತಮ ವಿನ್ಯಾಸ ಮತ್ತು ತಯಾರಿಕೆಯಿಂದ ಅಂಬ್ಯುಲೆನ್ಸ್ಗಳನ್ನು ಮಾರ್ಪಡಿಸಲಾಗಿದೆ ಅತ್ಯಾಧುನಿಕ ಸಂವಹನ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಗಾಯಗೊಂಡ ಸೈನಿಕರನ್ನು ರೆಫರಲ್ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಆಸ್ಪತ್ರೆಯ ವೈದ್ಯರೊಂದಿಗೆ ನೇರ ಆಡಿಯೊ, ಲೈವ್ ವೀಡಿಯೊ ಸ್ಟ್ರೀಮಿoಗ್ ಹಾಗೂ ಡಾಟಾ ಕನೆಕ್ಷನ್ ಸಲುವಾಗಿ ಈ ವ್ಯವಸ್ಥೆಯು ತುಂಬಾ ಪ್ರಯೋಜನಕಾರಿ ಆಗಿದೆ. ಅಂಬ್ಯುಲೆನ್ಸ್ಗಳಲ್ಲಿ ಉತ್ತಮವಾದ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳನ್ನು ಬಳಸಲಾಗಿದೆ. 35 ಲಕ್ಷಕ್ಕೂ ಹೆಚ್ಛಿನ ಮೌಲ್ಯವುಳ್ಳ ಉಪಕರಣಗಳಾಗಿವೆ. ಐಸುಜು ವಾಹನದಲ್ಲಿ 03 ಸ್ಟ್ರೇಚರಗಳು ಮತ್ತು ಟಾಟಾ ಸುಮೊದಲ್ಲಿ 01, ಸ್ಟ್ರೇಚರ್ ಬಳಸಲಾಗಿದೆ.
ಕೆಳಕಂಡ ವೈಶಿಷ್ಟಗಳನ್ನು ಎರಡೂ ಅಂಬ್ಯುಲೆನ್ಸ್ಗಳಲ್ಲಿ ಅಳವಡಿಸಲಾಗಿದೆ.
• ಆಂತರಿಕ FRP ಫಲಕಗಳನ್ನು ಅಳವಡಿಸಲಾಗಿದೆ.
• ವಾಹನಗಳು ವೀಪರಿತ ಶೀತ ಮತ್ತು ಬಿಸಿ ಭೂಪ್ರದೇಶಗಳಲ್ಲಿ ಬಳಸುವುದರಿಂದ ರೋಗಿಯ ಕ್ಯಾಬಿನ್ನಲ್ಲಿ ಹವಾನಿಯಂತ್ರಣ ಮತ್ತು ಹೀಟರ್ ವ್ಯವಸ್ಥೆ ಅಳವಡಿಸಿದೆ.
• ಯು ಪಿ ಎಸ್ ಬ್ಯಾಟರಿ ಮತ್ತು ಜನರೇಟರನ್ನು ವೈದ್ಯಕೀಯ ಉಪಕರಣಗಳು ಮತ್ತು ಚಾರ್ಜಿಗಾಗಿ ಮೀಸಲಿಡಲಾಗಿದೆ.
• ಆಟೋ ಲೋಡಿಂಗ್ ಸ್ಟ್ರೆಚರ್ಗಳು.
• ಸ್ಪೈ ನ್ ಬೋರ್ಡ್ ಮತ್ತು ಸ್ಕೂಫ್ ಸ್ಟ್ರೆಚರ್ ಬಳಸಲಾಗಿದೆ.
• ಟಾಟಾ ಸುಮೊದಲ್ಲಿ ಸಾಮಾನ್ಯ ಸ್ಟೇರಿಂಗ್ ಅನ್ನು ಪವರ್ ಸ್ಟೇರಿಂಗ್ ಅನ್ನಾಗಿ ಪರಿವರ್ತಿಸಲಾಗಿದೆ.
• ಆಮ್ಲಜನಕ ಸಿಲಿಂಡರ್ಗಳು.
• ನೀರಿನ ಟ್ಯಾಂಕರ್ಗಳು.
• ಔಷಧ ಸಂಗ್ರಹಣೆಗಾಗಿ ಸ್ಟೋರೆಜ್/ ಕ್ಯಾಬಿನೆಟ್ ವ್ಯವಸ್ಥೆ.
• ಅತ್ಯಾಧುನಿಕ ಮತ್ತು ಪ್ರಮಾಣಿತ ಪ್ರಥಮ ಚಿಕಿತ್ಸಾ ಕಿಟ್.
• ವೈದ್ಯರ ಮತ್ತು ಅಟಡೆಂಟ್ ಆಸನಗಳು.
• ರೆಫ್ರಿಜರೇಟರ್
• ಅತ್ಯಾಧುನಿಕ ಸಂವಹನ ವ್ಯವಸ್ಥೆ.
a. ರಾಡಮ್ ಅನ್ನು ವಾಹನದ ಮೆಲ್ಚಾವಣಿಯಲ್ಲಿ ಉತ್ತಮ ರಕ್ಷಣಾ ಕವಚದೊಂದಿಗೆ ಅಳವಡಿಸಿದೆ.
b. 7U ಎಲೆಕ್ಟ್ರಾನಿಕ್ ರ್ಯಾಕ್
c. TV ಸ್ಕ್ರೀನ್ ಮತ್ತು PTZ ಕ್ಯಾಮರಾ ಬಳಸಲಾಗಿದೆ.
d. ನಿರಂತರ ವಿದ್ಯುತ್ ಶಕ್ತಿಗಾಗಿ ಇನ್ವರ್ಟರ್ ಬಳಸಲಾಗಿದೆ.
• ಟೈರ್ ಪ್ರೆಜರ್ ಮ್ಯಾನೇಜ್ಮೆoಟ್ ಸಿಸ್ಟಮ್ ಅಳವಡಿಸಿದೆ.
• ಎಸ್ ಎಮ್ ಎಲ್ ಐಸುಜು ವಾಹನದಲ್ಲಿ ಲೀಫ್ ಸಸ್ಪೆನ್ಷನ್ ಅನ್ನು ಏರ್ ಸಸ್ಪೆನ್ಷನ್ ಆಗಿ ಮಾರ್ಪಡಿಸಲಾಗಿದೆ.
• ರೋಗಿಗಳ ಹಾಸಿಗೆಗಳಿಗೆ ಹೈಡ್ರಾಲಿಕ್ ಸಿಸ್ಟಮ್ ಬಳಸಲಾಗಿದೆ.
• ಫೈಯರ್ ಎಸ್ಟಿಂಗ್ವಿಷರ್ಸ್.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.