ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ 21 ರಂದು ದೆಹಲಿಯ ಪ್ರವಾಸಿ ಭಾರತೀಯ ಕೇಂದ್ರ ಸಭಾಂಗಣದಲ್ಲಿ ತಮ್ಮ ಸಚಿವರ ಸಭೆಯನ್ನು ನಡೆಸುತ್ತಿದ್ದಾರೆ.
ಈ ಮೊದಲು ಸಭೆಯನ್ನು ಗಾರ್ವಿ ಗುಜರಾತ್ ಭವನದಲ್ಲಿ ನಡೆಸಲು ಉದ್ದೇಶಿಸಲಾಗಿತ್ತು. ಇದೀಗ ಸಭೆಯನ್ನು ರಿಜಾಲ್ ಮಾರ್ಗ ಚಾಣಕ್ಯಪುರಿಯಲ್ಲಿರುವ ಪ್ರವಾಸಿ ಭಾರತೀಯ ಕೇಂದ್ರ ಸಭಾಂಗಣದಲ್ಲಿ ನಡೆಸಲಾಗುತ್ತಿದೆ. ಸಭೆಯಲ್ಲಿ ಮೋದಿ ಅವರು ಕಳೆದ ಆರು ತಿಂಗಳಿನಿಂದ ಸಚಿವಾಲಯಗಳು ಕೈಗೊಂಡ ಕಾರ್ಯಗಳ ಪ್ರಗತಿಯನ್ನು ಪರಿಶೀಲಿಸಲಿದ್ದಾರೆ.
ಸಭೆ ಬೆಳಿಗ್ಗೆ 10.30 ಕ್ಕೆ ನಡೆಯಲಿದೆ.
ಸಚಿವಾಲಯಗಳ ಕಾರ್ಯದರ್ಶಿಗಳು ಸೇರಿದಂತೆ ಎಲ್ಲಾ ಕೇಂದ್ರ ಸಚಿವರುಗಳನ್ನು ನಿರ್ಣಾಯಕ ಸಭೆಯಲ್ಲಿ ಭಾಗವಹಿಸುವಂತೆ ಕೋರಲಾಗಿದೆ. ಎಲ್ಲಾ ಸಚಿವಾಲಯಗಳು ಕಳೆದ ಆರು ತಿಂಗಳ ಸಾಧನೆಗಳನ್ನು ಸಭೆಯ ನಿಗದಿತ ದಿನಾಂಕದ ಮೊದಲು ಕಳುಹಿಸಲು ತಿಳಿಸಲಾಗಿದೆ.
ಕಳೆದ ಆರು ತಿಂಗಳಲ್ಲಿ ತಮ್ಮ ಸಚಿವಾಲಯಗಳು ಮಾಡಿದ ಕಾರ್ಯಗಳ ಕುರಿತು ಪ್ರಸ್ತುತಿಯನ್ನು ಸಿದ್ಧಪಡಿಸುವಂತೆ ಸಚಿವರಿಗೆ ಸೂಚಿಸಲಾಗಿದೆ ಮತ್ತು ಮುಂದಿನ ನಾಲ್ಕೂವರೆ ವರ್ಷಗಳ ಯೋಜನೆಗಳನ್ನೂ ಸಹ ಸಿದ್ಧಪಡಿಸುವಂತೆಯೂ ಸೂಚಿಸಲಾಗಿದೆ.
ಇದಕ್ಕಾಗಿ, ಮಂತ್ರಿಗಳ ಮಂಡಳಿ ವರದಿ ಮತ್ತು ದೂರದೃಷ್ಟಿ ದಾಖಲೆಯನ್ನು ತಯಾರಿಸಲು ಆಯಾ ಸಚಿವಾಲಯಗಳಲ್ಲಿ ಉನ್ನತ ಮಟ್ಟದ ಸಭೆಗಳನ್ನು ನಡೆಸಲಾಗುತ್ತಿದೆ.
ಪಕ್ಷದ ಕಾರ್ಯಕಾರಿ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಸಂತೋಷ್ ಸೇರಿದಂತೆ ಬಿಜೆಪಿಯ ಹಿರಿಯ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಸಚಿವರ ಸಭೆ ಆರು ತಿಂಗಳ ಅಂತರದ ನಂತರ ನಡೆಯುತ್ತಿದೆ.
ಇದೇ ರೀತಿಯ ಸಭೆಯನ್ನು ಕೊನೆಯ ಬಾರಿಗೆ ಜೂನ್ 13 ರಂದು ಪ್ರಧಾನಿ ಮೋದಿ ಅವರು ನಡೆಸಿದ್ದರು. ಹಿಂದಿನ ಸಭೆಯಲ್ಲಿ ಮೋದಿಯವರು ಆಯಾ ಸಚಿವಾಲಯಗಳಿಗೆ ಕಾರ್ಯಸೂಚಿಯನ್ನು ವಿವರಿಸಿದ್ದರು.
ಪ್ರಧಾನ ಮಂತ್ರಿ ‘ಮಿಷನ್ 2022’ ಗಾಗಿ ತಮ್ಮ ಆದ್ಯತೆಗಳನ್ನು ವಿವರಿಸಿದ್ದಾರೆ ಮತ್ತು ಅವರು ಮಾಡಿದ ಕಾರ್ಯಗಳ ಪರಿಶೀಲನೆಗಾಗಿ ಪ್ರತಿ ಮೂರು ತಿಂಗಳಿಗೊಮ್ಮೆ ಪ್ರಗತಿ ಕಾರ್ಡ್ ಅನ್ನು ಪ್ರಸ್ತುತಪಡಿಸುವಂತೆ ಕೇಳಿಕೊಂಡಿದ್ದಾರೆ. ಇದರಿಂದಾಗಿ ಅವರಿಗೆ ವಿವಿಧ ಸಚಿವಾಲಯಗಳು ಜಾರಿಗೆ ತಂದ ಹೆಚ್ಚಿನ ಆದ್ಯತೆಯ ಯೋಜನೆಗಳ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಸಾಧ್ಯವಾಗುತ್ತದೆ.
ಮೂಲಗಳ ಪ್ರಕಾರ, ಪ್ರಧಾನ್ ಮಂತ್ರಿ ಆವಾಸ್ ಯೋಜನೆ ಮತ್ತು ಜಲ ಜೀವನ್ ಮಿಷನ್ನಂತಹ ಯೋಜನೆಗಳ ಬಗ್ಗೆ ಪ್ರಧಾನಮಂತ್ರಿ ಹೆಚ್ಚು ಕಾಳಜಿ ವಹಿಸುತ್ತಿದ್ದು, ಇದರ ಅಡಿಯಲ್ಲಿ ದೇಶದ ಪ್ರತಿಯೊಂದು ಮನೆಗಳಿಗೆ ಕುಡಿಯುವ ನೀರನ್ನು ಒದಗಿಸುವ ಗುರಿಯನ್ನು ಹೊಂದಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.