ಶಬರಿಮಲೆಯ ಬಗೆಗೆನ ಸುಪ್ರೀಂಕೋರ್ಟ್ ಮೂಲ ಆದೇಶದಲ್ಲಿ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದ ನ್ಯಾಯಾಧೀಶೆ ಇಂದು ಮಲ್ಹೋತ್ರ ಅವರು ತೀರ್ಪಿನ ಸಂದರ್ಭದಲ್ಲಿ ಒಂದು ಮಾತು ಹೇಳಿದ್ದರು. ಅದೇನೆಂದರೆ “ಧರ್ಮದ ವಿಷಯಗಳಲ್ಲಿ ವೈಚಾರಿಕತೆಯ ಕಲ್ಪನೆಗಳನ್ನು ಆಹ್ವಾನಿಸಲಾಗುವುದಿಲ್ಲ” ಎಂದು.
ಅವರ ಮಾತು ಅಪ್ಪಟ ನಿಜ. ನಿಜವಾದ ಮಾತುಗಳನ್ನು ಎಂದಿಗೂ ಹೇಳಲಾಗುವುದಿಲ್ಲ ಎಂಬ ಮಾತಿದೆ. ಪವಿತ್ರ ಗಂಗೆಯು ಶಿವನ ಜಡೆಯಿಂದ ಹೊರಹೊಮ್ಮಿಲ್ಲ, ಅಥವಾ ಪ್ರವಾದಿ ಮೊಹಮ್ಮದ್ ಅವರು ಬುರ್ಖಾ ಧರಿಸಿ ಸ್ವರ್ಗಕ್ಕೆ ಪ್ರಯಾಣಿಸಿಲ್ಲ ಅಥವಾ ಯೇಸುಕ್ರಿಸ್ತನು ನೀರನ್ನು ವೈನ್ ಆಗಿ ಪರಿವರ್ತಿಸಿಲ್ಲ ಎಂದು ಭಕ್ತರನ್ನು ನಂಬಿಸುವುದು ಸುಪ್ರೀಂಕೋರ್ಟ್ಗೆ ಸಾಧ್ಯವಾಗುವುದೇ?
ಹೌದು, ನ್ಯಾಯಾಲಯಗಳಿಗೆ ಧಾರ್ಮಿಕ ಪದ್ಧತಿ ಮತ್ತು ನಂಬಿಕೆಗಳಲ್ಲಿ ಯಾವುದೇ ಪಾತ್ರ ವಹಿಸಲು ಸಾಧ್ಯವಿಲ್ಲ. ಅದು ನಂಬಿಕೆಗಳಲ್ಲಿ ಮಧ್ಯಪ್ರವೇಶವನ್ನು ಮಾಡಬಾರದು ಕೂಡ. ನಂಬಿಕೆಗಳಿಗೆ ನೋವುಂಟು ಮಾಡುವ ಆದೇಶವನ್ನು ನೀಡಿದರೆ ನಂಬಿಕೆಯುಳ್ಳವರಿಗೆ ನೋವುಂಟಾಗುತ್ತದೆ.
ಉದಾಹರಣೆಗೆ, ವಸ್ತ್ರ ಸಂಹಿತೆಯನ್ನು ರೂಪಿಸುವುದು ದಬ್ಬಾಳಿಕೆ ಎಂದು ಪರಿಗಣಿಸಲಾಗಿದೆ, ಆದರೆ ವಸ್ತ್ರ ಸಂಹಿತೆಯನ್ನು ನಿಷೇಧಿಸಲು ಸುಪ್ರೀಂಕೋರ್ಟಿಗೆ ಸಾಧ್ಯವೇ? ಹೀಗೆ ಮಾಡಿದರೆ ಬುರ್ಖಾ ಧರಿಸುವ ಮುಸ್ಲಿಮರಿಗೆ ನೋವಾಗುವುದಿಲ್ಲವೇ. ಪವಿತ್ರ ಖುರಾನಿಗೆ ಇದು ವಿರುದ್ಧವಾಗುವುದಿಲ್ಲವೇ?
