ನವದೆಹಲಿ: ಭಾರತದಲ್ಲಿ ಕೊರೋನವೈರಸ್ ಸಾಂಕ್ರಮಿಕ ರೋಗದ ಸಂಖ್ಯೆ 18024 ಆಗಿದೆ. ಇದರಲ್ಲಿ 17656 ಪ್ರಕರಣಗಳು ಸಕ್ರಿಯ ಪ್ರಕರಣಗಳಾಗಿವೆ. 568 ಮಂದಿ ಸಾವಿಗೀಡಾಗಿದ್ದಾರೆ, 2900 ಜನರು ಗುಣಮುಖರಾಗಿದ್ದಾರೆ.
ಈ ನಡುವೆ ದೇಶದ 59 ಜಿಲ್ಲೆಗಳಲ್ಲಿ ಕಳೆದ 14 ದಿನಗಳಲ್ಲಿ ಯಾವುದೇ ಕೊರೋನಾ ಪ್ರಕರಣಗಳು ದಾಖಲಾಗಿಲ್ಲ. ಇದು ತಕ್ಕಮಟ್ಟಿನ ನಿರಾಳತೆಯನ್ನು ನೀಡಿದೆ.
ಮಹಾರಾಷ್ಟ್ರ ತೀರ ಕೆಟ್ಟ ಪರಿಸ್ಥಿತಿಯಲ್ಲಿ ಇದ್ದು, 4,483 ಪ್ರಕರಣಗಳು ಅಲ್ಲಿವೆ ಮತ್ತು 211 ಮಂದಿ ಸಾವಿಗೀಡಾಗಿದ್ದಾರೆ. ದೆಹಲಿಯಲ್ಲಿ 45 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 2000 ಪ್ರಕರಣಗಳು ದಾಖಲಾಗಿವೆ.
ಕಳೆದ ಹದಿನಾಲ್ಕು ದಿನಗಳಿಂದ ದೇಶದ 59 ಜಿಲ್ಲೆಗಳಲ್ಲಿ ಯಾವುದೇ ಸಾಂಕ್ರಾಮಿಕ ರೋಗದ ಪ್ರಕರಣಗಳು ಪತ್ತೆಯಾಗಿಲ್ಲ ಎಂದು ಐಸಿಎಂಆರ್ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಭಾರತದ ರಿಕವರಿ ರೇಟ್ ಶೇಕಡಾ 14.75% ಎಂದು ಐಸಿಎಂಆರ್ ಹೇಳಿಕೆಯಲ್ಲಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.