ಶ್ರೀನಗರ: ಜಮ್ಮು ಕಾಶ್ಮೀರ ಭಾಗದ ಜನರಲ್ಲಿ ದೇಶ ಪ್ರೇಮ ಮೂಡಿಸುವ, ಜನರನ್ನು ಒಗ್ಗೂಡಿಸುವ ಸಲುವಾಗಿ ಆರ್ಎಸ್ಎಸ್ ವಿರತ ಶ್ರಮಪಡುತ್ತಿದೆ. ಮುಸ್ಲಿಂ ಬಾಹುಳ್ಯವುಳ್ಳ ಈ ಭಾಗದಲ್ಲಿ ಈಗಾಗಲೇ ಆರ್ಎಸ್ಎಸ್ 500 ಶಾಖೆಗಳನ್ನು ತೆರೆದಿದೆ.
ನೂರಾರು ಸಂಖ್ಯೆಯಲ್ಲಿ ಜನರನ್ನು ಸಂಘಕ್ಕೆ ಸೇರಿಸಿಕೊಳ್ಳಲಾಗಿದೆ, ಪ್ರತಿ ತಿಂಗಳು ಸಭೆ, ಸಮಾರಂಭಗಳನ್ನು ನಡೆಸುತ್ತಿದೆ. ಆರ್ಎಸ್ಎಸ್ನ ಅಂಗ ಸಂಸ್ಥೆಯಾದ ಮುಸ್ಲಿಂ ರಾಷ್ಟ್ರೀಯ ಮಂಚ್ ಇದಕ್ಕೆ ಬೇಕಾದ ಎಲ್ಲಾ ಸಹಕಾರವನ್ನೂ ನೀಡುತ್ತಿದೆ.
ಜಮ್ಮುವಿನ 450 ಪ್ರದೇಶಗಳಲ್ಲಿ, ಲಡಾಖ್ನ 50 ಪ್ರದೇಶಗಳಲ್ಲಿ ಆರ್ಎಸ್ಎಸ್, ಮುಸ್ಲಿಂ ರಾಷ್ಟ್ರೀಯ ಮಂಚ್ ಜೊತೆಗೂಡಿ ಕಾರ್ಯನಿರ್ವಹಣೆ ಮಾಡುತ್ತಿದ್ದು, ಜನರೊಂದಿಗೆ ಸಂಪರ್ಕ ಸಾಧಿಸುತ್ತಿದೆ.
ಮುಸ್ಲಿಂ ರಾಷ್ಟ್ರೀಯ ಮಂಚ್ ಮುಸ್ಲಿಂ ಏಳಿಗಾಗಿ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದೆ, ಸಭೆಯನ್ನು ಆಯೋಜಿಸಲು ಆರ್ಎಸ್ಎಸ್ಗೆ ಅದು ನೆರವಾಗುತ್ತಿದೆ. ಈ ಭಾಗದ ಜನರಲ್ಲಿ ಸಂಘದ ಬಗ್ಗೆ ಜನರಿಗೆ ಸಾಕಷ್ಟು ಗೊಂದಲಗಳಿವೆ. ಆದರೆ ನಾವು ನಿಸ್ವಾರ್ಥತೆ, ಪ್ರೀತಿ ಮತ್ತು ವಾತ್ಸಲ್ಯದಲ್ಲಿ ನಂಬಿಕೆ ಇಡುತ್ತೇವೆ ಎಂದು ಆರ್ಎಸ್ಎಸ್ ಸದಸ್ಯರು ಹೇಳಿಕೊಳ್ಳುತ್ತಾರೆ.
ಭಾರತವನ್ನು ಪ್ರೀತಿಸುವುದಕ್ಕಿಂತ ಮಹತ್ಕಾರ್ಯ ಹಿಂದೂಸ್ಥಾನಿಯಾದವನಿಗೆ ಬೇರೊಂದಿಲ್ಲ ಎಂದು ಕಣಿವೆ ರಾಜ್ಯದ ಜನರಿಗೆ ಆರ್ಎಸ್ಎಸ್ ಸಂದೇಶ ನೀಡುತ್ತಿದೆ. ಆರ್ಎಸ್ಎಸ್ನ ಸೇವೆ ಮತ್ತು ಸಿದ್ಧಾಂತಗಳನ್ನು ಒಪ್ಪಿಕೊಂಡು ಹೆಚ್ಚಿನ ಕಾಶ್ಮೀರಿಗರು ಸಂಘ ಸೇರಲು ಬಯಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.