ಪ್ರಧಾನಿ ನರೇಂದ್ರ ಮೋದಿಯವರನ್ನು ಬೇರೆ ರಾಜಕಾರಣಿಗಳಿಂದ ಪ್ರತ್ಯೇಕಿಸುವ ವಿಷಯ ಯಾವುದು ಎಂದು ಯಾರೊಬ್ಬ ಸಾಮಾನ್ಯ ಮನುಷ್ಯನನ್ನೂ ಬೇಕಾದರೂ ಕೇಳಿ, ಆತ ಹೇಳುವ ಉತ್ತರ ಒಂದೇ. ದೇಶದ ನಾಗರಿಕರೊಂದಿಗೆ ವೈಯಕ್ತಿಕ ನೆಲೆಯಲ್ಲಿ ಸಂವಹನ ನಡೆಸುವ ಮತ್ತು ಬಾಂಧವ್ಯ ಬೆಸೆಯುವ ಅವರ ಅನನ್ಯವಾದ ಗುಣ. ನಾಗರಿಕರೊಂದಿಗಿನ ಅವರ ಬೆಸುಗೆ ಅವರನ್ನು ಅತ್ಯಂತ ವರ್ಚಸ್ವಿ ನಾಯಕನನ್ನಾಗಿ ರೂಪಿಸಿದೆ. ಅವರು ಅಧಿಕಾರಕ್ಕೆ ಬಂದಾಗಿನಿಂದ, ತಮ್ಮನ್ನು ತಾವು ಅತ್ಯಂತ ಚಾಣಾಕ್ಷ ಸಂವಹನಕಾರನನ್ನಾಗಿ ಮಾಡುವಂತಹ ಹಲವಾರು ಕ್ರಮಗಳನ್ನು ಅವರು ಕೈಗೊಂಡಿದ್ದಾರೆ.
ಮಹಿಳಾ ದಿನಾಚರಣೆ ಅಭಿಯಾನ
ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ, ಪ್ರಧಾನಿ ಮೋದಿ ತಮ್ಮ ಟ್ವಿಟ್ಟರ್ ಹ್ಯಾಂಡಲ್ನ್ನು ಸೈನ್ ಆಫ್ ಮಾಡಿ ಅದನ್ನು ಏಳು ಮಹಿಳಾ ಸಾಧಕರಿಗೆ ಹಸ್ತಾಂತರ ಮಾಡಿದ್ದರು. ತನ್ನ ಸಾಮಾಜಿಕ ಜಾಲತಾಣ ಖಾತೆಗಳ ಮೂಲಕ ಮಹಿಳೆಯರಿಗೆ ತಮ್ಮ ಜೀವನ ಪ್ರಯಾಣವನ್ನು ದೇಶದ ಜನರಿಗೆ ವಿವರಿಸಲು ಅವಕಾಶ ನೀಡುವ ಅದ್ಭುತ ಕ್ರಮವನ್ನು ತೆಗೆದುಕೊಂಡು ಅವರು ಎಲ್ಲರನ್ನೂ ಅಶ್ಚರ್ಯಚಕಿತಗೊಳಿಸಿದರು. ಇದು ಪ್ರಧಾನಿ ಮೋದಿಯವರ ದೊಡ್ಡ, ಪರಿಣಾಮಕಾರಿ ಸಂಪರ್ಕ ಅಭಿಯಾನದ ಒಂದು ಭಾಗವಾಗಿದೆ. ಇಲ್ಲಿ ಪ್ರಧಾನಮಂತ್ರಿ ಏಳು ಮಹಿಳಾ ಸಾಧಕರ ಸಾಧನೆಗಳು ಮತ್ತು ಕೊಡುಗೆಗಳನ್ನು ಗುರುತಿಸಿದ್ದಲ್ಲದೆ, ಅವರನ್ನು ತಮ್ಮ ಟ್ವಿಟ್ಟರ್ ಹ್ಯಾಂಡಲ್ ಮೂಲಕ ಇಡೀ ದೇಶದ ಮುಂದೆ ತಂದು ಜನಪ್ರಿಯಗೊಳಿಸಿದರು.