ಶಬರಿಮಲೆ ತೀರ್ಪು ಬಂದಾಗ ಸಂತೋಷದಿಂದ ಕೇಕೆ ಹಾಕಿದ ಮಹಿಳಾವಾದಿಗಳು, ಉದಾರವಾದಿಗಳು ವಸ್ತ್ರ ಸಂಹಿತೆ ನಿಷೇಧದಂತಹ ಕ್ರಮವನ್ನು ಒಪ್ಪಿಕೊಳ್ಳುವರೇ? ಎಲ್ಲಾ ಪೂಜಾ ಸ್ಥಳಗಳಿಗೂ ಮಹಿಳೆಯರಿಗೆ ಪ್ರವೇಶವಿದೆ ಎಂಬ ತೀರ್ಪು ಮಸೀದಿಗಳಿಗೂ ಅನ್ವಯಿಸುತ್ತದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಹೇಳುತ್ತಿದ್ದರೆ ಕೇಳಲು ಎಷ್ಟು ಆಹ್ಲಾದದಾಯಕವಾಗಿರುತ್ತಿತ್ತಲ್ಲವೇ?
ಯಾವುದೇ ತಾರತಮ್ಯ, ಬೇದಭಾವ, ಯಾವುದೇ ನಿರ್ದಿಷ್ಟ ಧರ್ಮದ ಬಗ್ಗೆ ಪಕ್ಷಪಾತವಿಲ್ಲದೇ ಇರುವುದನ್ನು ಎಲ್ಲರೂ ಕಾಣಲು ಬಯಸುತ್ತಾರೆ. ಆದರೆ ಒಂದು ಧರ್ಮಕ್ಕೆ ಮಾತ್ರ ಮೀಸಲಾಗಿ ತೀರ್ಪನ್ನು ನೀಡಲು ಹೇಗೆ ಸಾಧ್ಯ ಎಂಬುದೇ ಎಲ್ಲರಿಗೂ ಅಚ್ಚರಿಯುಂಟು ಮಾಡುವ ಸಂಗತಿಯಾಗುತ್ತದೆ. ಈಗ ಇಸ್ಲಾಂ ಮತ್ತು ಇತರ ಧರ್ಮಗಳನ್ನೂ ಈ ತೀರ್ಪಿನೊಳಗೆ ಸೇರಿಸಿಕೊಂಡರೆ, ಇದು ಶಬರಿಮಲಾ ಪರವಾದ ದಾವೆದಾರರ ಪರವಾದ ನಿಲುವು ಎಂದೇ ಪರಿಗಣಿಸಬಹುದು.
ಭಾರತದಲ್ಲಿ ಪುರುಷರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿರುವ ಅನೇಕ ಹಿಂದೂ ದೇವಾಲಯಗಳಿವೆ. ದೇಶದಲ್ಲಿ ಇರುವ ಅನೇಕ ಅಯ್ಯಪ್ಪ ದೇವಾಲಯಗಳಲ್ಲಿ ಮತ್ತು ಇತರ ಹಿಂದೂ ದೇವಾಲಯಗಳಲ್ಲಿ ಮಹಿಳೆಯರಿಗೆ ಪ್ರವೇಶವಿದೆ. ಆದರೆ ಶಬರಿಮಲೆಯಲ್ಲಿ ಮಾತ್ರ ಪ್ರವೇಶವಿಲ್ಲ. ಬ್ರಹ್ಮಚಾರಿಯಾಗಿ ಉಳಿಯಲು ಅಯ್ಯಪ್ಪನ್ನು ಮಾಡಿದ ಪ್ರತಿಜ್ಞೆಯಿಂದಾಗಿ ಈ ಪದ್ಧತಿ ಅಲ್ಲಿ ರೂಢಿಯಲ್ಲಿದೆ. ನಿರ್ದಿಷ್ಟ ವಯಸ್ಸಿನ ಅಂದರೆ ಮುಟ್ಟಾಗುವ ಮಹಿಳೆಯರಿಗೆ ಪ್ರವೇಶವನ್ನು ಅಲ್ಲಿ ಅನುಮತಿಸಲಾಗಿಲ್ಲ ಅಷ್ಟೇ.
