ನವದೆಹಲಿ : ಕೋವಿಡ್-19 ಗೆ ಇಡೀ ದೇಶವೇ ಕಂಗೆಟ್ಟಿದೆ. ಪರಿಸ್ಥಿತಿ ನಿಭಾಯಿಸಲು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಪರದಾಡುತ್ತಿದ್ದಾರೆ. ಆದರೆ ಈ ಸಂದರ್ಭದಲ್ಲಿಯೂ ಕಾಂಗ್ರೆಸ್ ಮಾತ್ರ ನೀಚ ರಾಜಕಾರಣ ಮಾಡುವುದರಲ್ಲಿಯೇ ತಲ್ಲೀನವಾಗಿದೆ. ಇಂತಹ ಸಂದರ್ಭದಲ್ಲಿ ಕೆಟ್ಟ ರಾಜಕಾರಣ ಮಾಡುವುದನ್ನು ನಿಲ್ಲಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಗುಡುಗಿದ್ದಾರೆ.
ಕೊರೋನಾ ತಡೆಗೆ ಬೇಕಾದ ಕ್ರಮಗಳನ್ನು ಕೇಂದ್ರ ಜಾರಿಗೆ ತರುತ್ತಿದ್ದರೆ, ಕಾಂಗ್ರೆಸ್ ಪಕ್ಷ ಮಾತ್ರ ಜನರನ್ನು ತಪ್ಪು ದಾರಿಗೆಳೆಯುವ ಮತ್ತು ದೇಶದ ಹಿತಕ್ಕೆ ಮಾರಕವಾಗುವ ಕೆಲಸಗಳನ್ನು ಮಾಡುವಲ್ಲಿಯೇ ತಲ್ಲೀನವಾಗಿದೆ ಎಂದು ಶಾ ತಮ್ಮ ಟ್ವಿಟರ್ ನಲ್ಲಿ ತಿಳಿಸಿದ್ದಾರೆ. ಕೊರೊನಾ ಹರಡದಂತೆ ಎಚ್ಚರಿಕೆ ವಹಿಸುವ ಸಲುವಾಗಿ ಮೋದಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ತಿಳಿಸಿದರೆ, ಕಾಂಗ್ರೆಸ್ ಮಾತ್ರ ಇಂತಹ ಜನಸ್ನೇಹಿ ಕ್ರಮವನ್ನು ಟೀಕಿಸುತ್ತಿದೆ ಎಂದು ಶಾ ತಿಳಿಸಿದ್ದಾರೆ.
Under PM @narendramodi’s leadership, India’s efforts to fight Coronavirus are being lauded domestically and globally. 130 crore Indians are united to defeat COVID-19.
Yet, Congress is playing petty politics. High time they think of national interest and stop misleading people.— Amit Shah (@AmitShah) April 2, 2020
ಕೇಂದ್ರದ ಲಾಕ್ ಡೌನ್ ಕ್ರಮದಿಂದ ವಲಸೆ ಕಾರ್ಮಿಕರ ಸ್ಥಿತಿ ಶೋಚನೀಯವಾಗಿದೆ ಎಂಬುದನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಕೇಂದ್ರದ ಕೊರೋನಾ ವಿರುದ್ಧದ ಅಗತ್ಯ ರಕ್ಷಣಾ ಕ್ರಮಗಳನ್ನು ವಿರೋಧಿಸುತ್ತಿದ್ದಾರೆ. ಆದರೆ ಈ ಕ್ರಮದಿಂದ ಸೋಂಕು ಹರಡುವ ತೀವ್ರತೆ ಕಡಿಮೆಯಾಗಿರುವ ಅಥವಾ ಕೊರೊನಾದಿಂದ ದೇಶವಾಸಿಗಳನ್ನು ರಕ್ಷಿಸುವಲ್ಲಿ ಸಿಕ್ಕಿರುವ ಯಶಸ್ಸಿನ ಬಗ್ಗೆ ಕಾಂಗ್ರೆಸ್ ಅರಿತುಕೊಂಡು, ಕೋವಿಡ್ ವಿರುದ್ಧದ ಹೋರಾಟದಲ್ಲಿ ಕೇಂದ್ರದ ಜೊತೆ ಕೈ ಜೋಡಿಸುವ ಕೆಲಸ ಮಾಡುತ್ತಿಲ್ಲ. ಬದಲಾಗಿ ಕೇಂದ್ರದ ಕ್ರಮಗಳನ್ನು ವಿರೋಧಿಸುವತ್ತಲೇ ತನ್ನ ಚಿತ್ತ ನೆಟ್ಟಿದೆ ಎಂದರೂ ತಪ್ಪಾಗಲಾರದು.
ಇನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯೂ ಈ ಕುರಿತಂತೆ ಕೇಂದ್ರದ ಕ್ರಮಗಳನ್ನು ವಿರೋಧಿಸಿ ಹೇಳಿಕೆಗಳನ್ನು ನೀಡಿದ್ದರು.
ಕೊರೊನಾಗೆ ಈವರೆಗೆ ದೇಶದಲ್ಲಿ 60ಕ್ಕೂ ಹೆಚ್ಚು ಸಾವು ಸಂಭವಿಸಿದ್ದು, ಈ ಮಾರಕ ವೈರಸ್ ವಿರುದ್ದ ಗೆಲುವು ಸಾಧಿಸಬೇಕಾದರೆ ಕೇಂದ್ರದಿಂದ ತೆಗೆದುಕೊಳ್ಳಲಾಗಿರುವ ಕಠಿಣ. ಕ್ರಮಗಳು ತೀರಾ ಅವಶ್ಯವೇ ಸರಿ. ಇಂತಹ ಕಟ್ಟುನಿಟ್ಟಿನ ಕ್ರಮಗಳನ್ನು ಪಾಲಿಸದೇ ಹೋದಲ್ಲಿ ದೇಶವಾಸಿಗಳನ್ನು ಕೊರೊನಾದಿಂದ ಕಾಪಾಡುವುದಕ್ಕೂ ಅಸಾಧ್ಯ. ಆದ್ದರಿಂದ ಕಾಂಗ್ರೆಸ್ ಇನ್ನಾದರೂ ಕೇಂದ್ರದ ಜೊತೆಗೆ ಕೋವಿಡ್ ವಿರುದ್ಧ ಹೋರಾಟದಲ್ಲಿ ಕೈ ಜೋಡಿಸಿದರೆ ಉತ್ತಮ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.