ಮನ್ ಕಿ ಬಾತ್
ಭಾರತದ ಯಾವುದೇ ರಾಜಕೀಯ ನಾಯಕ ಇದುವರೆಗೆ ನಡೆಸದ ಅತ್ಯಂತ ಪ್ರಭಾವಶಾಲಿ ಸಂವಹನ ಕಾರ್ಯಕ್ರಮವಾಗಿದೆ. ಡಿಜಿಟಲ್ ಮತ್ತು ದೂರದರ್ಶನದ ಯುಗದಲ್ಲಿಯೂ ಸಹ ರೇಡಿಯೊ ತನ್ನನ್ನು ತಾನು ಮರುಶೋಧಿಸಿಕೊಳ್ಳುವ ಮೂಲಕ ಹೇಗೆ ಪ್ರಮುಖ ಸಂವಹನ ವಿಧಾನವಾಗಿ ಉಳಿದಿದೆ ಎಂಬುದನ್ನು ಪ್ರಧಾನಿ ಗುರುತಿಸಿದರು, ಅಧಿಕಾರಕ್ಕೆ ಬಂದ ನಂತರ ದೇಶದ ಜನರೊಂದಿಗೆ ನೇರವಾಗಿ ಸಂವಹನ ನಡೆಸಲು ರೇಡಿಯೊವನ್ನು ಆಯ್ಕೆ ಮಾಡಿಕೊಂಡರು. 2014ರಿಂದಲೂ ಅವರ ಮನ್ ಕೀ ಬಾತ್ ಕಾರ್ಯಕ್ರಮ ಪ್ರತಿ ತಿಂಗಳು ನಡೆಯುತ್ತಿದೆ.
ಮೈ ಭೀ ಚೌಕಿದಾರ್ ಅಭಿಯಾನ
ಪ್ರಧಾನಿ ಮೋದಿ ಅವರು ನಡೆಸಿದ ಅತ್ಯಂತ ಕಡಿಮೆ ಅವಧಿಯ ಪ್ರಚಾರಗಳಲ್ಲಿ ಇದು ಒಂದು. ರಾಹುಲ್ ಗಾಂಧಿಯವರ ‘ಚೌಕಿದಾರ್ ಚೋರ್ ಹೈ’ ಹೇಳಿಕೆಗೆ ಪರಿಣಾಮಕಾರಿ ತಿರುಗೇಟು ಎಂಬಂತೆ ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮೋದಿ ಇದನ್ನು ಆರಂಭಿಸಿದ್ದರು. ಈ ಅಭಿಯಾನ ಅತ್ಯಂತ ಹಿಟ್ ಆಗಿ ಇಂಟರ್ನೆಟ್ನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿತ್ತು. ಮೋದಿಯವರ ಟ್ವಿಟರ್ ಖಾತೆಯಲ್ಲೂ ಚೌಕಿದಾರ್ ನರೇಂದ್ರ ಮೋದಿ ಎಂದು ಬರೆಯಲಾಯಿತು. ಅವರ ಅಪಾರ ಅಭಿಮಾನಿ ಬಳಗವೂ ಸಾಮಾಜಿಕ ಖಾತೆಗಳಲ್ಲಿ ತಮ್ಮ ಹೆಸರಿನ ಮುಂದೆ ಚೌಕಿದಾರ್ ಎಂಬುದನ್ನು ಸೇರಿಸಿಕೊಂಡಿತು. ಚುನಾವಣೆಯ ಬಳಿಕ ಮೋದಿ ಈ ಅಭಿಯಾನವನ್ನು ಕೈಬಿಟ್ಟರು. ಪ್ರತಿಪಕ್ಷಗಳಿಗೆ ಸೋಲಿನ ರುಚಿ ತೋರಿಸುವಲ್ಲಿ ಈ ಅಭಿಯಾನ ಮಹತ್ವದ ಪಾತ್ರ ವಹಿಸಿತ್ತು.
