ಬೆಂಗಳೂರು: ನೆಲಮಂಗಲದಲ್ಲಿ ಡಿಟೆನ್ಷನ್ ಸೆಂಟರ್ ನಿರ್ಮಾಣವಾಗಿದೆ ಎಂದು ಊಹಾಪೋಹಗಳನ್ನು ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ತಳ್ಳಿ ಹಾಕಿದ್ದಾರೆ. ಅಪರಾಧಗಳನ್ನು ಎಸಗಿರುವ ನೈಜೀರಿಯಾದ ನಾಗರಿಕರನ್ನು ಮತ್ತು ವಲಸಿಗರನ್ನು ಇಡಲು ಮಾಡಿರುವ ವ್ಯವಸ್ಥೆಯಷ್ಟೇ ಎಂದಿದ್ದಾರೆ.
ಈ ಕಟ್ಟಡ ಮೊದಲು ಸಮಾಜ ಕಲ್ಯಾಣ ಇಲಾಖೆ ನಡೆಸುತ್ತಿದ್ದ ಹಾಸ್ಟೆಲ್ ಆಗಿತ್ತು, ಅದನ್ನು ಬಳಿಕ ಅಪರಾಧಗಳನ್ನು ಎಸಗಿರುವ ನೈಜೀರಿಯಾದ ನಾಗರಿಕರನ್ನು ಮತ್ತು ವಲಸಿಗರನ್ನು ಇಡುವ ವ್ಯವಸ್ಥೆಯಾಗಿ ಪರಿವರ್ತಿಸಲಾಯಿತು ಎಂದಿದ್ದಾರೆ.
“ಈ ಸೌಲಭ್ಯವನ್ನು ಸಮಾಜ ಕಲ್ಯಾಣ ಇಲಾಖೆ ನಿರ್ಮಿಸಿದೆ. ನೈಜೀರಿಯಾದ ಪುರುಷರು ಮತ್ತು ಮಹಿಳೆಯರು ಪೊಲೀಸರ ಮೇಲೆ ಹಲ್ಲೆ ಮಾಡಿದ ಹಲವು ಪ್ರಕರಣಗಳಿವೆ. ಅವರ ವಿರುದ್ಧ ಪ್ರಕರಣ ದಾಖಲಾಗಿದ್ದರೆ, ಅವರು ಇಲ್ಲಿಯೇ ಇರಬೇಕಾಗುತ್ತದೆ. ಅಂತಹ ಜನರನ್ನು ತಮ್ಮ ದೇಶಗಳಿಗೆ ಗಡೀಪಾರು ಮಾಡಲು ಅನುಕೂಲವಾಗುವಂತೆ ಈ ಸೌಲಭ್ಯವಿದೆ. ಪೌರತ್ವದ ಬಗ್ಗೆ ಸಮಸ್ಯೆಗಳಿರುವ ಯಾವುದೇ ವ್ಯಕ್ತಿಯನ್ನು ಇಡುವುದು ಇದರ ಉದ್ದೇಶವಲ್ಲ. ಇದು ಬಂಧನ ಕೇಂದ್ರವಲ್ಲ ”ಎಂದು ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಈ ಸೌಲಭ್ಯವನ್ನು ಸಮಾಜ ಕಲ್ಯಾಣ ಇಲಾಖೆಯು ಮೇಲ್ವಿಚಾರಣೆ ಮಾಡುತ್ತದೆ, ಕೇಂದ್ರವು ಪ್ರಸ್ತುತ ಕಾರ್ಯನಿರ್ವಹಿಸುತ್ತಿಲ್ಲ ಎಂದು ಗೃಹ ಸಚಿವರು ಹೇಳಿದ್ದಾರೆ.
ಈ ಕಟ್ಟಡವನ್ನು ಬಂಧನ ಕೇಂದ್ರ (ಡಿಟೆನ್ಷನ್ ಸೆಂಟರ್) ಎಂದು ಕೆಲವರು ಸುದ್ದಿ ಹಬ್ಬಿಸಿದ್ದರು. ಈ ಹಿನ್ನಲೆಯಲ್ಲಿ ಬೊಮ್ಮಾಯಿ ಸ್ಪಷ್ಟನೆಯನ್ನು ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ದೇಶದಲ್ಲಿ ಯಾವುದೇ ಬಂಧನ ಗೃಹಗಳಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.