ನವದೆಹಲಿ: ದೂರದ ಚೀನಾದಲ್ಲಿ ಸದ್ದು ಮಾಡುತ್ತಿದ್ದ ಕೊರೋನವೈರಸ್ ಇದೀಗ ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಆತಂಕವನ್ನು ಸೃಷ್ಟಿಸಿದೆ. ಭಾರತದಲ್ಲೂ ಹಲವು ಕೊರೋನವೈರಸ್ ಪ್ರಕರಣಗಳು ಪತ್ತೆ ಆಗಿವೆ. ಇದೀಗ ಬೆಂಗಳೂರಿನಲ್ಲಿ ಕೆಲ ದಿನಗಳ ಕಾಲ ನೆಲೆಸಿದ್ದ ಹೈದರಾಬಾದ್ ಟೆಕ್ಕಿ ಒಬ್ಬರಿಗೆ ಕೊರೋನವೈರಸ್ ಇರುವುದು ದೃಢವಾಗಿದೆ.
ಈ ಹಿನ್ನಲೆಯಲ್ಲಿ ಟೆಕ್ಕಿಯೊಂದಿಗೆ ಒಡನಾಡದಲ್ಲಿದ್ದ ಜನರನ್ನು ತೀವ್ರ ಆರೋಗ್ಯ ನಿಗಾದಲ್ಲಿ ಇಡಲಾಗಿದೆ. ಆರೋಗ್ಯ ಸಚಿವ ಶ್ರೀರಾಮುಲು ಅವರು ತಮ್ಮ ಅಧಿಕೃತ ನಿವಾಸದಲ್ಲಿ ಆರೋಗ್ಯ ಇಲಾಖೆಯ ಕಾರ್ಯದರ್ಶಿಗಳೊಂದಿಗೆ, ಆಯುಕ್ತರು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.
ಟ್ವಿಟ್ ಮಾಡಿರುವ ಶ್ರೀರಾಮುಲು ಅವರು, “ಹೈದರಾಬಾದಿನ ಕೊರೋನವೈರಸ್ ಸೋಂಕು ಪೀಡಿತ ವ್ಯಕ್ತಿಯ ಬೆಂಗಳೂರಿನಿಂದ ತೆರಳಿದ್ದಾಗಿ ತಿಳಿದು ಬಂದಿದೆ. ಆದ್ದರಿಂದ, ವ್ಯಕ್ತಿಯ ಸ್ಥಳಿಯ ನಿವಾಸದಲ್ಲಿ ನೆಲೆಸಿರುವ ಎಲ್ಲರನ್ನೂ ಗುರುತಿಸಿ, ಅವರ ಆರೋಗ್ಯದ ಮೇಲೆ ನಿಗಾವಹಿಸಲಾಗಿದೆ” ಎಂದಿದ್ದಾರೆ.
ದುಬೈನಿಂದ ವಾಪಾಸ್ಸಾಗಿದ್ದ ವ್ಯಕ್ತಿಯು ಬೆಂಗಳೂರಿನಲ್ಲಿ ನೆಲೆಸಿದ್ದರು. ದುಬೈನಲ್ಲಿ ಅವರು ಹಾಕಾಂಗ್ ಮೂಲದ ಜನರೊಂದಿಗೆ ಬೆರೆತ ಹಿನ್ನಲೆಯಲ್ಲಿ ಸೋಂಕು ತಗುಲಿದೆ ಎಂದು ಹೇಳಲಾಗಿದೆ. ಕೆಲ ದಿನಗಳ ಕಾಲ ಬೆಂಗಳೂರಿನಲ್ಲಿ ಇದ್ದ ಬಳಿಕ ಅವರು ಹೈದರಾಬಾದಿಗೆ ತೆರಳಿದ್ದಾರೆ. ಅಲ್ಲಿ ಅವರಿಗೆ ಸೋಂಕು ಇರುವುದು ದೃಢವಾಗಿದೆ. ಈ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಅವರ ಜೊತೆ ಇದ್ದ ವ್ಯಕ್ತಿಗಳನ್ನು ಆರೋಗ್ಯ ನಿಗಾದಲ್ಲಿ ಇಡಲಾಗಿದೆ.
ಜಗತ್ತಿನಾದ್ಯಂತ ಕೊರೋನವೈರಸ್ ಸೋಂಕಿಗೆ 3 ಸಾವಿರಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ. 80 ಸಾವಿರಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.