ನವದೆಹಲಿ: ಅತ್ಯುತ್ತಮ “ಪರಿಮಾಣಾತ್ಮಕ ಮತ್ತು ಗುಣಾತ್ಮಕ ನೈರ್ಮಲ್ಯ” ಸೌಲಭ್ಯಗಳಿಗಾಗಿ ತಮಿಳುನಾಡು ಮತ್ತು ಪೆದ್ದಪಲ್ಲಿಗೆ ಕ್ರಮವಾಗಿ ರಾಜ್ಯ ಮತ್ತು ಜಿಲ್ಲಾ ವಿಭಾಗಗಳಲ್ಲಿ ‘ಸ್ವಚ್ಛ ಸರ್ವೇಕ್ಷಣ್ ಗ್ರಾಮೀಣ -2019’ ಪ್ರಶಸ್ತಿಯನ್ನು ಪ್ರದಾನಿಸಲಾಗಿದೆ.
ವಿಶ್ವ ಶೌಚಾಲಯ ದಿನದ ಅಂಗವಾಗಿ ನವದೆಹಲಿಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಮತ್ತು ರತನ್ ಲಾಲ್ ಕಟ್ಟಾರಿಯಾ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ರಾಜ್ಯಗಳ ವಿಭಾಗದಲ್ಲಿ ತಮಿಳುನಾಡು ಮೊದಲ ಸ್ಥಾನ ಗಳಿಸಿದರೆ, ಹರಿಯಾಣ ಎರಡನೇ ಸ್ಥಾನ ಮತ್ತು ಗುಜರಾತ್ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಜಿಲ್ಲೆಗಳ ವಿಭಾಗದಲ್ಲಿ ತಮಿಳುನಾಡಿನ ಪೆದ್ದಪಲ್ಲಿ ಮೊದಲ ಸ್ಥಾನ ಪಡೆದುಕೊಂಡರೆ, ಹರಿಯಾಣದ ಫರಿದಾಬಾದ್ ಎರಡನೇ ಸ್ಥಾನ, ಹರಿಯಾಣದ ರಿವಾರಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.
‘ಸ್ವಚ್ಛ ಸರ್ವೇಕ್ಷಣ್ ಗ್ರಾಮೀಣ್-2019’ ಆಧಾರದಲ್ಲಿ ಪ್ರಶಸ್ತಿಗಳನ್ನು ಪ್ರದಾನಿಸಲಾಗಿದೆ. ಪರಿಮಾಣಾತ್ಮಕ ಮತ್ತು ಗುಣಾತ್ಮಕ ನೈರ್ಮಲ್ಯ ನಿಯತಾಂಕಗಳ ಆಧಾರದಲ್ಲಿ 683 ಗ್ರಾಮಗಳ 17209 ಜಿಲ್ಲೆಗಳನ್ನು ಸ್ವತಂತ್ರ ಸಂಸ್ಥೆಯು ಸಮೀಕ್ಷೆಗೊಳಪಡಿಸಿತ್ತು. ನಿಯಂತಾಕವು ಶಾಲೆ, ಅಂಗನವಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಬಜಾರ್, ಪಂಜಾಯತಿಗಳಲ್ಲಿ ನೈರ್ಮಲ್ಯದ ಸಮೀಕ್ಷೆಯನ್ನು ಒಳಗೊಂಡಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.