ಬೇರ್ ಗ್ರಿಲ್ಸ್ ಮತ್ತು ಅಕ್ಷಯ್ ಕುಮಾರ್ ಅವರೊಂದಿಗೆ ವಿಡಿಯೋ ಚಿತ್ರೀಕರಣ
ಪ್ರಧಾನಿ ಮೋದಿಯವರು ದೇಶದ ಅತ್ಯಂತ ಜನಪ್ರಿಯ ನಾಯಕ. ಉಳಿದ ರಾಜಕೀಯ ಮುಖಂಡರುಗಳು 2019 ರ ಸಾರ್ವತ್ರಿಕ ಚುನಾವಣೆಗಾಗಿ ಪ್ರಚಾರ ಕಾರ್ಯದಲ್ಲಿ ಮತ್ತು ಕ್ಷುಲ್ಲಕ ರಾಜಕಾರಣದಲ್ಲಿ ನಿರತರಾಗಿದ್ದಾಗ, ಪ್ರಧಾನ ಮಂತ್ರಿ ಒಂದು ನವೀನ ಕಾರ್ಯವನ್ನು ಮಾಡಿದರು. ಮ್ಯಾನ್ ವರ್ಸಸ್ ವೈಲ್ಡ್ಗಾಗಿ ಚಿತ್ರೀಕರಣವನ್ನು ಮಾಡಿದರು, ಸಾಹಸಿ ಬೇರ್ ಗ್ರಿಲ್ಸ್ ಜೊತೆ ಉತ್ತರಾಖಂಡದ ದಟ್ಟಾರಣ್ಯದಲ್ಲಿ ಸಂಚರಿಸಿದರು. ಮಾತ್ರವಲ್ಲದೇ, ಅವರು ನಟ ಅಕ್ಷಯ್ ಕುಮಾರ್ ಅವರಿಗೆ ನೀಡಿದ ರಾಜಕಿಯೇತರ ಸಂದರ್ಶನ ಕೂಡ ಅವರ ಸಂವಹನ ಚಾಣಾಕ್ಷತೆಗೆ ಒಂದು ಸಾಕ್ಷಿಯಾಗಿದೆ. ಈ ಎರಡು ಕಾರ್ಯಕ್ರಮಗಳ ಮೂಲಕ ಅವರು ಸಾಮಾನ್ಯ ಜನರಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ.
ಭಾರತೀಯ ಪ್ರಾದೇಶಿಕ ಭಾಷೆಗಳಲ್ಲಿ ಮಾತನಾಡುವ ಅವರ ಗುಣ
ಪ್ರಧಾನಿ ಮೋದಿ ಮತ್ತು ಬಿಜೆಪಿ ವಿರುದ್ಧ ಹಿಂದಿ ಹೇರಿಕೆಯ ಆರೋಪಗಳನ್ನು ನಿಯಮಿತವಾಗಿ ಹೇರಲಾಗುತ್ತಿದೆ. ಆದರೆ ಮೋದಿಯವರು ತಾವು ಯಾವ ರಾಜ್ಯಕ್ಕೆ ಭೇಟಿ ನೀಡಿದರೂ ಮೊದಲು ಆಯಾ ರಾಜ್ಯದ ಭಾಷೆಯಲ್ಲಿ ಭಾಷಣವನ್ನು ಆರಂಭಿಸುತ್ತಾರೆ. ಇತ್ತೀಚೆಗೆ, ಹಿಂದಿ ಹೃದಯಭೂಮಿಯಾದ ವಾರಣಾಸಿಯಲ್ಲಿನ ಶ್ರೀ ಜಗದ್ಗುರು ವಿಶ್ವರಾಧ್ಯ ಗುರುಕುಲ್ ಅವರ ಶತಮಾನೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಕನ್ನಡ, ತೆಲುಗು, ಮರಾಠಿ ಮತ್ತು ಹಿಂದಿ – ನಾಲ್ಕು ವಿಭಿನ್ನ ಭಾಷೆಗಳಲ್ಲಿ ಮಾತನಾಡಿದರು. ಅಮೆರಿಕಾದಲ್ಲಿ ನಡೆದ ‘ಹೌಡಿ ಮೋದಿ!’ ಯಲ್ಲಿಯೂ ಸಹ ಪ್ರಧಾನಿ ಮೋದಿ ಹಲವಾರು ಭಾರತೀಯ ಭಾಷೆಗಳಲ್ಲಿ ಮಾತನಾಡಿದರು. ಭಾಷೆ ಜನರನ್ನು ಬೆಸೆಯುವ ಅಮೋಘ ಮಾಧ್ಯಮ ಎಂಬುದನ್ನು ಮೋದಿ ಚೆನ್ನಾಗಿಯೇ ಅರ್ಥ ಮಾಡಿಕೊಂಡಿದ್ದಾರೆ. ಇದರಿಂದಾಗಿಯೇ ಅವರು ಎಲ್ಲಾ ಭಾಷಿಕರನ್ನು ಆಕರ್ಷಿಸುತ್ತಿದ್ದಾರೆ.
