ನವದೆಹಲಿ: ರಷ್ಯಾ ಮತ್ತು ಪೋಲ್ಯಾಂಡ್ ಸಂಸ್ಥೆಗಳನ್ನು ಹಿಂದಿಕ್ಕುವ ಮೂಲಕ ಭಾರತವು ಅರ್ಮೇನಿಯಾಗೆ ನಾಲ್ಕು ದೇಶೀಯವಾಗಿ ನಿರ್ಮಿಸಲಾದ ವೆಪನ್ ಲೊಕೇಟಿಂಗ್ ರಾಡಾರ್ (ಶತ್ರುಗಳ ಶಸ್ತ್ರಾಸ್ತ್ರವಿರುವ ಜಾಗ ಪತ್ತೆ ಮಾಡುವ ರಾಡಾರ್) ಗಳನ್ನು ಪೂರೈಸಲು $40 ಮಿಲಿಯನ್ ಡಾಲರ್ ಮೌಲ್ಯದ ಒಪ್ಪಂದವನ್ನು ಪಡೆದುಕೊಂಡಿದೆ.
“ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಅಭಿವೃದ್ಧಿಪಡಿಸಿದ ಮತ್ತು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ತಯಾರಿಸಿದ ನಾಲ್ಕು ಸ್ವಾತಿ ವೆಪನ್ ಲೊಕೇಟಿಂಗ್ ರಾಡಾರ್ಗಳನ್ನು ಯುರೋಪಿನ ಅರ್ಮೇನಿಯಾಗೆ ಪೂರೈಸುವ ಒಪ್ಪಂದವಾಗಿದೆ” ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಅರ್ಮೇನಿಯಾಗೆ ಸಲಕರಣೆಗಳ ಪೂರೈಕೆ ಈಗಾಗಲೇ ಪ್ರಾರಂಭವಾಗಿದೆ ಮತ್ತು ಇದು ರಕ್ಷಣಾ ಕ್ಷೇತ್ರದಲ್ಲಿನ ‘ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮದ ದೊಡ್ಡ ಸಾಧನೆ ಎಂದೇ ಪರಿಗಣಿಸಲಾಗುತ್ತಿದೆ.
ರಷ್ಯಾ ಮತ್ತು ಪೋಲೆಂಡ್ ನೀಡುವ ವ್ಯವಸ್ಥೆಗಳ ಪ್ರಯೋಗಗಳನ್ನು ಅರ್ಮೇನಿಯನ್ನರು ನಡೆಸಿದ್ದಾರೆ. ಅವುಗಳು ಚೆನ್ನಾಗಿವೇ ಇವೆ. ಆದರೂ ಅವರು ವಿಶ್ವಾಸಾರ್ಹ ಭಾರತೀಯ ವ್ಯವಸ್ಥೆಯನ್ನು ಖರೀದಿ ಮಾಡಲು ನಿರ್ಧರಿಸಿದರು ಎಂದು ಮೂಲಗಳು ತಿಳಿಸಿವೆ.
ಸ್ವಾತಿ ವೆಪನ್ ಲೊಕೇಟಿಂಗ್ ರಾಡಾರ್ಗಳು ಶತ್ರುಗಳ ಶಸ್ತ್ರಾಸ್ತ್ರಗಳಾದ ರಾಕೆಟ್, ಶೆಲ್ಸ್, ಮೋರ್ಟಾರ್ ಮುಂತಾದುವುಗಳು ಇರುವ ಜಾಗದ ಮಾಹಿತಿಯನ್ನು ವೇಗ, ನಿಖರ ಮತ್ತು ಸ್ವಯಂಚಾಲಿತವಾಗಿ 50ಕಿಮೀ ವ್ಯಾಪ್ತಿಯೊಳಗೆ ನೀಡಬಲ್ಲವು.
ರಾಡಾರ್ ಏಕಕಾಲದಲ್ಲಿ ವಿವಿಧ ಆಯುಧಗಳಿಂದ ಹಾರಿಸಲಾದ ಅನೇಕ ಸ್ಪೋಟಕಗಳನ್ನು ವಿವಿಧ ಸ್ಥಳಗಳಲ್ಲಿ ನಿಭಾಯಿಸಬಲ್ಲದು. ಭಾರತೀಯ ಸೇನೆಯು ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆಯ ಉದ್ದಕ್ಕೂ ತನ್ನ ಕಾರ್ಯಾಚರಣೆಗಳಿಗೆ ಇದೇ ರಾಡಾರ್ಗಳನ್ನು ಬಳಸುತ್ತಿದೆ, ಇಲ್ಲಿ ಯೋಧರು ಪಾಕಿಸ್ಥಾನದ ದಾಳಿಯ ಮೂಲವನ್ನು ಪತ್ತೆ ಮಾಡುತ್ತಾರೆ. ಈ ವ್ಯವಸ್ಥೆಯನ್ನು 2018 ರಲ್ಲಿ ಸೈನ್ಯದ ಬಳಕೆಗೆ ನೀಡಲಾಯಿತು.
ಯುರೋಪಿಯನ್ ಮತ್ತು ಇತರ ಪ್ರತಿಸ್ಪರ್ಧಿಗಳಿಗಿಂತ ಅಗ್ಗವಾಗಿರುವ ತನ್ನ ದೇಶೀಯ ವ್ಯವಸ್ಥೆಗಳ ಮಾರಾಟಕ್ಕಾಗಿ ಭಾರತವು ಹೊಸ ಮಾರುಕಟ್ಟೆಯನ್ನು ತೆರೆಯಲು ಈ ರಫ್ತು ಆರ್ಡರ್ ಸಹಾಯ ಮಾಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಕ್ಷಣಾ ರಫ್ತು ಹೆಚ್ಚಿಸಲು ಆಗ್ನೇಯ ಏಷ್ಯಾ, ಲ್ಯಾಟಿನ್ ಅಮೆರಿಕ ಮತ್ತು ಮಧ್ಯಪ್ರಾಚ್ಯ ದೇಶಗಳ ಇತರ ಆರ್ಡರ್ಗಳನ್ನು ಸಹ ರಕ್ಷಣಾ ಸಚಿವಾಲಯ ಎದುರು ನೋಡುತ್ತಿದೆ, ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು 35,000 ಕೋಟಿ ರೂಪಾಯಿಗಳ ಟಾರ್ಗೆಟ್ ಅನ್ನು ರೂಪಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.