ಚಂಡೀಗಢ: ಬಿಜೆಪಿಯು ಚಂಡೀಗಢದ ಮೇಯರ್ ಚುನಾವಣೆಯಲ್ಲಿ ಅಭೂತಪೂರ್ವ ಯಶಸ್ಸನ್ನು ಸಾಧಿಸಿದೆ. ಮೇಯರ್, ಹಿರಿಯ ಉಪಮೇಯರ್ ಮತ್ತು ಉಪಮೇಯರ್ ಸ್ಥಾನಗಳು ಬಿಜೆಪಿಯ ಪಾಲಾಗಿದೆ.
ಬಿಜೆಪಿಯ ರಾಜ್ ಬಲ ಮಲಿಕ್ ಅವರು ಚಂಡೀಗಢದ ನೂತನ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಮೇಡ್ ಚುನಾವಣೆಯಲ್ಲಿ ಒಟ್ಟು 27 ಮತಗಳು ಬಿದ್ದಿದ್ದವು. ಇವುಗಳ ಪೈಕಿ 22 ಮತಗಳು ಮಲ್ಲಿಕ್ ಅವರ ಪಾಲಾಗಿದೆ. ಇವರ ಪ್ರತಿ ಸ್ಪರ್ಧಿಯಾಗಿದ್ದ ಕಾಂಗ್ರೆಸ್ ಅಭ್ಯರ್ಥಿ ಗುರು ಬಕ್ಷ್ ರಾವತ್ ಅವರಿಗೆ ಸೋಲಾಗಿದೆ.
ಬಿಜೆಪಿಯ ರವಿಕಾಂತ್ ಶರ್ಮ ಅವರು ಹಿರಿಯ ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ ಮತ್ತು ಜಗ್ತರ್ ಸಿಂಡಿ ಜಗ್ಗ ಅವರು ಉಪಮೇಯರ್ ಆಗಿದ್ದಾರೆ. ಕ್ರಾಸ್ ವೋಟಿಂಗ್ ಅನ್ನು ನಿಲ್ಲಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ.
ಚಂಡೀಗಢದ ಎಲ್ಲಾ ಮೂರು ಹುದ್ದೆಗಳನ್ನು ಬಿಜೆಪಿ ಗೆದ್ದು ಕೊಂಡಿರುವುದಕ್ಕೆ ಚಂಡಿಗಡದ ಬಿಜೆಪಿ ಸಂಸದೆ ಕಿರಣ್ ಖೇರ್ ಅವರು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಬಿಜೆಪಿಯ ಎಲ್ಲಾ ಕೌನ್ಸಿಲರ್ ಗಳು ಕೂಡ ಒಗ್ಗಟ್ಟಾಗಿದ್ದಾರೆ ಎಂದು ಅವರು ಹೇಳಿದ್ದಾರೆ. ಇಲ್ಲಿ ಬಿಜೆಪಿ 20 ಕೌನ್ಸಿಲರ್ ಗಳನ್ನು ಹೊಂದಿದೆ ಮತ್ತು ಅಕಾಲಿ ದಾಳಿ 1 ಕೌನ್ಸಿಲರ್ ಅನ್ನು ಹೊಂದಿದೆ.
ರಾಜ್ ಬಲ ಮಲ್ಲಿಕ್ ಅವರು ಎರಡನೇ ಬಾರಿಗೆ ಮೇಯರ್ ಆಗಿ ಆಯ್ಕೆಯಾಗುತ್ತಿದ್ದಾರೆ. 2014ರಲ್ಲೂ ಅವರು ಮೇಯರ್ ಆಗಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.