ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ತಮ್ಮ 2020-21ರ ಕೇಂದ್ರ ಹಣಕಾಸು ಬಜೆಟ್ ಅವಧಿಯಲ್ಲಿ 2022 ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಕೇಂದ್ರ ಸರ್ಕಾರದ ಪ್ರಯತ್ನಗಳ ಭಾಗವಾಗಿ ಎರಡು ಹೊಸ ಯೋಜನೆಗಳನ್ನು ಘೋಷಿಸಿದರು.
ಹಾಲು, ಮಾಂಸ, ಮೀನು, ತರಕಾರಿಗಳು ಮತ್ತು ಹಣ್ಣುಗಳಂತಹ ಬೇಗ ಹಾಳಾಗುವ ವಸ್ತುಗಳಿಗಾಗಿ ತಡೆರಹಿತ ರಾಷ್ಟ್ರೀಯ ಪೂರೈಕೆ ಸರಪಳಿಯನ್ನು ನಿರ್ಮಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಹಣಕಾಸು ಸಚಿವೆ ಸೀತಾರಾಮನ್ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.
ಈ ಪ್ರಯತ್ನಗಳ ಭಾಗವಾಗಿ, ಭಾರತೀಯ ರೈಲ್ವೆ ಪಿಪಿಪಿ ಮಾದರಿಯ ಮೂಲಕ ಕಿಸಾನ್ ರೈಲು ಸೇವೆಯನ್ನು ಸ್ಥಾಪಿಸಲಿದೆ. ಈ ಸೇವೆಯಡಿಯಲ್ಲಿ, ಉತ್ಪಾದಕರಿಂದ ಮಾರುಕಟ್ಟೆಗೆ ಬೇಗ ಹಾಳಾಗುವ ವಸ್ತುಗಳನ್ನು ತ್ವರಿತವಾಗಿ ಸಾಗಿಸಲು ಎಕ್ಸ್ಪ್ರೆಸ್ ಮತ್ತು ಸರಕು ರೈಲುಗಳಲ್ಲಿ ರೆಫ್ರಿಜರೇಟೆಡ್ ಬೋಗಿಗಳನ್ನು ಸೇರಿಸಲು ನಿರ್ಧರಿಸಲಾಗಿದೆ.
ದೇಶೀಯ ಮತ್ತು ಅಂತರಾಷ್ಟ್ರೀಯ ಮಾರ್ಗಗಳಲ್ಲಿ ಕೃಷಿ ಉತ್ಪನ್ನಗಳನ್ನು ಸಾಗಿಸಲು ರೈತರಿಗೆ ಸಹಾಯ ಮಾಡಲು ನಾಗರಿಕ ವಿಮಾನಯಾನ ಸಚಿವಾಲಯವು ಕೃಷಿ ಉಡಾನ್ ಹೆಸರಿನಲ್ಲಿ ಇದೇ ರೀತಿಯ ಯೋಜನೆಯನ್ನು ಪ್ರಾರಂಭಿಸಲಿದೆ ಎಂದು ಹಣಕಾಸು ಸಚಿವರು ಹೇಳಿದ್ದಾರೆ.
ಕೃಷಿ ಉಡಾನ್ ಯೋಜನೆ ರೈತರಿಗೆ ಹೇಗೆ ಪ್ರಯೋಜನಕಾರಿಯಾಗಲಿದೆ?
ಕೃಷಿ ಉಡಾನ್ ಯೋಜನೆಯು ರೈತರಿಗೆ ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ಉತ್ತಮ ಪ್ರವೇಶವನ್ನು ನೀಡುತ್ತದೆ ಮತ್ತು ಈಶಾನ್ಯ ಮತ್ತು ಬುಡಕಟ್ಟು ಪ್ರದೇಶಗಳಿಗೆ ಸೇರಿದ ರೈತರಿಗೆ ವಿಶೇಷವಾಗಿ ಪ್ರಯೋಜನಕಾರಿಯಾಗಬಲ್ಲದು.
