ನವದೆಹಲಿ: ವಿಶ್ವವೇ ಕೊರೋನಾಮಯವಾಗಿದೆ. ಈ ಸೋಂಕಿಗೆ ಮದ್ದಿಲ್ಲದೆ ಜಗತ್ತು ಹೈರಾಣಾಗಿದೆ. ಇದರ ನಿಯಂತ್ರಣಕ್ಕಾಗಿ ಬಳಸುತ್ತಿರುವ ಮಲೇರಿಯಾ ನಿಯಂತ್ರಣ ಔಷಧ ಹೈಡ್ರಾಕ್ಸಿಕ್ಲೋರೋಕ್ವಿನ್ ಅನ್ನು ಸರಬರಾಜು ಮಾಡುವಂತೆ ವಿಶ್ವದ ದೊಡ್ಡಣ್ಣ ಅಮೆರಿಕಾವೂ ಸೇರಿದಂತೆ ಸುಮಾರು 30 ರಾಷ್ಟ್ರಗಳು ಭಾರತವನ್ನು ಕೇಳಿಕೊಂಡಿವೆ.
ಆದರೆ ಸದ್ಯ ದೇಶದೊಳಗೇ ಈ ಔಷಧದ ಅಗತ್ಯ ಹೆಚ್ಚಾಗಿದ್ದು, ಇದನ್ನು ರಪ್ತು ಮಾಡುವುದಕ್ಕೆ ನಿಷೇಧ ಹೇರಲಾಗಿದೆ. ಭಾರತದಲ್ಲಿಯೂ ಕೊರೊನಾ ಪೀಡಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಭಾರತಕ್ಕೂ ಈ ಔಷಧದ ಅನಿವಾರ್ಯತೆ ಹೆಚ್ಚಾಗಿದೆ. ಆ ಕಾರಣದಿಂದಲೇ ಈ ಔಷಧವನ್ನು ವಿದೇಶಗಳಿಗೆ ರಪ್ತು ಮಾಡುವುದಕ್ಕೂ ಕೇಂದ್ರ ಕಡಿವಾಣ ಹಾಕಿದೆ.
ಈ ಔಷಧ ಪೂರೈಕೆಗಾಗಿ ಅಮೆರಿಕಾ ಅಧ್ಯಕ್ಷ ಟ್ರಂಪ್ ಸಹ ಪ್ರಧಾನಿ ಅವರಿಗೆ ಮನವಿ ಮಾಡಿದ್ದು, ಸರ್ಕಾರ ಈ ಕುರಿತಂತೆ ಮನವಿ ಸ್ವೀಕರಿಸಿ ಪರಿಶೀಲನೆ ನಡೆಸುತ್ತಿದೆ.
ಕೋವಿಡ್-19 ನಿಂದ ಮುಕ್ತಿ ಪಡೆಯುವಲ್ಲಿ ಮಲೆರಿಯಾ ಔಷಧ ಕೆಲಸ ಮಾಡುತ್ತದೆ ಎಂಬ ಆರೋಗ್ಯ ಇಲಾಖೆ, ಆರೋಗ್ಯ ಕಾರ್ಯಕರ್ತರ ಅಭಿಪ್ರಾಯಕ್ಕೆ ಮನ್ನಣೆ ನೀಡಿದ್ದ ಕೇಂದ್ರ ಎ.4 ರಂದು ಈ ಔಷಧ ರಪ್ತು ಮಾಡುವುದರ ಮೇಲೆ ನಿಷೇಧವನ್ನೂ ಹೇರಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.