ಬಾಲಿವುಡ್ ಕಲಾವಿದರೊಂದಿಗೆ ಸಂವಹನ
ಪ್ರಧಾನಿ ಮೋದಿ ಅಸಾಧಾರಣ ನಾಯಕ ಮತ್ತು ತಳಮಟ್ಟದಿಂದಲೇ ಸಂಪರ್ಕವನ್ನು ಹಿಡಿದಿರುವಂತಹ ವ್ಯಕ್ತಿ. ಭಾರತದ ಜನಸಂಖ್ಯಾ ಲಾಭವನ್ನು ಸದುಪಯೋಗಪಡಿಸಿಕೊಳ್ಳಲು ದೇಶದ ಯುವಕರನ್ನು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದು ಅವರ ಪ್ರಾಥಮಿಕ ಗುರಿಯಾಗಿದೆ. ಈ ಗುರಿಯ ಭಾಗವಾಗಿ, ಕಳೆದ ವರ್ಷ ಸಿನೆಮಾಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಲು ಅವರು ಬಾಲಿವುಡ್ ತಾರೆಯರೊಂದಿಗೆ ಪ್ರಧಾನ ಮಂತ್ರಿ ಕಚೇರಿಯಲ್ಲಿ ಸಭೆ ನಡೆಸಿದರು. ವಾಸ್ತವವಾಗಿ, ಮೋದಿ ಬಾಲಿವುಡ್ ನಟರೊಂದಿಗೆ ನಿರಂತರವಾಗಿ ಸಂವಹನವನ್ನು ನಡೆಸುತ್ತಲೇ ಇದ್ದಾರೆ. ಏಕೆಂದರೆ ಬಾಲಿವುಡ್ ಕಲಾವಿದರನ್ನು ಅನುಸರಿಸುವ ಇಡೀ ಪೀಳಿಗೆಯೇ ಇದೆ ಎಂಬುದು ಅವರಿಗೆ ಚೆನ್ನಾಗಿಯೇ ತಿಳಿದಿದೆ. ಆದ್ದರಿಂದ, ರಾಷ್ಟ್ರದ ಸುಧಾರಣೆಗಾಗಿ ಸಂಭಾಷಣೆ ಮತ್ತು ಅಭಿಯಾನಗಳಲ್ಲಿ ಭಾಗವಹಿಸುವಂತೆ ಅವರು ಕಲಾವಿದರನ್ನು ಪ್ರೇರೇಪಿಸುತ್ತಿದ್ದಾರೆ.
ಸಮಾವೇಶಗಳಲ್ಲಿ ಸಾಂಪ್ರದಾಯಿಕ ಉಡುಗೆ ಮತ್ತು ಪೇಟ ಧರಿಸುವುದು
ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಎಲ್ಲೇ ಸಮಾವೇಶ ನಡೆಸಿದರೂ ಮೋದಿ ಆಯಾ ಪ್ರದೇಶಗಳ ಸಾಂಪ್ರದಾಯಿಕ ಉಡುಗೆ ಅಥವಾ ಪೇಟಗಳನ್ನು ಧರಿಸುತ್ತಾರೆ. 2014ರ ಚುನಾವಣಾ ಅಭಿಯಾನದಿಂದಲೂ ಅವರು ಇದನ್ನು ಮುಂದುವರೆಸಿದ್ದಾರೆ. ಬುಡಕಟ್ಟು ಜನರು ವರ್ಣರಂಜಿತ ಸುಂದರ ಪೇಟಗಳಿಂದ ಹಿಡಿದು ಮೈಸೂರು ಪೇಟಗಳನ್ನೂ ಅವರು ಧರಿಸಿದ್ದಾರೆ. ಈ ಮೂಲಕ ಆಯಾ ಪ್ರದೇಶದ ಸಂಸ್ಕೃತಿ ಮತ್ತು ಸಂಪ್ರದಾಯಕ್ಕೆ ಗೌರವಗಳನ್ನು ನೀಡುತ್ತಾರೆ. ಅವರ ಈ ಪದ್ಧತಿ ಆಯಾ ಪ್ರದೇಶದ ಜನರನ್ನು ಬೆಸೆಯುವ ಒಂದು ವಿಧಾನವೂ ಹೌದು.