ಈ ಯೋಜನೆಯು ಅವರನ್ನು ದೇಶೀಯ ಮತ್ತು ಜಾಗತಿಕ ಮಾರುಕಟ್ಟೆಗಳೊಂದಿಗೆ ಪರಿಣಾಮಕಾರಿಯಾಗಿ ಸಂಪರ್ಕಿಸುವ ಗುರಿಯನ್ನು ಹೊಂದಿದೆ, ಇದರಿಂದಾಗಿ ಉತ್ಪನ್ನಗಳ ನಿಜವಾದ ಮೌಲ್ಯವನ್ನು ಅರಿತುಕೊಳ್ಳಲು ಅವರಿಗೆ ಸಹಾಯಕವಾಗುತ್ತದೆ. ಇದು ಅವರ ಆದಾಯವನ್ನು ಹೆಚ್ಚಿಸಲು ಮತ್ತು ಮಾರುಕಟ್ಟೆಯಲ್ಲಿ ಅವರ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಬಯಲು ಸೀಮೆಯ ರೈತರು ಸಹ ಯೋಜನೆಯ ಲಾಭ ಪಡೆಯುವ ನಿರೀಕ್ಷೆಯಿದೆ, ಹಾಲ್ಕಾನ್ನಂತಹ ಸಾರಿಗೆದಾರರು ಈ ಯೋಜನೆಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಹಾಲ್ಕಾನ್ – ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಮತ್ತು ಕಂಟೈನರ್ ಕಾರ್ಪೊರೇಶನ್ ಆಫ್ ಇಂಡಿಯಾ (ಕಾನ್ಕಾರ್) ಜಂಟಿ ಉದ್ಯಮ, ಉಡಾನ್ ಯೋಜನೆಯನ್ನು ನಾಸಿಕ್ಗೆ ವಿಸ್ತರಿಸುವಂತೆ ನಾಗರಿಕ ವಿಮಾನಯಾನ ಸಚಿವಾಲಯವನ್ನು ಒತ್ತಾಯಿಸಿದೆ.
ನಾಸಿಕ್ ಮತ್ತು ರಾಜ್ಯದ ಇತರ ಭಾಗಗಳಿಂದ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳನ್ನು ಸಾಗಿಸುವ ಕಾರ್ಯದಲ್ಲಿ ಹಾಲ್ಕಾನ್ ಈಗಾಗಲೇ ತೊಡಗಿಸಿಕೊಂಡಿದೆ.
ಪ್ರಸ್ತುತ, ನಾಸಿಕ್ನಿಂದ ಹೆಚ್ಚಿನ ಉತ್ಪನ್ನಗಳನ್ನು ರಸ್ತೆ ಮೂಲಕ ಮೊದಲು ಮುಂಬೈಗೆ ಕಳುಹಿಸಲಾಗುತ್ತದೆ, ನಂತರ ಅಲ್ಲಿಂದ ವಿಮಾನ ಅಥವಾ ಹಡಗು ಮೂಲಕ ವಿದೇಶಕ್ಕೆ ಸಾಗಿಸಲಾಗುತ್ತದೆ ಎಂದು ಹಾಲ್ಕಾನ್ ಅಧಿಕಾರಿಗಳು ಉಲ್ಲೇಖಿಸಿದ್ದಾರೆ.
ಹೀಗಾಗಿ, ಈ ಯೋಜನೆಯಡಿ ನಾಸಿಕ್ನಿಂದಲೇ ನೇರ ಸರಕು ಹಾರಾಟಗಳು ಪ್ರಾರಂಭವಾದರೆ, ರಫ್ತುದಾರರಿಗೆ ರಸ್ತೆ ಸಾರಿಗೆಗಾಗಿ ಪ್ರತಿ ಟನ್ಗೆ 2,500 ರೂ.ಗಳನ್ನು ವ್ಯಯಿಸುವುದು ತಪ್ಪುತ್ತದೆ.
