ವಿನಾಯಕ ದಾಮೋದರ್ ದಾಸ್ ಸಾವರ್ಕರ್. ಭಾರತ ಕಂಡ ಮಹಾನ್ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರು. ಲಂಡನ್ನಲ್ಲಿರುವ ಹೈಗೇಟ್ನ 65 ಕ್ರೋಮ್ವೆಲ್ ಅವೆನ್ಯೂನಲ್ಲಿರುವ ಮನೆಯಲ್ಲಿ ಇಂದಿಗೂ ಅವರ ಹೆಸರು ರಾರಾಜಿಸುತ್ತಿದೆ. 1905 ರಿಂದ 1910 ರವರೆಗೆ “ಇಂಡಿಯಾ ಹೌಸ್” ಅಂತ ಆ ಮನೆಯನ್ನು ಕರೆಯಲಾಗುತ್ತಿತ್ತಂತೆ. ವೀರೇಂದ್ರನಾಥ್ ಚಟ್ಟೋಪಾಧ್ಯಾಯ, ಲಾಲಾ ಹರ್ ದಯಾಳ್, ಸರ್ ವಿಲಿಯಂ ಹಟ್ ಕರ್ಜನ್ ವಿಲ್ಲಿಯನ್ನು ಹತ್ಯೆ ಮಾಡಿದ ಮದನ್ ಲಾಲ್ ಧಿಂಗ್ರಾ ಸೇರಿದಂತೆ ಹಲವಾರು ಭಾರತೀಯ ಸ್ವಾತಂತ್ರ್ಯ ಹೋರಾಟಗಾರರು ಇಲ್ಲಿಗೆ ಆಗಾಗ ಬರುತ್ತಿದ್ದರು.
ಇಂಡಿಯಾ ಹೌಸ್ನಲ್ಲಿ ವೀರ ಸಾವರ್ಕರ್ ಅವರು ವಾಸಿಸಿದ್ದ ಕುರುಹನ್ನು ಬ್ರಿಟಿಷರು ಇಂದಿಗೂ ಉಳಿಸಿಕೊಂಡಿದ್ದಾರೆ. ಇಂಡಿಯಾ ಹೌಸ್ ಗೇಟಿನ ಮುಂದೆ ‘ಭಾರತೀಯ ದೇಶಭಕ್ತ ಮತ್ತು ತತ್ವಜ್ಞಾನಿ, ವಿನಾಯಕ ದಾಮೋದರ್ ಸಾವರ್ಕರ್, 1883-1966ರಲ್ಲಿ ಇಲ್ಲಿ ನೆಲೆಸಿದ್ದರು” ಎಂದು ಬರೆಯಲಾಗಿದೆ.
ಹಿಂದುತ್ವ ಐಕಾನ್ ಆಗಿರುವ ಸಾವರ್ಕರ್ ಅವರು 1906 ರಿಂದ 1909 ರವರೆಗೆ ಗ್ರೇಸ್ ಇನ್ ನಲ್ಲಿ ಕಾನೂನು ಅಧ್ಯಯನ ಮಾಡುವಾಗ ಇಂಡಿಯಾ ಹೌಸ್ನಲ್ಲಿ ವಾಸವಾಗಿದ್ದರು. ಆಕ್ಸ್ಫರ್ಡ್ನಲ್ಲಿ ಅಧ್ಯಯನ ಮಾಡಿದ್ದ ವಕೀಲರಾದ ಶ್ಯಾಮ್ಜಿ ಕೃಷ್ಣ ವರ್ಮಾ ಅವರು ಈ ಮನೆಯನ್ನು ಬ್ರಿಟನ್ನಲ್ಲಿ ಓದುತ್ತಿರುವ ಭಾರತೀಯ ವಿದ್ಯಾರ್ಥಿಗಳಿಗಾಗಿ ಸ್ಥಾಪನೆ ಮಾಡಿದ್ದರು. ಇಂಡಿಯಾ ಹೌಸ್ ಮತ್ತು ಇಂಡಿಯನ್ ಹೋಮ್ ರೂಲ್ ಸೊಸೈಟಿಯನ್ನು ಲಂಡನ್ನಲ್ಲಿ ಸ್ಥಾಪಿಸುವುದರ ಜೊತೆಗೆ, ವರ್ಮಾ ದಿ ಇಂಡಿಯನ್ ಸೋಶಿಯಾಲಜಿಸ್ಟ್ ಎಂಬ ಆರಂಭಿಕ ವಸಾಹತುಶಾಹಿ ವಿರೋಧಿ ಪ್ರಕಟಣೆಯನ್ನು ಸಹ ಸಂಪಾದಿಸಿದ್ದಾರೆ. 