ವಾಷಿಂಗ್ಟನ್ ಡಿಸಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ 370ನೇ ವಿಧಿಯನ್ನು ರದ್ದುಪಡಿಸಿದ ಭಾರತದ ಕ್ರಮವನ್ನು ಯುಎಸ್ ಕಾಂಗ್ರೆಸ್ಸಿಗ ಪೀಟ್ ಓಲ್ಸನ್ ಶ್ಲಾಘಿಸಿದ್ದಾರೆ. 70 ವರ್ಷಗಳ ಕಾಲ ಇದ್ದ 370ನೇ ವಿಧಿಯ ತಾತ್ಕಾಲಿಕ ನಿಬಂಧನೆಯು ಅಲ್ಲಿನ ಜನರನ್ನು ಇತರ ಎಲ್ಲ ಭಾರತೀಯರಿಗಿಂತ ವಿಭಿನ್ನ ಕಾನೂನುಗಳ ಅಡಿಯಲ್ಲಿ ಬದುಕುವ ಅನಿವಾರ್ಯತೆಗೆ ದೂಡಿತ್ತು ಎಂದು ಅವರು ಹೇಳಿದ್ದಾರೆ.
ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನಲ್ಲಿ ಮಾತನಾಡಿದ ಓಲ್ಸನ್ ಅವರು, ತಾತ್ಕಾಲಿಕ ನಿಬಂಧನೆಯನ್ನು ರದ್ದುಪಡಿಸಿರುವುದರಿಂದ ಜಮ್ಮು ಮತ್ತು ಕಾಶ್ಮೀರದ ಜನರಿಗೆ ಇತರ ಎಲ್ಲಾ ಭಾರತೀಯರಂತೆಯೇ ಬದುಕುವ ಹಕ್ಕುಗಳು ಸಿಕ್ಕಂತಾಗಿದೆ ಎಂದು ಹೇಳಿದ್ದಾರೆ.
ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ಭಾರತೀಯ ಸಂವಿಧಾನದಲ್ಲಿ ವಿಶೇಷ ಸ್ಥಾನಮಾನ ನೀಡಲಾಗಿತ್ತು ಎಂಬುದನ್ನು ನೆನಪಿಸಿಕೊಂಡ ಓಲ್ಸನ್, “ಈ ವರ್ಷ, ಭಾರತೀಯ ಸಂಸತ್ತು 370 ನೇ ವಿಧಿಯನ್ನು ಕೊನೆಗೊಳಿಸಬೇಕು ಎಂದು ದೃಢ ನಿರ್ಧಾರವನ್ನು ತೆಗೆದುಕೊಂಡಿತ್ತು. ಈ ನಿರ್ಧಾರ ಜಮ್ಮು ಕಾಶ್ಮೀರದ ಜನರಿಗೆ ಇತರ ಎಲ್ಲಾ ಭಾರತೀಯರಿಗೆ ಸಮನವಾದ ಹಕ್ಕುಗಳನ್ನು ನೀಡಿತು” ಎಂದಿದ್ದಾರೆ.
370ನೇ ವಿಧಿಯನ್ನು ರದ್ದುಗೊಳಿಸಿದ ಭಾರತೀಯ ಸಂಸತ್ತಿನ ನಿರ್ಧಾರದ ಬಗ್ಗೆ ಯುಎಸ್ ಕಾಂಗ್ರೆಸ್ಸಿಗರು ಮಾತುಕತೆಯನ್ನು ನಡೆಸಿದರು ಮತ್ತು ಇದು ಕಾಶ್ಮೀರದಲ್ಲಿ ಶಾಂತಿಯ ಹೆಜ್ಜೆಯಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಈ ನಿರ್ಧಾರವು ಎಲ್ಲಾ ಭಾರತೀಯರಿಗೆ ಸಮಾನತೆಯನ್ನು ನೀಡುತ್ತದೆ ಎಂದು ಓಲ್ಸನ್ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.