ಈ ಯೋಜನೆಯು ರೈತರು ತಮ್ಮ ಉತ್ಪನ್ನಗಳನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉತ್ತಮ ದೇಶೀಯ ಉತ್ಪನ್ನಗಳ ಸಂದರ್ಭದಲ್ಲಿ ಉತ್ತಮ ಬೆಲೆಗೆ ಮಾರಾಟ ಮಾಡುವುದಕ್ಕೂ ಪ್ರಯೋಜನಕಾರಿಯಾಗಲಿದೆ.
ಕಿಸಾನ್ ರೈಲು ಯೋಜನೆ ಸಮರ್ಪಕವಾಗಿ ಕಾರ್ಯಗತಗೊಂಡರೆ ಗೇಮ್ ಚೇಂಜರ್ ಆಗಿ ಪರಿಣಮಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಕೃಷಿ ಉಡಾನ್ನಂತೆಯೇ, ಕಿಸಾನ್ ರೈಲು ಯೋಜನೆಯನ್ನು ಕೂಡ ಕೃಷಿ-ಉದ್ಯಮದ ವಿವಿಧ ಪಾಲುದಾರರು ಸ್ವಾಗತಿಸಿದ್ದಾರೆ. ಈ ಯೋಜನೆಯ ಪ್ರಮುಖ ಫಲಾನುಭವಿಗಳಲ್ಲಿ ಬಂಗಾಳದ ತರಕಾರಿ ಮತ್ತು ತೋಟಗಾರಿಕೆ ಕ್ಷೇತ್ರವೂ ಒಂದು ಎಂದು ನಿರೀಕ್ಷಿಸಲಾಗಿದೆ. 29.55 ದಶಲಕ್ಷ ಟನ್ ಉತ್ಪಾದನೆಯನ್ನು ಪಡೆಯುವ ಮೂಲಕ ಬಂಗಾಳವು 2018-19ನೇ ಸಾಲಿನಲ್ಲಿ ಭಾರತದ ಅತಿದೊಡ್ಡ ತರಕಾರಿ ಉತ್ಪಾದನಾ ರಾಜ್ಯವಾಗಿದೆ. ಇದು ಭಾರತದ ಒಟ್ಟು ತರಕಾರಿ ಉತ್ಪಾದನೆಯ ಶೇಕಡಾ 15.9ರಷ್ಟಾಗಿದೆ.
ಆದರೆ, ಸರಿಯಾದ ತಾಪಮಾನ ನಿಯಂತ್ರಿತ ಸಾರಿಗೆ ಸೇವೆಗಳ ಕೊರತೆಯಿಂದಾಗಿ ಇತರ ರಾಜ್ಯಗಳಿಗೆ ತರಕಾರಿ, ಹಣ್ಣು ಮತ್ತು ಹೂವಿನ ರಫ್ತಿನಲ್ಲಿ ಶೇಕಡಾ 18 ರಿಂದ 25 ರಷ್ಟು ವ್ಯರ್ಥವಾಗುತ್ತದೆ. ಅಂತಹ ಹಾಳಾಗುವ ಹೆಚ್ಚಿನ ಉತ್ಪನ್ನಗಳನ್ನು ಟ್ರಕ್ಗಳ ಮೂಲಕ ಕಳುಹಿಸಲಾಗುತ್ತದೆ, ಅವು ಯಾವುದೇ ರೀತಿಯ ತಾಪಮಾನ ನಿಯಂತ್ರಣವನ್ನು ಹೊಂದಿರುವುದಿಲ್ಲ. ಹೀಗೆ ಅದು ತನ್ನ ನಿಗದಿತ ಗುರಿಯನ್ನು ತಲುಪುವ ಹೊತ್ತಿಗೆ ಒಣಗಿ ಹೋಗುತ್ತವೆ, ಹೀಗಾಗಿ ರೈತರು ತಮ್ಮ ಉತ್ಪನ್ನಗಳಿಗೆ ಉತ್ತಮ ಮೌಲ್ಯವನ್ನು ಪಡೆಯುಲೂ ಸಾಧ್ಯವಾಗುವುದಿಲ್ಲ. ಆದರೆ ಕೃಷಿ ರೈಲು ಯೋಜನೆಯ ಪರಿಚಯದೊಂದಿಗೆ ಈ ಸಮಸ್ಯೆ ಸರಿಹೋಗಬಹುದು.
