ನವದೆಹಲಿ: ರಾಜ್ಯಸಭಾ ಚುನಾವಣೆಗೆ ಬಿಜೆಪಿಯು ಮಧ್ಯಪ್ರದೇಶದಿಂದ ಎರಡನೇ ಅಭ್ಯರ್ಥಿಯನ್ನು ಗುರುವಾರ ಘೋಷಣೆ ಮಾಡಿದೆ. ಪ್ರೊ. ಸುಮೇರ್ ಸಿಂಗ್ ಸೋಲಂಕಿ ಅವರು ಆರ್ಎಸ್ಎಸ್ ಹಿನ್ನಲೆಯವರು ಮತ್ತು ಬುಡಕಟ್ಟು ತಜ್ಞರೂ ಆಗಿದ್ದಾರೆ.
ಬುಧವಾರ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಮಧ್ಯಪ್ರದೇಶದ ಮೊದಲ ರಾಜ್ಯಸಭಾ ಅಭ್ಯರ್ಥಿಯಾಗಿ ಬಿಜೆಪಿಯು ಘೋಷಣೆ ಮಾಡಿತ್ತು, ಸೋಲಂಕಿ ಅಲ್ಲಿನ 2ನೇ ರಾಜ್ಯಸಭಾ ಅಭ್ಯರ್ಥಿಯಾಗಿದ್ದಾರೆ.
ಸೋಲಂಕಿ ಅವರು, ಮಧ್ಯ ಪ್ರದೇಶದ ಬುಡಕಟ್ಟು ಪ್ರಾಬಲ್ಯದ ಜಿಲ್ಲೆಗಳಲ್ಲಿ ಒಂದಾದ ಬರ್ವಾನಿಯ ಸರ್ಕಾರಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಮಾತ್ರವಲ್ಲದೇ ಅಲ್ಲಿ ಹಲವಾರು ವರ್ಷಗಳಿಂದ ಸಕ್ರಿಯವಾಗಿ ಆರ್ಎಸ್ಎಸ್ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಪ್ರೊಫೆಸರ್ ಸೋಲಂಕಿ ಮಾಜಿ ಬಿಜೆಪಿ ಸಂಸದ ಮಖನ್ ಸಿಂಗ್ ಸೋಲಂಕಿ ಅವರ ಸೋದರಳಿಯನೂ ಆಗಿದ್ದಾರೆ.
ಪ್ರೊಫೆಸರ್ ಸೋಲಂಕಿ ತಮ್ಮದೇ ಆದ ವೈಯಕ್ತಿಕ ನೆಲೆಯಲ್ಲಿ, ಅಲಿರಾಜ್ಪುರ, ಬಾರ್ವಾನಿ, ಖಾರ್ಗೋನ್ ಮತ್ತು ಇತರ ಬುಡಕಟ್ಟು ಪ್ರಾಬಲ್ಯದ ಜಿಲ್ಲೆಗಳಲ್ಲಿ ‘ರಾಷ್ಟ್ರೀಯೇತರವಾದಿಗಳ ಗುಂಪುಗಳು ನಡೆಸುತ್ತಿರುವ ಅಭಿಯಾನದ’ ವಿರುದ್ಧ ಸಕ್ರಿಯವಾಗಿ ಜಾಗೃತಿ ಮೂಡಿಸುತ್ತಿದ್ದಾರೆ.
ಪ್ರೊಫೆಸರ್ ಸೋಲಂಕಿ ಅವರು ವಿದ್ಯಾ ಭಾರತಿ, ವನವಾಸಿ ಕಲ್ಯಾಣ್ ಪರಿಷತ್ ಮತ್ತು ಇತರ ಆರ್ಎಸ್ಎಸ್ ಅಂಗಸಂಸ್ಥೆಗಳ ಸಹಕಾರದೊಂದಿಗೆ ಬುಡಕಟ್ಟು ಪ್ರದೇಶಗಳಲ್ಲಿ ಸಮನ್ವಯ ಸಾಧಿಸುತ್ತಿದ್ದಾರೆ.
ರಾಜ್ಯಸಭೆಗೆ ಸೋಲಂಕಿ ಅವರ ಆಯ್ಕೆಯು ಮಧ್ಯಪ್ರದೇಶದಲ್ಲಿ ಬಿಜೆಪಿ ಇನ್ನಷ್ಟು ಬಲ ತಂದುಕೊಡಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.