ವಾಷಿಂಗ್ಟನ್: ಕೊರೊನಾವೈರಸ್ ಸಾಂಕ್ರಾಮಿಕ ರೋಗದ ಹರಡುವಿಕೆಯನ್ನು ತಡೆಗಟ್ಟಲು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ, ಈ ನಿರ್ಧಾರದಿಂದ ವೈರಸ್ ವಿರುದ್ಧದ ಹೋರಾಟಕ್ಕೆ ಸಹಾಯ ಮಾಡಲು ಬಿಲಿಯನ್ ಡಾಲರ್ ಫೆಡರಲ್ ಹಣವನ್ನು ಬಿಡುಗಡೆ ಮಾಡಲಾಗುತ್ತದೆ.
ಶುಕ್ರವಾರ ಟ್ರಂಪ್ ಶ್ವೇತಭವನದ ರೋಸ್ ಗಾರ್ಡನ್ನಲ್ಲಿ ಮಾತನಾಡುತ್ತಾ, ರಾಷ್ಟ್ರೀಯ ತುರ್ತು ಘೋಷಣೆಯು ರಾಜ್ಯಗಳು, ಪ್ರದೇಶಗಳು ಮತ್ತು ಪ್ರಾಂತ್ಯಗಳಿಗೆ $50 ಬಿಲಿಯನ್ಗಳಷ್ಟು ಹಣಕಾಸಿನ ನೆರವು ಪಡೆಯಲು ಅವಕಾಶವನ್ನು ನೀಡುತ್ತದೆ ಎಂದು ಹೇಳಿದ್ದಾರೆ.
“ನಾನು ಅಧಿಕೃತವಾಗಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸುತ್ತಿದ್ದೇನೆ. ಇದು ದೊಡ್ಡ ಪದಗಳು” ಎಂದು ಘೋಷಿಸಿದರು. “ನಾನು ತೆಗೆದುಕೊಳ್ಳುತ್ತಿರುವ ಕ್ರಮವು ಈ ರೋಗದ ವಿರುದ್ಧ ನಮ್ಮ ಜಂಟಿ ಹೋರಾಟಕ್ಕೆ 50 ಬಿಲಿಯನ್ ಡಾಲರ್ಗಳವರೆಗೆ ಹಣಕಾಸು ನೆರವನ್ನು ನೀಡುತ್ತದೆ” ಎಂದಿದ್ದಾರೆ.
”ಫೆಡರಲ್ ಸರ್ಕಾರದ ಸಂಪೂರ್ಣ ಅಧಿಕಾರವನ್ನು ಬಳಸಿಕೊಳ್ಳಲು, ನಾನು ಅಧಿಕೃತವಾಗಿ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸುತ್ತಿದ್ದೇನೆ. ಮುಂದಿನ ಎಂಟು ವಾರಗಳು ನಿರ್ಣಾಯಕ” ಎಂದು ಅವರು ಹೇಳಿದ್ದಾರೆ
“ವೈರಸ್ ಹರಡುವುದನ್ನು ನಿಲ್ಲಿಸುವುದು ನಮ್ಮ ಪ್ರಮುಖ ಗುರಿಯಾಗಿದೆ. ಇದಕ್ಕಾಗಿ ಎಲ್ಲಾ ಸಂಪನ್ಮೂಲಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ” ಎಂದು ಅವರು ಹೇಳಿದ್ದಾರೆ.
“ಅಮೆರಿಕನ್ನರ ಅಗತ್ಯಗಳನ್ನು ಪೂರೈಸಲು ತುರ್ತು ಸಿದ್ಧತೆ ಯೋಜನೆಯನ್ನು ಸಕ್ರಿಯಗೊಳಿಸುವಂತೆ ನಾನು ದೇಶದ ಪ್ರತಿ ಆಸ್ಪತ್ರೆಯನ್ನು ಕೇಳುತ್ತಿದ್ದೇನೆ” ಎಂದು ಟ್ರಂಪ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.