ಮುಟ್ಟಿನ ಸಂದರ್ಭದಲ್ಲಿ ಮುಸ್ಲಿಮರಿಗೆ ಮಹಿಳೆಯರಿಗೂ ಖುರಾನ್ ಮುಟ್ಟಬಾರದು, ರಂಜಾನ್ ಉಪವಾಸ ಮಾಡಬಾರದು, ನಮಾಝ್ ಮಾಡಬಾರದು ಎಂಬಿತ್ಯಾದಿ ನಿಯಮವಿದೆ. ಹಾಗಾದರೆ, ಈಗ ಅವರು ಮುಟ್ಟಿನ ಸಂದರ್ಭದಲ್ಲಿ ಇದನ್ನೆಲ್ಲ ಮಾಡಬಹುದೇ?
ನಮ್ಮ ಸಂವಿಧಾನದ ವಿಧಿ 21 (ಜೀವನದ ಹಕ್ಕು, ಘನತೆ ಮತ್ತು ಸ್ವಾತಂತ್ರ್ಯ) ಮತ್ತು 25 (ಯಾವುದೇ ಧರ್ಮವನ್ನು ಆಚರಿಸುವ ಹಕ್ಕು) ನಡುವೆ ಮೂಲಭೂತ ವಿರೋಧಾಭಾಸವಿದೆ. ಒಬ್ಬರು ಒಂದನ್ನು ಅನುಸರಿಸಿದರೆ ಅಥವಾ ಗೌರವಿಸಿದರೆ, ಇನ್ನೊಬ್ಬರನ್ನು ಅನುಸರಿಸುವುದು ಅಥವಾ ಗೌರವಿಸುವುದು ಅಸಾಧ್ಯವಾಗುತ್ತದೆ. ಯಾಕೆಂದರೆ ಸಾವಿರಾರು ಧಾರ್ಮಿಕ ಆಜ್ಞೆಗಳು, ನಿರ್ದೇಶನಗಳು, 21ನೇ ವಿಧಿಗೆ ನೇರವಾಗಿ ವಿರುದ್ಧವಾಗಿದೆ.
ಕಟ್ಟಾ ಕ್ಯಾಥೊಲಿಕ್ ಮಹಿಳೆಯಾಗಿದ್ದರೂ ಕೂಡ ಅವರನ್ನು ಪಾದ್ರಿಗಳಾಗಿ ನೇಮಿಸಲಾಗುವುದಿಲ್ಲ. ಕಟ್ಟಾ ಮುಸ್ಲಿಂ ಮಹಿಳೆಯಾಗಿದ್ದರೆ, ಹಾಡಲು, ನೃತ್ಯ ಮಾಡಲು, ಕ್ರೀಡೆಗಳನ್ನು ಆಡಲು, ಕುಡಿಯಲು, ವ್ಯಭಿಚಾರ ಮಾಡಲು, ಸಲಿಂಗಕಾಮಿಯಾಗಲು, ಬೇಕಾದುದನ್ನು ಧರಿಸಲು ಅಥವಾ ಧರ್ಮಭ್ರಷ್ಟರಾಗಲು ಸಾಧ್ಯವಿಲ್ಲ.
ಪ್ರಗತಿಪರ, ಜಾತ್ಯಾತೀತ ಸ್ಥಿತಿಯು, ಹಿಂದೂ ಧರ್ಮದಲ್ಲಿರುವ ತಾರತಮ್ಯವನ್ನು ತೆಗೆದು ಹಾಕಲು ನೋಡುತ್ತದೆ, ಆದರೆ ಇತರ ಧರ್ಮಗಳಲ್ಲಿ ಇರುವ ತಾರತಮ್ಯದ ಅಭ್ಯಾಸಗಳನ್ನು ತೆರೆಮರೆಯಲ್ಲಿ ನಿಂತು ನೋಡುತ್ತದೆ, ಅದರ ಬಗ್ಗೆ ಚಕಾರವೂ ಎತ್ತುವುದಿಲ್ಲ. ಇದು ಪ್ರಗತಿಪರ, ಜಾತ್ಯತೀತ ಮನಸ್ಥಿತಿಯಲ್ಲ, ಬದಲಿಗೆ ಭಯಭೀತ ಸ್ಥಿತಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.