ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಹೊಸ ವರ್ಷದ ಶುಭಾಶಯಗಳನ್ನು ಕೋರಿದ್ದಾರೆ. ಹೊಸ ವರ್ಷವು ಜನರ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ ಎಂಬ ಭರವಸೆ ಇದೆ ಎಂದಿದ್ದಾರೆ.
ಬುಧವಾರ ಟ್ವಿಟ್ ಮಾಡಿರುವ ಮೋದಿ, “2020 ಅದ್ಭುತವಾಗಿರಲಿ! ಈ ವರ್ಷ ಸಂತೋಷ ಮತ್ತು ಸಮೃದ್ಧಿಯಿಂದ ತುಂಬಿರಲಿ. ಪ್ರತಿಯೊಬ್ಬರೂ ಆರೋಗ್ಯವಾಗಿರಲಿ ಮತ್ತು ಎಲ್ಲರ ಆಕಾಂಕ್ಷೆಗಳನ್ನು ಈಡೇರಿಸಲಿ. ಎಲ್ಲರಿಗೂ 2020ರ ಹಾರ್ದಿಕ ಶುಭಕಾಮನೆಗಳು” ಎಂದಿದ್ದಾರೆ.
ಮಂಗಳವಾರವೂ ಪ್ರಧಾನ ಮಂತ್ರಿ ದೇಶದ ಜನರಿಗೆ ಶುಭ ಹಾರೈಸಿದರು ಮತ್ತು ಹೊಸ ವರ್ಷವು ಭಾರತವನ್ನು ಪರಿವರ್ತಿಸಲು ಮತ್ತು ಅದರ ನಾಗರಿಕರ ಜೀವನವನ್ನು ಸಶಕ್ತಗೊಳಿಸಲು ಜನರು ನಡೆಸುವ ಪ್ರಯತ್ನಗಳ ಮುಂದುವರಿಕೆಯನ್ನು ಗುರುತಿಸಲಿದೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು.
“2019 ಭಾರತಕ್ಕೆ ಅದ್ಭುತ ವರ್ಷ. ಎಂದಿಗೂ ಬದಲಾಗುವುದಿಲ್ಲ ಎಂದು ನಾವು ಭಾವಿಸಿದ ವಿಷಯಗಳನ್ನು ನಾವು ಬದಲಾಯಿಸಿದ್ದೇವೆ. ನಾವು ಎಂದಿಗೂ ಸಾಧ್ಯವಿಲ್ಲ ಎಂದು ಭಾವಿಸಿದ ವಿಷಯಗಳನ್ನು ನಾವು ಸಾಧಿಸಿದ್ದೇವೆ. ಇಲ್ಲಿ ಒಂದು ಸಣ್ಣ ಹಿನ್ನೋಟವಿದೆ. ನೀವು ಅದನ್ನು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ” ಎಂದು ಮೋದಿ ಟ್ವಿಟರಿನಲ್ಲಿ ವೀಡಿಯೋ ಹಂಚಿಕೊಂಡಿದ್ದಾರೆ.
Have a wonderful 2020!
May this year be filled with joy and prosperity. May everyone be healthy and may everyone’s aspirations be fulfilled.
आप सभी को साल 2020 की हार्दिक शुभकामनाएं।
— Narendra Modi (@narendramodi) January 1, 2020
Lovely compilation!
Covers quite a lot of the progress we achieved in 2019.
Here is hoping 2020 marks the continuation of people powered efforts to transform India and empower the lives of 130 crore Indians. https://t.co/HHghJe0owW
— Narendra Modi (@narendramodi) December 31, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.