ನವದೆಹಲಿ: ಪೌರತ್ವ ಕಾಯ್ದೆಗೆ ಸಂಬಂಧಿಸಿದಂತೆ ಉದ್ವಿಗ್ನಗೊಂಡಿದ್ದ ಅಸ್ಸಾಂ ಈಗ ಸಂಪೂರ್ಣ ಸಹಜ ಸ್ಥಿತಿಗೆ ಮರಳಿದೆ. ಅಲ್ಲಿ ಯಾವುದೇ ಪ್ರತಿಭಟನೆ, ಹಿಂಸಾಚಾರಗಳು ವರದಿಯಾಗಿಲ್ಲವಾದ್ದರಿಂದ, ರಾಜ್ಯದಾದ್ಯಂತ ಹಗಲು-ರಾತ್ರಿ ಕರ್ಫ್ಯೂ ಅನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳಲಾಗಿದೆ. ರಾಜ್ಯ ಸರ್ಕಾರವು ಬ್ರಾಡ್ಬ್ಯಾಂಡ್ ಇಂಟರ್ನೆಟ್ ಸೇವೆಗಳನ್ನು ಮರುಸ್ಥಾಪಿಸಿದೆ.
ಸಚಿವ ಹಿಮಾಂತ ಬಿಸ್ವಾ ಶರ್ಮಾ ಅವರು ಟ್ವೀಟ್ ನಲ್ಲಿ ಸೋಮವಾರ ಈ ಬಗ್ಗೆ ತಿಳಿಸಿದ್ದು, ಅಸ್ಸಾಂನಾದ್ಯಂತ ಯಾವುದೇ ರೀತಿಯ ಹಿಂಸಾಚಾರ ವರದಿಯಾಗಿಲ್ಲ ಎಂದಿದ್ದಾರೆ.
ಪ್ರಜಾಪ್ರಭುತ್ವ ಮತ್ತು ಶಾಂತಿಯುತ ಪ್ರತಿಭಟನೆಗಳನ್ನು ತಡೆಯುವ ಉದ್ದೇಶವನ್ನು ರಾಜ್ಯ ಸರ್ಕಾರ ಹೊಂದಿಲ್ಲ ಎಂದು ಹೇಳಿದ ಶರ್ಮಾ, ಪ್ರತಿಭಟನಾಕಾರರು ಅಹಿಂಸೆಯ ತತ್ವಗಳಿಗೆ ಬದ್ಧರಾಗಿರಬೇಕು ಎಂದಿದ್ದಾರೆ.
ಕಳೆದ ವಾರದಲ್ಲಿ ಅಸ್ಸಾಂ ರಾಜ್ಯಾದ್ಯಂತ ಹಿಂಸಾಚಾರಗಳು ನಡೆದಿತ್ತು, ಇದಕ್ಕೆ ಸಂಬಂಧಿಸಿದಂತೆ 136 ಪ್ರಕರಣಗಳನ್ನು ದಾಖಲಿಸಲಾಗಿದೆ ಮತ್ತು 190 ಜನರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಶರ್ಮಾ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.