ಬೆಳ್ತಂಗಡಿ : ಇಂದು ನಾವು ಕಲಬೆರಕೆ ಆಹಾರವನ್ನೇ ಹೆಚ್ಚಾಗಿ ಸೇವಿಸುತ್ತಿದ್ದು ಇದು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಉಜಿರೆ ಶ್ರೀ ಧ.ಮಂ.ಪದವಿ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ನವೀನ್ ಕುಮಾರ್ ಜೈನ್ಅಭಿಪ್ರಾಯಪಟ್ಟರು.
ಅವರು ಇತ್ತೀಚೆಗೆ ಉಜಿರೆ ಜೇಸಿಐ ಘಟಕವು ಹಮ್ಮಿಕೊಂಡಿದ್ದ ಆಹಾರದಲ್ಲಿ ಕಲಬೆರಕೆ ವಿಷಯಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಆಹಾರ ಪದಾರ್ಥಗಳಲ್ಲಿಯೂ ಕಲಬೆರಕೆ ಕಂಡುಬರುತ್ತಿದೆ. ಕೆಲವೊಮ್ಮೆ ನಮಗೆ ಅರಿವಿಲ್ಲದಂತೆ ತಿಳಿವಳಿಕೆಯ ಕೊರತೆಯಿಂದ ಕಲಬೆರಕೆ ನಡೆಯುತ್ತಿದ್ದರೆ, ಅಧಿಕ ಲಾಭಗಳಿಕೆಯ ಉದ್ಧೇಶದಿಂದ ನಡೆಯುತ್ತಿರುವ ಕಲಬೆರಕೆಯು ದಿನೇದಿನೇ ಹೆಚ್ಚುತ್ತಿದೆ. ಈ ಕುರಿತು ಪ್ರತಿಯೊಬ್ಬರೂ ಎಚ್ಚರ ವಹಿಸಬೇಕು ಎಂದು ಕರೆ ನೀಡಿದರು.
ಘಟಕಾಧ್ಯಕ್ಷ ಜೇಸಿ ಡಾ.ಎಂ.ಪಿ.ಶ್ರೀನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜೇಸಿ ಹೆರಾಲ್ಡ್ ಪಿಂಟೋ ಆತಿಥ್ಯ ವಹಿಸಿದ್ದರು. ಜತೆ ಕಾರ್ಯದರ್ಶಿ ಜೇಸಿ ವಿಜೇಂದ್ರ ಸೇರಿದಂತೆ ಘಟಕದ ಸದಸ್ಯರು ಉಪಸ್ಥಿತರಿದ್ದರು.
ಜೂನ್ ತಿಂಗಳಿನಲ್ಲಿ ನೇಪಾಳದಲ್ಲಿ ಸಂಭವಿಸಿದ ಭೂಕುಸಿತದ ಸಂತೃಸ್ತರಿಗೆ ಉಜಿರೆ ಜೇಸಿ ಘಟಕದ ವತಿಯಿಂದ ಪರಿಹಾರ ಸಾಮಾಗ್ರಿಗಳನ್ನು ರವಾನಿಸಲಾಯಿತು. ಉಜಿರೆ ಇಂಡಿಯನ್ ಡ್ರೆಸಸ್, ಸಂಪೂರ್ಣ ಟೆಕ್ಷ್ಟೈಲ್ಸ್ ಹಾಗೂ ಜೇಸಿ ಸದಸ್ಯರ ಸಹಕಾರದೊಂದಿಗೆ ಸಂಗ್ರಹಿಸಿದ ವಸ್ತುಗಳನ್ನು ಘಟಕಾಧ್ಯಕ್ಷ ಜೇಸಿ ಎಂ.ಪಿ.ಶ್ರೀನಾಥ್ ವಲಯ ೧೫ರ ವಲಯಾಧ್ಯಕ್ಷ ಕೃಷ್ಣಮೋಹನ್ ಪಿ.ಎಸ್. ಅವರಿಗೆ ಹಸ್ತಾಂತರಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.