ಸೆನ್ಸೇಷನಲ್ ಸುದ್ದಿಗಳನ್ನು ಪ್ರಕಟಿಸುವುದು, ತಮ್ಮ ಸುದ್ದಿಗಳನ್ನು ಜನ ನಂಬುವಂತೆ ಮಾಡುವುದು, ನಕಲಿ ಸುದ್ದಿಗಳನ್ನು ಉತ್ಪಾದಿಸುವುದು ಸುದ್ದಿ ವ್ಯಾಪಾರಿಗಳ ಜೀವನೋಪಾಯವಾಗಿದೆ. ಆದರೀಗ ಕೇಂದ್ರ ಸರಕಾರದ ಕಠಿಣ ನಿರ್ಧಾರಗಳಿಂದಾಗಿ ಈ ಸುದ್ದಿ ವ್ಯಾಪಾರಿಗಳು ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ.
ಪ್ರೆಸ್ ಇನ್ಫಾರ್ಮಶನ್ ಬ್ಯೂರೋ (ಪಿಐಬಿ) ಸರ್ಕಾರದ ಸಚಿವಾಲಯಗಳ, ಇಲಾಖೆಗಳ ಮತ್ತು ಯೋಜನೆಗಳಿಗೆ ಸಂಬಂಧಿಸಿದ ಸುದ್ದಿಗಳ ಬಗ್ಗೆ ದೃಢೀಕರಣ ಮಾಡುವ ಸಲುವಾಗಿ ಫ್ಯಾಕ್ಟ್ ಚೆಕ್ ಯೂನಿಟ್ ಅನ್ನು ಸ್ಥಾಪನೆ ಮಾಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪಿಐಬಿ, “ಸತ್ಯವಾದ ಫಾರ್ವರ್ಡ್ ಸುದ್ದಿಗಳನ್ನು ನೀವು ಸ್ವೀಕರಿಸಿರಬಹುದು ಅಥವಾ ಪರಿಶೀಲನೆಗೆ ಒಳಪಡಿಸಬೇಕಾದ ಅಗತ್ಯವಿರುವಂತಹ ಸುದ್ದಿಯನ್ನು ನೀವು ಸ್ವೀಕರಿಸಬಹುದು. ಅಂತಹ ಸುದ್ದಿಯನ್ನು ನಮಗೆ ಕಳುಹಿಸಿಕೊಡಿ, ಯಾವುದೇ ಪ್ರಶ್ನೆ ಕೇಳದೆ ನಾವು ಫ್ಯಾಕ್ಟ್ ಚೆಕ್ ಮಾಡಿಕೊಡುತ್ತೇವೆ” ಎಂದಿದೆ.
“ಪಿಐಬಿ ನಿಮಗಾಗಿ ಪಿಐಬಿ ಫ್ಯಾಕ್ಟ್ ಚೆಕ್ ಅನ್ನು ಹೊರತಂದಿದೆ. ನಕಲಿ ಸುದ್ದಿಯನ್ನು ತಡೆಗಟ್ಟಲು ನಮ್ಮೊಂದಿಗೆ ಕೈಜೋಡಿಸಲು ಇದು ನಿಮಗೆ ಒಂದು ಅವಕಾಶ. ಕೇಂದ್ರ ಸರಕಾರ, ಸಚಿವಾಲಯ ಮತ್ತು ಇಲಾಖೆಗಳು, ಸರ್ಕಾರದ ಯೋಜನೆಗಳ ಬಗ್ಗೆ ಬಂದ ಸುದ್ದಿಗಳ ಬಗ್ಗೆ ನಿಮಗೆ ಅನುಮಾನವಿದ್ದರೆ ಅದನ್ನು ನಮಗೆ ಕಳುಹಿಸಿಕೊಡಿ ಮತ್ತು ನಾವು ಅದನ್ನು ಪರಿಶೀಲಿಸಿ ನಿಮಗೆ ತಿಳಿಸುತ್ತೇವೆ” ಎಂದು ಪಿಐಬಿ ಹೇಳಿದೆ.
ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್ ಅವರು ನಕಲಿ ಸುದ್ದಿಗಳನ್ನು ಸಮಸ್ಯೆಯ ವಿರುದ್ಧ ಕ್ರಮ ತೆಗೆದುಕೊಳ್ಳುವುದನ್ನು ನಿರಂತರವಾಗಿ ಪ್ರತಿಪಾದಿಸುತ್ತಾ ಬಂದಿದ್ದಾರೆ ಮತ್ತು ಈ ನಕಲಿ ಸುದ್ದಿಗಳು ಪೇಯ್ಡ್ ನ್ಯೂಸ್ಗಳಿಗಿಂತಲೂ ತುಂಬಾ ಅಪಾಯಕಾರಿ ಎಂಬುದಾಗಿ ಅವರು ಪ್ರತಿಪಾದಿಸುತ್ತಾ ಬಂದಿದ್ದಾರೆ. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಕೂಡ ನಕಲಿ ಸುದ್ದಿಗಳ ಬಗ್ಗೆ ಆತಂಕವನ್ನು ವ್ಯಕ್ತಪಡಿಸುತ್ತಲೇ ಬಂದಿದ್ದಾರೆ, ಸುದ್ದಿಗಳ ಸತ್ಯಾಸತ್ಯತೆಯನ್ನು ಪರಿಶೀಲನೆ ನಡೆಸುವಂತಹ ವ್ಯವಸ್ಥೆಯನ್ನು ತರಬೇಕು ಎಂದು ಅವರು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಮುಂತಾದ ಸಂಸ್ಥೆಗಳಿಗೆ ಒತ್ತಾಯಿಸುತ್ತಲೇ ಬಂದಿದ್ದಾರೆ.
ಪಿಐಬಿಯ ಫ್ಯಾಕ್ಟ್ ಚೆಕಿಂಗ್ ಯೂನಿಟ್ ಮೂಲಕ ನರೇಂದ್ರ ಮೋದಿ ಸರಕಾರವು ತಮ್ಮ ಸಚಿವಾಲಯ, ಸರ್ಕಾರಿ ಇಲಾಖೆಗಳು ಮತ್ತು ಯೋಜನೆಗಳ ಬಗ್ಗೆ ನಕಲಿ ಸುದ್ದಿ ಹರಡುವುದನ್ನು ತಡೆಗಟ್ಟಲು ಮೊದಲ ಹೆಜ್ಜೆಯನ್ನು ಮುಂದಿಟ್ಟಿದೆ. ಈ ವ್ಯವಸ್ಥೆಯ ಶ್ಲಾಘನೀಯ ಕ್ರಮವೆಂದರೆ ನಾಗರಿಕ ಕೇಂದ್ರಿತ ಕಾರ್ಯಕ್ರಮ ಇದಾಗಿದೆ. ಆಡಳಿತಗಳ ಬಗೆಗಿನ ವಿವಿಧ ವದಂತಿಗಳ ಬಗ್ಗೆ ಸತ್ಯಾಸತ್ಯತೆಯನ್ನು ಅರಿಯಲು ಈ ಕಾರ್ಯಕ್ರಮವು ಅತ್ಯಂತ ಕ್ರಿಯಾಶೀಲ ಪಾತ್ರವನ್ನು ನಿರ್ವಹಿಸುವ ಭರವಸೆ ಇದೆ.
