ನವದೆಹಲಿ: ಯುದ್ಧನೌಕೆಗಳಿಂದ ಹಿಡಿದು ಸಾರಿಗೆ ವಿಮಾನಗಳವರೆಗೆ, ಭಾರತವು ಈಗ ಔಪಚಾರಿಕವಾಗಿ ಮಿಲಿಟರಿ ಸಾಧನಗಳನ್ನು ಮಿತ್ರ ದೇಶಗಳಿಂದ ಲೀಸ್ಗೆ ಪಡೆದುಕೊಳ್ಳಬಹುದಾಗಿದೆ. ರಕ್ಷಣಾ ಸಚಿವಾಲಯವು ಹೊಸ ಡಿಫೆನ್ಸ್ ಪ್ರೊಕ್ಯೂರ್ಮೆಂಟ್ ಪ್ರೊಸೀಜರ್ (ಡಿಪಿಪಿ) 2020 ಅನ್ನು ತಂದಿದ್ದು, ಇದರಲ್ಲಿ ಅಸ್ತಿತ್ವದಲ್ಲಿರುವ ‘ಖರೀದಿ ಮತ್ತು ತಯಾರಿಕೆ’ ವಿಭಾಗಗಳಿಗೆ ಲೀಸ್ ಅವಕಾಶವನ್ನು ಹೊಸ ವರ್ಗವಾಗಿ ಪರಿಚಯಿಸಲಾಗಿದೆ.
ಡ್ರಾಫ್ಟ್ ಡಿಫೆನ್ಸ್ ಪ್ರೊಕ್ಯೂರ್ಮೆಂಟ್ ಪ್ರೊಸೀಜರ್ 2020 ಅನ್ನು ಶುಕ್ರವಾರ ಅನಾವರಣಗೊಳಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ” ಡಿಪಿಪಿ -2016 ಅನ್ನು ಪರಿಷ್ಕರಿಸಲು ನಾನು ಆಗಸ್ಟ್ 2019 ರಲ್ಲಿ ಪರಿಶೀಲನಾ ಸಮಿತಿಯನ್ನು ರಚಿಸಿದ್ದೇನೆ. ಡಿಪಿಪಿ 2020 ರ ಕರಡನ್ನು ಸಿದ್ಧಪಡಿಸಲಾಗಿದೆ ಎಂದು ಘೋಷಿಸಲು ನನಗೆ ಸಂತೋಷವಾಗುತ್ತಿದೆ” ಎಂದಿದ್ದಾರೆ.
ಡಿಪಿಪಿಯಲ್ಲಿ ಕೊನೆಯ ಬದಲಾವಣೆಗಳನ್ನು 2016 ರಲ್ಲಿ ಮಾಡಲಾಯಿತು. ಡ್ರಾಫ್ಟ್ ಡಿಫೆನ್ಸ್ ಪ್ರೊಕ್ಯೂರ್ಮೆಂಟ್ ಪ್ರೊಸೀಜರ್ (ಡಿಪಿಪಿ) 2020 ಅನ್ನು ಸಾರ್ವಜನಿಕ ವಲಯದಲ್ಲಿ ಇರಿಸಲಾಗಿದೆ. ಇದು ಡ್ರಾಫ್ಟ್ ಡಿಪಿಪಿ ಆಗಿದ್ದು, ಇದನ್ನು ನಾಲ್ಕು ವಾರಗಳಲ್ಲಿ ಎಲ್ಲಾ ಸಂಬಂಧಿಸಿದವರ ಪ್ರತಿಕ್ರಿಯೆಗಾಗಿ ಬಹಿರಂಗ ಮಾಡಲಾಗುತ್ತದೆ. ಸಲಹೆಗಳು ಮತ್ತು ಪ್ರತಿಕ್ರಿಯೆಯ ಆಧಾರದ ಮೇಲೆ ಮತ್ತಷ್ಟು ಪರಿಷ್ಕರಣೆಯನ್ನು ಕೈಗೊಳ್ಳಲಾಗುವುದು ಎಂದಿದ್ದಾರೆ.
“ಹೊಸ ಡ್ರಾಫ್ಟ್ ಡಿಫೆನ್ಸ್ ಪ್ರೊಕ್ಯೂರ್ಮೆಂಟ್ ಪ್ರೊಸೀಜರ್ 2020 ರಲ್ಲಿ, ನಾವು ಕಾರ್ಯವಿಧಾನವನ್ನು ಸರಳೀಕರಿಸಿದ್ದೇವೆ ಮತ್ತು ಸಂಭವನೀಯತೆ, ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಲು ನಾವು ಟೈಮ್ ಲೈನ್ ಕಡಿತಗೊಳಿಸಿದ್ದೇವೆ” ಎಂದು ಸಿಂಗ್ ಹೇಳಿದ್ದಾರೆ.
ಈ ಹೊಸ ಕಾರ್ಯವಿಧಾನದಲ್ಲಿ ಸಂಗ್ರಹಿಸಿದ ಉಪಕರಣಗಳು ಮತ್ತು ವೇದಿಕೆಗಳ ಜೀವನ ಚಕ್ರ ಬೆಂಬಲವನ್ನು ಬಲವಾಗಿ ಕೈಗೆತ್ತಿಕೊಳ್ಳಲಾಗಿದೆ ಎಂದು ಸಚಿವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.