ನವದೆಹಲಿ: ರೈಲ್ವೆ ಸಚಿವಾಲಯವು ಸಂಪೂರ್ಣ ಕಾಗದರಹಿತವಾಗುವ ನಿಟ್ಟಿನಲ್ಲಿ ಮತ್ತು ಎಲ್ಲಾ ಕೈಬರಹದ ಫೈಲ್ಗಳನ್ನು ಇ-ಫೈಲ್ಗಳಾಗಿ ಪರಿವರ್ತಿಸುವ ಸಲುವಾಗಿ ಮೆಗಾ ಯೋಜನೆಯನ್ನು ಹೊರತಂದಿದೆ. ಮೊದಲ ಹಂತದಲ್ಲಿ ಸಚಿವಾಲಯವು 72,000 ಕ್ಕೂ ಹೆಚ್ಚು ಇ-ಫೈಲ್ಗಳನ್ನು ಸಿದ್ಧಪಡಿಸಿದೆ. ರೈಲ್ವೆ ಸಚಿವಾಲಯದ 50,000 ಕ್ಕೂ ಹೆಚ್ಚು ಉದ್ಯೋಗಿಗಳು ಈಗಾಗಲೇ ಈ ಕಾರ್ಯ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದಾರೆ, ಇದು ಸಚಿವಾಲಯದಲ್ಲಿನ ಕೆಲಸದ ಸಂಸ್ಕೃತಿಯನ್ನು ಬದಲಾಯಿಸುತ್ತಿದೆ.
ಡಿಜಿಟಲ್ ಮಾದರಿಯಲ್ಲಿ ಫೈಲ್ಗಳ ಕಾರ್ಯವನ್ನು ಮಾಡುವ ಸಲುವಾಗಿ ಪ್ರತಿಯೊಬ್ಬರಿಗೂ ತರಬೇತಿ ನೀಡಲಾಗುತ್ತಿದೆ. ಕಾಗದವನ್ನು ಉಳಿಸುವುದು ಈ ಕ್ರಮದ ಪ್ರಮುಖ ಉದ್ದೇಶ. ಇದರ ಇತರ ಪ್ರಯೋಜನವೆಂದರೆ, ಅಧಿಕಾರಿಗಳ ಟೇಬಲ್ ಮುಂದೆ ಫೈಲ್ಗಳ ರಾಶಿ ಬಾಕಿ ಬಿದ್ದಿರುವುದಿಲ್ಲ. ಬಾಕಿ ಫೈಲ್ಗಳನ್ನು ಸುಲಭವಾಗಿ ಪತ್ತೆ ಮಾಡಬಹುದು ಮತ್ತು ಫೈಲ್ಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಇ-ಫೈಲ್ ವ್ಯವಸ್ಥೆಯು ಸಹಕಾರಿಯಾಗುತ್ತದೆ.
ಮೊದಲ ಹಂತದಲ್ಲಿ, ಭಾರತೀಯ ರೈಲ್ವೆ ತನ್ನ 58 ಸಂಸ್ಥೆಗಳಲ್ಲಿ ಇ-ಕಚೇರಿಗಳನ್ನು ರಚಿಸಿದೆ, ಅಲ್ಲಿ ಅದು ಫೈಲ್ಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸುತ್ತದೆ ಮತ್ತು ಬಾಕಿ ಇರುವ ಫೈಲ್ಗಳನ್ನು ಸುಲಭ ರೀತಿಯಲ್ಲಿ ನಿರ್ವಹಣೆ ಮಾಡುತ್ತದೆ.
6 ತಿಂಗಳಿಗಿಂತಲೂ ಕಡಿಮೆ ಅವಧಿಯಲ್ಲಿ ಭಾರತೀಯ ರೈಲ್ವೆಯು ತನ್ನ 58 ಸಂಸ್ಥೆಗಳ 72000 ಕ್ಕೂ ಹೆಚ್ಚು ಹಸ್ತಬರಹದ ಫೈಲ್ಗಳನ್ನು ಡಿಜಿಟಲ್ ಫೈಲ್ಗಳನ್ನಾಗಿ ಪರಿವರ್ತಿಸಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಕೈಬರಹದ ಫೈಲ್ಗಳನ್ನು ಡಿಜಿಟಲ್ ಫೈಲ್ಗಳಾಗಿ ಪರಿವರ್ತಿಸುವ ಮೂಲಕ ರೈಲ್ವೆ ತನ್ನ ಕೆಲಸದ ಸಂಸ್ಕೃತಿಯನ್ನು ಬದಲಾಯಿಸಲು ನಿರ್ಧರಿಸಿದೆ, ಇದರಿಂದ ಸಚಿವಾಲಯವು ಕಾಗದಪತ್ರಗಳಿಂದ ಸಂಪೂರ್ಣ ಡಿಜಿಟಲೀಕರಣಕ್ಕೆ ತೆರೆದುಕೊಳ್ಳಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.