ಮಂಗಳೂರು : ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಮರೋಳಿ ಪ್ರದೇಶದ ದಿವಾಕರ ಬಂಗೇರ ಅವರು ವಾಸಿಸುತ್ತಿದ್ದ ಮನೆ ಕುಸಿದು ಬಿದ್ದಿದೆ.
ಅವರು ಕುಟುಂಬ ಬಡತನದ ಹಿನ್ನೆಲೆಗೆ ಸೇರಿದ್ದು ಬಂಗೇರವರು ಎರಡೂ ಕಾಲು ಸ್ವಾಧೀನ ತಪ್ಪಿದ್ದು ಅವರು ತನ್ನ ಚಟುವಟಿಕೆಗಳಿಗೆ ಗಾಲಿಕುರ್ಚಿ ಅವಲಂಬಿಸಿದ್ದಾರೆ. ಶಾಸಕ ಜೆ. ಆರ್. ಲೋಬೋ ಬುಧವಾರ ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿದರಲ್ಲದೇ, ಮನೆಯ ಪುನರ್ ನಿರ್ಮಾಣಕ್ಕೆ ಧನ ಸಹಾಯ ಮಾಡುವ ಆಶ್ವಾಸನೆ ನೀಡಿದರು
ಇದೇ ಸಂದರ್ಭ ಸ್ಥಳದಲ್ಲಿದ್ದ ಗ್ರಾಮ ಲೆಕ್ಕಿಗರಿಗೆ ಪ್ರಾಕ್ರತಿಕ ವಿಕೋಪ ಪರಿಹಾರ ನಿಧಿಯಿಂದ ಆದಷ್ಟು ಹೆಚ್ಚಿನ ನಿಧಿಯನ್ನು ಬಿಡುಗಡೆ ಮಾಡುವಂತೆ ಮತ್ತು ಮನಪಾ ವತಿಯಿಂದ 10ರಿಂದ 15 ಸಾವಿರದ ತನಕ ಕುಟೀರ ಭಾಗ್ಯ ಯೋಜನೆಯಡಿ ಮನೆ ರಿಪೇರಿಗೆ ನಿಧಿ ಬಿಡುಗಡೆಗೊಳಿಸುವಂತೆ ಸೂಚಿಸಿದರು.
ಅಲ್ಲದೇ ಸರಕಾರ ಮತ್ತು ಪಕ್ಷದಿಂದ ಹೆಚ್ಚಿನ ಧನಸಹಾಯ ಮಾಡುದಾಗಿ ಆಶ್ವಾಸನೆ ನೀಡಿದರು. ಈ ಸಂಧರ್ಭ ಸ್ಥಳೀಯ ಜನಪ್ರತಿನಿಧಿ ಲೆಸ್ಸಿಲೋಟ್ ಪಿಂಟೋ ,ಕೇಶವ ಮರೋಳಿ, ಟಿ.ಕೆ. ಸುಧೀರ್, ರಮಾನಂದ ಪೂಜಾರಿ, ಕ್ರಿತಿನ್ ಕುಮಾರ್, ವಿನಯ್ ಮಾಸ್ಕರೇನಸ್ ಮುಂತಾದವರು ಉಪಸ್ಥಿತರಿದ್ದರು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.