ನವದೆಹಲಿ: 9,400 ಕ್ಕೂ ಹೆಚ್ಚು ಶತ್ರು ಆಸ್ತಿಗಳನ್ನು ಮಾರಾಟ ಮಾಡಲು ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಮೂರು ಉನ್ನತ ಮಟ್ಟದ ಸಮಿತಿಗಳನ್ನು ರಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ, ಇದು ಬೊಕ್ಕಸಕ್ಕೆ ಸುಮಾರು 1 ಲಕ್ಷ ಕೋಟಿ ರೂಪಾಯಿಗಳ ಆದಾಯ ತಂದುಕೊಡಲಿದೆ.
ಈ ಸಲುವಾಗಿ, ಶತ್ರು ಆಸ್ತಿ ಕಾಯ್ದೆಯಡಿ ಭಾರತದ ಎನಿಮಿ ಪ್ರಾಪರ್ಟಿ ಕಸ್ಟೋಡಿಯನ್ನಲ್ಲಿರುವ ಸ್ಥಿರ ಶತ್ರು ಆಸ್ತಿಗಳನ್ನು ವಿಲೇವಾರಿ ಮಾಡಲು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.
ಅಂತರ್ ಸಚಿವಾಲಯದ ತಂಡವನ್ನು ರಚನೆ ಮಾಡಲಾಗುತ್ತದೆ, ಇದನ್ನು ಕೇಂದ್ರ ಗೃಹ ಕಾರ್ಯದರ್ಶಿ ಮತ್ತು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ವಿಭಾಗದ ಕಾರ್ಯದರ್ಶಿ ನಿರ್ವಹಣೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಗೃಹ ಸಚಿವಾಲಯ, ಆರ್ಥಿಕ ವ್ಯವಹಾರಗಳ ಇಲಾಖೆ, ಖರ್ಚು ಇಲಾಖೆ, ಸಾರ್ವಜನಿಕ ಉದ್ಯಮಗಳ ಇಲಾಖೆ, ಕಾನೂನು ವ್ಯವಹಾರಗಳ ಇಲಾಖೆ, ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಪ್ರತಿನಿಧಿಗಳು ಆದೇಶದ ಪ್ರಕಾರ ಅಂತರ್ ಸಚಿವಾಲಯದ ಗುಂಪಿನ ಸದಸ್ಯರ ನೇಮಕರಾಗಲಿದ್ದಾರೆ.
ದೇಶ ವಿಭಜನೆ ಹಾಗೂ ನಂತರದ ದಿನಗಳಲ್ಲಿ ಭಾರತ ತೊರೆದು ಪಾಕಿಸ್ಥಾನ ಮತ್ತು ಚೀನಾ ಪೌರತ್ವ ಪಡೆದಿರುವ ಜನರ ಆಸ್ತಿಗಳನ್ನು ಶತ್ರು ಆಸ್ತಿ ಎನ್ನಲಾಗುತ್ತದೆ.
9400 ಆಸ್ತಿಗಳ ಪೈಕಿ 9280 ಆಸ್ತಿಗಳು ಪಾಕಿಸ್ಥಾನ ಪ್ರಜೆಗಳಿಗೆ ಸೇರಿದ್ದಾಗಿದೆ. ಆ ಪೈಕಿ ಅತಿ ಹೆಚ್ಚು ಅಂದರೆ 4991 ಆಸ್ತಿಗಳು ಉತ್ತರಪ್ರದೇಶದಲ್ಲಿವೆ. 2735 ಆಸ್ತಿಗಳೊಂದಿಗೆ ಪಶ್ಚಿಮ ಬಂಗಾಳ ಎರಡನೇ ಸ್ಥಾನದಲ್ಲಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ 487 ಆಸ್ತಿಗಳೂ ಇವೆ. ತನ್ನ ದೇಶದಲ್ಲಿರುವ ಭಾರತೀಯರಿಗೆ ಸೇರಿದ ಆಸ್ತಿಗಳನ್ನು ಪಾಕಿಸ್ತಾಸ್ಥಾನ ಈಗಾಗಲೇ ಹರಾಜು ಹಾಕಿದೆ. ಚೀನಾ ಪ್ರಜೆಗಳಿಗೆ ಸೇರಿದ 126 ಆಸ್ತಿಗಳು ದೇಶದಲ್ಲಿದ್ದು, ಆ ಪೈಕಿ ಅತಿ ಹೆಚ್ಚು ಅಂದರೆ 57 ಮೇಘಾಲಯದಲ್ಲಿದ್ದರೆ, 29 ಆಸ್ತಿಗಳು ಪಶ್ಚಿಮ ಬಂಗಾಳದಲ್ಲಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.