2010 ರಲ್ಲಿ, ಆ ಸಮಯದಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರು ಕಚ್ನ ಮಾಂಡ್ವಿ ಪಟ್ಟಣದ ಹೈಗೇಟ್ ಮನೆಯ ಪ್ರತಿಕೃತಿಯನ್ನು ಅನಾವರಣಗೊಳಿಸಿದರು, ಇದು ವರ್ಮ ಅವರ ಜನ್ಮಸ್ಥಳವಾಗಿತ್ತು.
ವಿನಾಯಕ ದಾಮೋದರ ಸಾವರ್ಕರ್ ತಮ್ಮ ಸಂಪೂರ್ಣ ಜೀವನವನ್ನೇ ಭಾರತದ ಸ್ವಾತಂತ್ರ್ಯಕ್ಕಾಗಿ ಮುಡಿಪಾಗಿಟ್ಟ ಮಹಾನ್ ವಾಗ್ಮಿ, ವಿವಿಧ ವಿಷಯಗಳ ಬಗ್ಯೆ ನಿರರ್ಗಳವಾಗಿ ಬರೆಯಬಲ್ಲ ಲೇಖಕ, ಇತಿಹಾಸಕಾರ, ಕವಿ, ತತ್ವಶಾಸ್ತ್ರಜ್ಞ, ಮತ್ತು ಸಮಾಜಸೇವಕ. ಅವರನ್ನು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಅತಿ ದೊಡ್ಡ ಕ್ರಾಂತಿಕಾರಿ ಎಂದು ಪರಿಗಣಿಸಲಾಗುತ್ತದೆ.
ಆದರೆ ಭಾರತದಲ್ಲೇ ಕೆಲವರು ವೀರ ಸಾವರ್ಕರ್ ಅವರ ಬಗ್ಗೆ ತುಚ್ಛವಾಗಿ ಮಾತನಾಡುತ್ತಾರೆ. ಅವರನ್ನು ಒಬ್ಬ ಕೋಮುವಾದಿ ಎಂದು ಪ್ರತಿಬಿಂಬಿಸುವ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಬ್ರಿಟಿಷರ ವಿರುದ್ಧದ ಅವರ ಹೋರಾಟವನ್ನು ಅಪಹಾಸ್ಯಕ್ಕೀಡು ಮಾಡುತ್ತಿದ್ದಾರೆ. ಆದರೆ ಸ್ವತಃ ಬ್ರಿಟಿಷರೇ ತಮ್ಮ ನೆಲದಲ್ಲಿ ಅವರನ್ನೊಬ್ಬ ದೇಶಪ್ರೇಮಿ ಮತ್ತು ತತ್ವಜ್ಞಾನಿ ಎಂದು ಬಣ್ಣಿಸಿದ್ದಾರೆ. ಸಾವರ್ಕರ್ ಅವರು ಎಷ್ಟು ಧೀಮಂತ ವ್ಯಕ್ತಿಯಾಗಿದ್ದರು ಎಂಬುದಕ್ಕೆ ಇದೊಂದು ಪುಟ್ಟ ನಿದರ್ಶನವಷ್ಟೇ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.