ನವದೆಹಲಿ: ಕೊರೋನವೈರಸ್ ಹರಡುವುದನ್ನು ತಡೆಗಟ್ಟುವ ಸಲುವಾಗಿ ಚೀನಾ, ಇಟಲಿ, ಇರಾನ್, ಕೊರಿಯಾ ರಿಪಬ್ಲಿಕ್, ಜಪಾನ್, ಫ್ರಾನ್ಸ್, ಸ್ಪೇನ್ ಮತ್ತು ಜರ್ಮನಿ ದೇಶಗಳಿಗೆ ಪ್ರಯಾಣಿಸುವುದನ್ನು ತಡೆಯುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ಜನರಲ್ಲಿ ಮನವಿ ಮಾಡಿಕೊಂಡಿದೆ. ವಿದೇಶಗಳಿಗೆ ಅನಿವಾರ್ಯವಲ್ಲದ ಪ್ರಯಾಣವನ್ನು ತಪ್ಪಿಸುವಂತೆ ಸಲಹೆಯನ್ನು ನೀಡಿದೆ.
ವಿದೇಶ ಪ್ರವಾಸ ಮಾಡಲು ಉದ್ದೇಶಿಸಿರುವ ಭಾರತೀಯರಿಗೆ COVID-19 ಗಾಗಿ ಹೆಚ್ಚುವರಿ ಪ್ರಯಾಣ ಸಲಹೆಗಳನ್ನು ನೀಡುತ್ತಿರುವ ಸಚಿವಾಲಯವು, ವಿಶ್ವದಾದ್ಯಂತ 100ಕ್ಕೂ ಹೆಚ್ಚು ದೇಶಗಳಲ್ಲಿ ಈಗ COVID-19 ಪ್ರಕರಣಗಳು ವರಿದಿಯಾಗಿವೆ ಎಂದಿದೆ.
ಸಚಿವಾಲಯದ ಸಲಹೆಯ ಪ್ರಕಾರ, ಈ ದೇಶಗಳಿಗೆ ಪ್ರಯಾಣಿಸುವ ಜನರು ಅಥವಾ ವಿದೇಶ ಪ್ರವಾಸ ಮಾಡಿದವರು ತಮ್ಮ ವಾಸ್ತವ್ಯದ ಸಮಯದಲ್ಲಿ ಅಥವಾ ವಿಮಾನ ನಿಲ್ದಾಣಗಳಲ್ಲಿ COVID-19 ಪೀಡಿತ ಜನರೊಂದಿಗೆ ಸಂಪರ್ಕಕ್ಕೆ ಬರಬಹುದು. ಹೀಗಾಗಿ ವಿದೇಶಿ ಪ್ರಯಾಣ ತಪ್ಪಿಸುವುದು ಒಳಿತು.
ಈ ದೇಶಗಳಲ್ಲಿ, ಕೊರೋನವೈರಸ್ ಪೀಡಿತರ ಸಂಖ್ಯೆ ಸಾಕಷ್ಟು ಹೆಚ್ಚಿದೆ ಮತ್ತು ಸಾವುಗಳು ಕೂಡ ವರದಿಯಾಗಿದೆ. ಈ ದೇಶಗಳಿಗೆ ಪ್ರಯಾಣಿಸಿದವರು ಹೆಚ್ಚಿನ ಮಟ್ಟದ ಅಪಾಯವನ್ನು ಎದುರಿಸುತ್ತಾರೆ.
“ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಭಾರತೀಯ ನಾಗರಿಕರಿಗೆ ವಿದೇಶಗಳಿಗೆ ಅನಿವಾರ್ಯವಲ್ಲದ ಪ್ರಯಾಣವನ್ನು ತಪ್ಪಿಸುವಂತೆ ಸೂಚಿಸಲಾಗಿದೆ. ಚೀನಾ, ಇಟಲಿ, ಇರಾನ್, ಕೊರಿಯಾ , ಜಪಾನ್, ಫ್ರಾನ್ಸ್, ಸ್ಪೇನ್ ಮತ್ತು ಜರ್ಮನಿಗಳಿಗೆ ಪ್ರಯಾಣಿಸುವುದನ್ನು ತಡೆಯುವಂತೆ ಅವರಿಗೆ ಮತ್ತಷ್ಟು ಸ್ಪಷ್ಟವಾಗಿ ಸೂಚಿಸಲಾಗಿದೆ” ಎಂದು ಆರೋಗ್ಯ ಸಚಿವಾಲಯ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.