ನವದೆಹಲಿ: ಕಳೆದ 64 ವರ್ಷಗಳ ಹಿಂದೆ ಭಾರತವು ಇಸ್ರೇಲ್ ಅನ್ನು ಒಂದು ರಾಷ್ಟ್ರವಾಗಿ ಪರಿಗಣಿಸಿತ್ತು. ಇದರ ಮತ್ತೊಂದು ವಿಶೇಷವೆಂದರೆ ಆ ದಿನ ಮತ್ತು ಆ ಸಮಯದಲ್ಲೇ ಭಾರತದ ಪ್ರಧಾನಿ ನರೇಂದ್ರ ಮೋದಿ ಜನಿಸಿದ್ದರು.
ಇದುಮೋದಿಯವರು ಭಾರತದ ಪ್ರಧಾನಿಯಾಗಿ ಇಸ್ರೇಲ್ಗೆ ನೀಡುತ್ತಿರುವ ಮೊದಲ ಭೇಟಿಯಾಗಿದೆ. ಪ್ರಧಾನಿ ಮೋದಿಯವರು ಪ್ರಥಮ ಬಾರಿಗೆ ಇಸ್ರೇಲ್ ಪ್ರವಾಸ ಕೈಗೊಂಡಿದ್ದು, ಇಸ್ರೇಲ್ ರಾಯಭಾರಿ ಡೆನಿಯಲ್ ಕಾರ್ಮನ್ ಅವರು ಭಾರತದೊಂದಿಗೆ ತಮ್ಮ ದೇಶದ ಭವಿಷ್ಯ ಮತ್ತು ಮುಂಬರುವ ಟೆಲ್ ಅವೀವ್ ಯಾತ್ರೆಯ ಕುರಿತು ದೈವೀಯ ರೀತಿಯ ಅವಕಾಶವನ್ನು ನೋಡುತ್ತಿದೆ.
ಭಾರತ ಮತ್ತು ಇಸ್ರೇಲ್ ನಡುವಿನ ಅಧಿಕೃತ ಮತ್ತು ರಾಜತಾಂತ್ರಿಕ ಸಂಬಂಧಗಳು ೧೯೯೨ರಿಂದ ಖಾಯಂಗೊಂಡಿದ್ದು, ನರೇಂದ್ರ ಮೋದಿ ಹುಟ್ಟಿದ ಅದೇ ಸಂದರ್ಭ ಸೆ.17, 1950ರಲ್ಲಿ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದ ಬಳಿಕ ಭಾರತದಿಂದ ಒಂದು ಅಧಿಕಾರಯುತ ರಾಷ್ಟ್ರವಾಗಿ ಮಾನ್ಯತೆ ಪಡೆದಿತ್ತು ಎಂದು ಕಾರ್ಮನ್ ಹೇಳಿದ್ದಾರೆ.
ಮೋದಿಯವರ ಇಸ್ರೇಲ್ ಪ್ರವಾಸದ ಕುರಿತು ಬಹಳ ಉತ್ಸುಕರಾಗಿರುವ ಅವರು, ಮೋದಿಯವರ ಆಗಮನದ ನಿರೀಕ್ಷೆಯಲ್ಲಿದ್ದಾರೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.