ಅಂತೆಯೇ, ಆಂಧ್ರಪ್ರದೇಶವೂ ಸಹ ಈ ಯೋಜನೆಯ ಫಲಾನುಭವಿಗಳಾಗಿ ಹೊರಹೊಮ್ಮಬಹುದು, ವಿಶೇಷವಾಗಿ ತೋಟಗಾರಿಕೆ ಕ್ಷೇತ್ರದ ಬಾಳೆಹಣ್ಣು, ಮಾವು ಮತ್ತು ಸಿಹಿ ಲಿಂಬೆದಂತಹ ಬೆಳೆಗಳಿಗೆ ಇದು ಸಹಾಯಕವಾಗಬಲ್ಲದು. ಟೊಮೆಟೊದಂತಹ ತರಕಾರಿಗಳನ್ನು ಸಹ ಆಂಧ್ರದಿಂದ ಇತರ ಭಾಗಗಳಿಗೆ ರಫ್ತು ಮಾಡಲಾಗುತ್ತದೆ. ಈ ಯೋಜನೆಯು ರಾಜ್ಯದ ಇತರ ಭಾಗಗಳಿಗೆ ಉತ್ಪನ್ನಗಳನ್ನು ಪರಿಣಾಮಕಾರಿಯಾಗಿ ರಫ್ತು ಮಾಡಲು ಸಹಾಯ ಮಾಡುವ ಮೂಲಕ ರಾಜ್ಯದ ರೈತರಿಗೆ ಕೊಯ್ಲು ನಂತರದ ನಷ್ಟವನ್ನು ಕಡಿಮೆ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.
ಭಾರತೀಯ ರೈಲ್ವೆಯ ಒಂದು ಮೂಲಗಳ ಪ್ರಕಾರ, ಈ ಒಂಬತ್ತು ಶೈತ್ಯೀಕರಿಸಿದ ವ್ಯಾನ್ಗಳು ಈಗಾಗಲೇ ರೈಲ್ವೇ ಜಾಲದ ಭಾಗವಾಗಿರುವ ಕಾರಣ ರೈತರು ಈ ಯೋಜನೆಯನ್ನು ಪಡೆಯಲು ಹೆಚ್ಚು ಸಮಯಗಳವರೆಗೆ ಕಾಯಬೇಕಾಗಿಲ್ಲ. ತಲಾ 17 ಟನ್ ಸಾಗಿಸುವ ಸಾಮರ್ಥ್ಯ ಹೊಂದಿರುವ ಈ ವ್ಯಾನ್ಗಳನ್ನು ಬೇಗ ಹಾಳಾಗುವ ಉತ್ಪನ್ನಗಳನ್ನು ಸಾಗಿಸಲು ಬಳಸಿಕೊಳ್ಳಬಹುದಾಗಿದೆ.
ರೆಫ್ರಿಜರೇಟೆಡ್ ವ್ಯಾನ್ಗಳನ್ನು ಚಲಾಯಿಸುವಲ್ಲಿ ಯಾವುದೇ ಸಮಸ್ಯೆಯಿಲ್ಲದಿದ್ದರೂ, ಪರಿಣಾಮಕಾರಿ ವಿತರಣೆಗಾಗಿ ಅದರ ಮೂಲ ಮತ್ತು ನಿಗದಿತ ಕೇಂದ್ರಗಳಲ್ಲಿ ಕೋಲ್ಡ್ ಸ್ಟೋರೇಜ್ ಗೋದಾಮುಗಳು ಬೇಕಾಗುತ್ತವೆ ಮತ್ತು ಖಾಸಗಿ ಪಾಲುದಾರರು ಈ ನಿಟ್ಟಿನಲ್ಲಿ ಸಹಾಯ ಮಾಡಲು ಸಾಧ್ಯವಾಗಲಿದೆ ಎಂದು ರೈಲ್ವೆ ಅಧಿಕಾರಿಗಳು ಹೇಳುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.