ಸೈನಿಕರೊಂದಿಗೆ ದೀಪಾವಳಿ ಆಚರಣೆ
ಅಧಿಕಾರಕ್ಕೆ ಬಂದಾಗಿನಿಂದ ಮೋದಿಯವರು ಪ್ರತಿ ವರ್ಷ ದೀಪಾವಳಿಯನ್ನು ಸೈನಿಕರೊಂದಿಗೆ ಆಚರಿಸುವ ಪದ್ಧತಿಯನ್ನು ರೂಢಿಸಿಕೊಂಡು ಬಂದಿದ್ದಾರೆ. ದೇಶಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟ ಯೋಧರೊಂದಿಗೆ ದೀಪಾವಳಿಯ ಸಂಭ್ರಮವನ್ನು ಹಂಚಿಕೊಳ್ಳುವ ಉದ್ದೇಶ ಅವರದ್ದು. 2014ರಲ್ಲಿ ಸಿಯಾಚಿನ್ನಲ್ಲಿ, 2015ರಲ್ಲಿ ಅಮೃತಸರದ ಖಾಸಾದಲ್ಲಿನ ಡೋಗ್ರೈ ಯುದ್ಧ ಸ್ಮಾರಕದಲ್ಲಿ, 2016ರಲ್ಲಿ ಹಿಮಾಚಲ ಪ್ರದೇಶದ ಕಿನ್ನೌರ್ನಲ್ಲಿ ಐಟಿಬಿಪಿಯಲ್ಲಿ ಭಾರತೀಯ ಸೇನೆ ಮತ್ತು ಡೋಗ್ರಾ ಸ್ಕೌಟ್ಸ್ ಜೊತೆ, 2017ರಲ್ಲಿ ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆಯ ಗುರೆಜ್ ಪ್ರದೇಶದ ಸೈನಿಕರೊಂದಿಗೆ, 2018ರಲ್ಲಿ ಇಂಡೋ-ಚೀನಾ ಗಡಿಯ ಬಳಿಯ ಉತ್ತರಾಖಂಡದ ಹರ್ಷಿಲ್ನಲ್ಲಿರುವ ಐಟಿಬಿಪಿಯೊಂದಿಗೆ, 2019ರಲ್ಲಿ ಜಮ್ಮು ಮತ್ತು ಕಾಶ್ಮೀರದ ರಾಜೌರಿಯಲ್ಲಿ ಸೇನಾ ಯೋಧರೊಂದಿಗೆ ಅವರು ದೀಪಾವಳಿಯನ್ನು ಆಚರಣೆ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ದೇಶದ ಪ್ರಧಾನಿ ಮಾತ್ರವಲ್ಲ, ಭಾರತೀಯ ಸಂಸ್ಕೃತಿಯ ರಾಯಭಾರಿಯೂ ಹೌದು. ಅವರ ತಳಮಟ್ಟದ ವಿಭಿನ್ನ ಸಂವಹನ ಕೌಶಲ ಅವರನ್ನು ದೇಶದ ಉದ್ದಗಲದ ಜನರೊಂದಿಗೆ ಬೆಸೆದಿದೆ. ಜನರ ನಾಡಿಮಿಡಿತವನ್ನು ಚೆನ್ನಾಗಿಯೇ ಅರ್ಥ ಮಾಡಿಕೊಂಡಿರುವ ಅವರು, ವಿಭಿನ್ನ ಮತ್ತು ಅತ್ಯಂತ ಚಾಣಾಕ್ಷ ಅಭಿಯಾನ ಮತ್ತು ಕಾರ್ಯಕ್ರಮಗಳ ಮೂಲಕ ಮೂಲೆ ಮೂಲೆಯ ಜನರನ್ನೂ ತಲುಪಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.