ನವದೆಹಲಿ: ದೇಶ ಕೊರೋನಾದಿಂದ ಲಾಕ್ಡೌನ್ ಆಗಿದೆ. ಜನರು ಮನೆಯಿಂದ ಹೊರಬರಲಾರದೆ ಮನೆಯಲ್ಲಿಯೇ ಕುಳಿತುಕೊಳ್ಳುವಂತಾಗಿದೆ. ಇಂತಹ ಸಂದರ್ಭದಲ್ಲಿ ಜನರು ಮನೋರಂಜನೆಗಾಗಿ ಟಿಕ್ಟಾಕ್, ವಿಡಿಯೋ ಮೊದಲಾದವುಗಳನ್ನು ಮಾಡುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಾರೆ. ಈಗ ಅಂತಹದ್ದೇ ಒಂದು ವಿಡಿಯೋ ಹೆಚ್ಚು ವೈರಲ್ ಆಗುತ್ತಿದ್ದು ಬಾಲಿವುಡ್ ನಟ ಅನುಪಮ್ ಖೇರ್ ಅವರೂ ಪುಟಾಣಿ ಮಗುವಿನ ಸಾಮಾಜಿಕ ಜಾಗೃತಿ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ಈ ವಿಡಿಯೋದಲ್ಲಿ ತಾಯಿಯೊಬ್ಬಳು ತನ್ನ ಅಂಬೆಗಾಲಿಡುವ ಮಗುವಿನ ಬಳಿ ಮನೆಯಿಂದ ಹೊರಹೋಗೋಣ ಬಾ ಎಂಬುದಾಗಿ ಕರೆಯುತ್ತಾಳೆ. ಅದಕ್ಕೆ ಆ ಮಗು, ಈಗ ಲಾಕ್ಡೌನ್ ಸಮಯ. ಮೋದಿ ಅಂಕಲ್ ಮನೆಯಿಂದ ಯಾರೂ ಹೊರ ಹೋಗಬಾರದು ಎಂಬುದಾಗಿ ಹೇಳಿದ್ದಾರೆ. ಆದ್ದರಿಂದ ನಾನು ಬರುವುದಿಲ್ಲ ಎಂದು ತಿಳಿಸುತ್ತದೆ. ಅಲ್ಲದೆ ಈ ಸಂದರ್ಭದಲ್ಲಿ ನಾವು ಮನೆಯಲ್ಲಿಯೇ ಇರಬೇಕು ಎಂಬುದಾಗಿಯೂ ತಿಳಿಸುತ್ತದೆ.
ತಾಯಿ ಮತ್ತೆ ಮಗುವನ್ನು ಮನವೊಲಿಸಲು ಪ್ರಯತ್ನಿಸುತ್ತಾಳೆ. ಆದರೆ ಮೋದಿ ಸರ್ಕಾರ ಮನೆಯೊಳಗೆಯೇ ಇರುವಂತೆ ತಿಳಿಸಿದ್ದಾರೆ ಎಂದು ಹೇಳುವ ಮೂಲಕ ತಾಯಿಗೆ ಪಾಠ ಮಾಡುತ್ತದೆ. ಈ ಸುಂದರವಾದ, ಸಂದೇಶವನ್ನು ಹೊಂದಿದ ವಿಡಿಯೋವನ್ನು ಟಿಕ್ಟಾಕ್ನಲ್ಲಿ 3.2 ಮಿಲಿಯನ್ ಜನರು ವೀಕ್ಷಿಸಿದ್ದಾರೆ.
ಇನ್ನು ಈ ವಿಡಿಯೋಗೆ ಬಹಳಷ್ಟು ಜನ ಪ್ರತಿಕ್ರಿಯೆ ನೀಡಿದ್ದು, ಪುಟಾಣಿ ಮಗುವಿಗಿರುವ ಗಂಭೀರತೆ ಹಿರಿಯರಿಗಿಲ್ಲ. ಇಂತಹ ಸಂದೇಶ ಸಾರಿದ ಪುಟಾಣಿಗೆ ಹ್ಯಾಟ್ಸಾಪ್ ತಿಳಿಸಿದ್ದಾರೆ. ನಾವೆಲ್ಲರೂ ಈ ಮಗುವಿನಿಂದ ಕಲಿಯಬೇಕಾಗಿದೆ. ಮನೆಯಲ್ಲಿಯೇ ಇರಿ, ಸುರಕ್ಷಿತವಾಗಿರಿ ಎಂದೂ ನೆಟ್ಟಿಗರು ಕಮೆಂಟಿಸಿದ್ದಾರೆ.
@remodsouza0Pls let me know who is this quite is ??? And to all grown ups learn from the kid. 🙂 ##modiuncelsaid I could not control myself of uploading this :)))
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.