ವಿಯೆನ್ನಾ: 12 ವರ್ಷಗಳ ಬಳಿಕ ಕೊನೆಗೂ ಇರಾನಲ್ಲಿನ ಪರಮಾಣು ಬಿಕ್ಕಟ್ಟು ಸುಖಾಂತ್ಯ ಕಂಡಿದೆ.
ಮಂಗಳವಾರ ಇರಾನ್, ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್, ಚೀನಾ, ರಷ್ಯಾ ಮತ್ತು ಜರ್ಮನಿ ದೇಶಗಳು ಆಸ್ಟ್ರಿಯಾದ ರಾಜಧಾನಿ ವಿಯೆನ್ನಾದಲ್ಲಿ ಮಹತ್ವದ ಪರಮಾಣು ಒಪ್ಪಂದಕ್ಕೆ ಬಂದಿವೆ.
ಇರಾನ್ ತನ್ನ ಪರಮಾಣು ಚಟುವಟಿಕೆಯನ್ನು ತಗ್ಗಿಸಿದರೆ ಮತ್ತು ಸ್ಥಗಿತಗೊಳಿಸಿದರೆ ಮಾತ್ರ ಅದರ ಮೇಲೆ ವಿಧಿಸಿರುವ ನಿರ್ಬಂಧವನ್ನು ತೆರವುಗೊಳಿಸಲು ಸಾಧ್ಯ ಎಂದು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಐದು ಕಾಯಂ ರಾಷ್ಟ್ರಗಳು ಇರಾನ್ಗೆ ಸ್ಪಷ್ಟಪಡಿಸಿದ್ದವು.
ಈ ಕುರಿತು ಜುಲೈ 20ರ ಒಳಗೆ ಒಪ್ಪಂದಕ್ಕೆ ಬರುವಂತೆ ಗಡುವು ನೀಡಿದ್ದವು.
ಈ ಸಂಬಂಧ ಇರಾನ್ ವಿದೇಶಾಂಗ ಕಾರ್ಯದರ್ಶಿ ಮತ್ತು ಈ ದೇಶಗಳ ಕಾರ್ಯದರ್ಶಿಗಳ ನಡುವೆ ಕಳೆದ 18 ದಿನಗಳಿಂದ ಆಸ್ಟ್ರೀಯಾದ ರಾಜಧಾನಿ ವಿಯೆನ್ನಾದಲ್ಲಿ ಮಾತುಕತೆ ನಡೆಯುತ್ತಿತ್ತು. ಮಂಗಳವಾರ ಮಾತುಕತೆ ಯಶಸ್ವಿಯಾಗಿದೆ. ಅಂತರರಾಷ್ಟ್ರೀಯ ಪರಮಾಣು ಒಪ್ಪಂದಗಳಿಗೆ ಬದ್ಧವಿರುವುದಾಗಿ ಇರಾನ್ ಘೋಷಣೆ ಮಾಡಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.