ಆದರೆ ಸರ್ಕಾರದ ಈ ಕಾರ್ಯಕ್ರಮ ಕೆಲವು ಕುಖ್ಯಾತ ಮತ್ತು ಸೆನ್ಸೇಷನಲ್ ಸುದ್ದಿಗಳನ್ನು ಹರಿಬಿಡುವ, ಸರ್ಕಾರದ ಯೋಜನೆಗಳ ಬಗ್ಗೆ ಗೊಂದಲವನ್ನು ಸೃಷ್ಟಿಸುವ ಸುದ್ದಿ ಪೋರ್ಟಲ್ಗಳಿಗೆ ದೊಡ್ಡಮಟ್ಟದ ಆಘಾತವನ್ನೇ ಉಂಟುಮಾಡಿದೆ. ಎಡಪಂಥೀಯ ಪೋರ್ಟಲ್ಗಳಾದ ದಿ ವೈರ್, ದಿ ಕ್ವಿಂಟ್ ಮುಂತಾದ ಪೋರ್ಟಲ್ಗಳು ನಿರಂತರವಾಗಿ ನಕಲಿ ಸುದ್ದಿಗಳನ್ನು ಹರಿ ಬಿಡುವುದನ್ನು ಪತ್ತೆಹಚ್ಚಲಾಗಿದೆ. ಆದರೆ ಈಗ ಇಂತಹ ನಕಲಿ ಸುದ್ದಿಗಳನ್ನು ತಡೆಗಟ್ಟಲು ಕೇಂದ್ರ ಸರಕಾರವು ವಿಸ್ತೃತ ಯೋಜನೆಯೊಂದನ್ನು ಅನುಷ್ಠಾನಕ್ಕೆ ತಂದಿದೆ. ಹೀಗಾಗಿ ಸರ್ಕಾರದ ಯೋಜನೆಗಳು ಮತ್ತು ಇಲಾಖೆಗಳ ಬಗ್ಗೆ, ಆಡಳಿತದ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಿ ಬಿಡುತ್ತಿದ್ದ ಪೋರ್ಟಲ್ಗಳಿಗೆ ನಿಜಕ್ಕೂ ಕಠಿಣ ಸಮಯ ಆರಂಭವಾಗಿದೆ. ಇವುಗಳ ಹರಿಬಿಡುವ ಪ್ರತಿ ಸುದ್ದಿಗಳ ಸತ್ಯಾಸತ್ಯತೆಗಳು ಪರಿಶೀಲನೆಗೆ ಒಳಗಾಗಲಿದೆ.
ಪ್ರಸ್ತುತ ಸರಕಾರವು ತಪ್ಪುಮಾಹಿತಿ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ತನ್ನ ಗಮನವನ್ನು ಕೇಂದ್ರೀಕರಿಸಿದೆ. ಸರ್ಕಾರದ ಯೋಜನೆಗಳ ಬಗ್ಗೆ ಮತ್ತು ಆಡಳಿತದ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ಪಡೆಯುವುದು ಪ್ರತಿಯೊಬ್ಬ ನಾಗರಿಕನ ಹಕ್ಕು ಕೂಡ ಆಗಿರುತ್ತದೆ. ಇಂತಹ ಮಾಹಿತಿಗಳ ಕಾರಣದಿಂದಾಗಿ ನಾಗರಿಕರು ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಂಪೂರ್ಣ ಪ್ರಮಾಣದಲ್ಲಿ ಅನುಸರಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಮೋದಿ ಸರ್ಕಾರವು ಸರಿಯಾದ ನಿರ್ಧಾರವನ್ನು ತೆಗೆದುಕೊಂಡಿದೆ ಮತ್ತು ಈ ನಿರ್ಧಾರವು ನಕಲಿ ಸುದ್ದಿಗಳನ್ನು ಹರಡುವುದನ್ನು ಅಪರಾಧಿಕರಣಗೊಳಿಸುವ ಸಾಧ್ಯತೆಯೂ ಇದೆ. ನಕಲಿ ಸುದ್ದಿಗಳು ದೇಶದಲ್ಲಿ ಹಲವಾರು ಅವಾಂತರಗಳನ್ನು ಸೃಷ್ಟಿ ಮಾಡಿವೆ, ಇಂತಹ ಅನಾಹುತಗಳನ್ನು ಭವಿಷ್ಯದಲ್ಲಿ ನಿಲ್ಲಿಸಬೇಕಾದರೆ ಕಠಿಣಾತಿ ಕಠಿಣ ಕ್ರಮವನ್ನು ಜರುಗಿಸುವುದು ಅತ್ಯಂತ ಅವಶ್ಯಕವಾಗಿರುತ್ತದೆ. ಹೀಗಾಗಿ ನರೇಂದ್ರಮೋದಿ ಸರಕಾರವು ಸುಳ್ಳು ಸುದ್ದಿ ಹರಡಿದ ವಿರುದ್ಧ ಅತ್ಯಂತ ನಿರ್ಣಾಯಕ ನಿರ್ಧಾರವನ್ನು ತೆಗೆದುಕೊಂಡಿದೆ. ದೇಶದ ಭವಿಷ್ಯದ ದೃಷ್ಟಿಯಿಂದ ಇದು ನಿಜಕ್ಕೂ ಶ್ಲಾಘನೀಯ ಕ್ರಮ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.