ನವದೆಹಲಿ: ಗಲ್ಫ್ ರಾಷ್ಟ್ರಗಳಾದ ಟರ್ಕಿ ಮತ್ತು ದುಬೈನಿಂದ ಧನಸಹಾಯ ಪಡೆಯುತ್ತಿರುವ ಕೇರಳದ ಕೆಲವು ಜಿಹಾದಿ ಗುಂಪುಗಳ ಬಗ್ಗೆ ಭಾರತೀಯ ಗುಪ್ತಚರ ಸಂಸ್ಥೆಗಳಿಗೆ ಮಾಹಿತಿ ಬಂದಿದೆ. ಜಿಹಾದಿ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದ ವ್ಯಕ್ತಿಯೊಬ್ಬ ಸೆಪ್ಟೆಂಬರ್ 9-19ರ ನಡುವೆ ದುಬೈಗೆ ಭೇಟಿ ನೀಡಿದ್ದು, ಅಲ್ಲಿ 40 ಲಕ್ಷ ರೂ.ಗಳ ಹಣವನ್ನು ಪಡೆದುಕೊಂಡಿದ್ದಾನೆ ಎಂದು ಗುಪ್ತಚರ ಸಂಸ್ಥೆಗಳ ಅಧಿಕಾರಿಗಳು ಮಾಹಿತಿ ಬಹಿರಂಗಪಡಿಸಿದ್ದಾರೆ.
ಅಷ್ಟೇ ಅಲ್ಲ, ಅಕ್ಟೋಬರ್ 1 ರಂದು ಮತ್ತೊಂದು ಜಿಹಾದಿ ಸಂಘಟನೆಯ ಸದಸ್ಯರು ಟರ್ಕಿಯ ಕತಾರ್ನಲ್ಲಿ ಕೆಲವು ಜನರನ್ನು ಭೇಟಿಯಾಗಿದ್ದಾರೆ, ಅಲ್ಲಿ ಅವರ ಮತ್ತು ಇತರ ಸಮಾನ ಮನಸ್ಕ ಜಿಹಾದಿ ಗುಂಪುಗಳಿಗೆ ಧನಸಹಾಯವನ್ನು ನೀಡುವ ಭರವಸೆಯನ್ನು ನೀಡಲಾಗಿದೆ.
ವರದಿಗಳ ಹಿನ್ನಲೆಯಲ್ಲಿ, ಗೃಹ ಸಚಿವಾಲಯವು ಗಲ್ಫ್ ರಾಷ್ಟ್ರಗಳಿಂದ ಭಾರತದ ಜಿಹಾದಿ ಗುಂಪುಗಳಿಗೆ ಹರಿದು ಬರುತ್ತಿರುವ ಧನಸಹಾಯಗಳ ಬಗ್ಗೆ ವಿವರವಾದ ವರದಿಯನ್ನು ನೀಡುವಂತೆ ಗುಪ್ತಚರ ಸಂಸ್ಥೆಗಳಿಗೆ ಸೂಚಿಸಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಪಡೆದ ಹಣದ ಮೊತ್ತ ಮತ್ತು ಹಣ ನೀಡಿರುವ ದೇಶಗಳ ಹೆಸರುಗಳ ವಿವರಗಳನ್ನು ನೀಡುವಂತೆ ಸಚಿವಾಲಯವು ತಿಳಿಸಿದೆ.
ಕೇರಳದಲ್ಲಿ ಜಿಹಾದಿ ಗುಂಪುಗಳು ವ್ಯವಸ್ಥಿತವಾಗಿ ಮತಾಂತರ ಮತ್ತು ರಾಷ್ಟ್ರ ವಿರೋಧೀ ಕೃತ್ಯಗಳನ್ನು ಮಾಡುತ್ತಿವೆ ಎಂದು ವರದಿಗಳು ಹೇಳುತ್ತಾ ಬಂದಿವೆ. ಆದರೆ ಅಲ್ಲಿನ ಸರ್ಕಾರ ಮಾತ್ರ ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳದೆ ಮೌನವನ್ನು ತಾಳಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.