ಶ್ರೀನಗರ : ಜಮ್ಮು-ಕಾಶ್ಮೀರ ಮತ್ತು ವಾಸ್ತವ ಗಡಿರೇಖೆ ಸಮೀಪ ಪಾಕಿಸ್ತಾನ ಉಗ್ರರ ವಿರುದ್ಧ ಹೋರಾಡುವ ಭಾರತೀಯ ಸೇನೆಗೆ ಹೊಸ ಬಲ ಸಿಕ್ಕಿದೆ. ಅಮೆರಿಕನ್ SiG Sauer ಅಸಾಲ್ಟ್ ರೈಫಲ್ ಅನ್ನು ಉಗ್ರ ವಿರೋಧಿ ಕಾರ್ಯಾಚರಣೆಗಳಿಗಾಗಿ ಸೇನೆಗೆ ಸೇರ್ಪಡೆ ಮಾಡಲಾಗಿದೆ.
ಹೆಚ್ಚುವರಿಯಾಗಿ, ಭಾರತೀಯ ಸೇನೆಯು ತನ್ನ ಸ್ನಿಫರ್ ರೈಫಲ್ಗಳಿಗಾಗಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಖರೀದಿ ಮಾಡಲು ಆದೇಶಿಸಿದೆ.
“ಮೊದಲ ಹಂತದ 10,000 SiG 716 ಅಸಾಲ್ಟ್ ರೈಫಲ್ ಅನ್ನು ಈಗಾಗಲೇ ಭಾರತಕ್ಕೆ ಬಂದಿದೆ. ಇವುಗಳನ್ನು ನಾರ್ದನ್ ಕಮಾಂಡ್ಗೆ ಕಳುಹಿಸಿಕೊಡಲಾಗಿದೆ” ಎಂದಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿನ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳ ಉಸ್ತುವಾರಿಯನ್ನು ನಾರ್ದನ್ ಕಮಾಂಡ್ ನೋಡಿಕೊಳ್ಳುತ್ತದೆ. ಪಾಕಿಸ್ಥಾನದಲ್ಲಿ ಮತ್ತು ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿ ತರಬೇತಿಯನ್ನು ಪಡೆದು ಭಾರತದ ಗಡಿಯೊಳಗೆ ಒಳನುಸುಳುವ ಉಗ್ರರನ್ನು ತಡೆಗಟ್ಟುವ ಕಾರ್ಯಾಚರಣೆಯನ್ನು ನಾರ್ದನ್ ಕಮಾಂಡ್ ನೋಡಿಕೊಳ್ಳುತ್ತದೆ.
ಅಸಾಲ್ಟ್ ರೈಫಲ್ಗಳು ಜಮ್ಮು-ಕಾಶ್ಮೀರದಲ್ಲಿನ ಉಗ್ರ ವಿರೋಧಿ ಕಾರ್ಯಾಚರಣೆಗಳನ್ನು ಅತ್ಯಂತ ಪರಿಣಾಮಕಾರಿಯಾಗಿಸಲಿದೆ.
ಭಾರತೀಯ ಸೇನೆಗಾಗಿ 72,400 ಹೊಸ ಅಸಾಲ್ಟ್ ರೈಫಲ್ಗಳನ್ನು ಖರೀದಿ ಮಾಡಲು ಭಾರತ ರೂ.700 ಕೋಟಿಗಳ ಒಪ್ಪಂದಕ್ಕೆ ಸಹಿ ಹಾಕಿದೆ. ಈ ರೈಫಲ್ಗಳನ್ನು ಅಮೆರಿಕಾದ ಶಸ್ತ್ರಾಸ್ತ್ರ ಅಂಗ SiG Sauer ಪೂರೈಕೆ ಮಾಡುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.