ಭಾರತದ ಮಕ್ಕಳಲ್ಲಿ ಅಪೌಷ್ಟಿಕತೆಯ ಹರಡುವಿಕೆಯ ಕುರಿತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್), ಪಬ್ಲಿಕ್ ಹೆಲ್ತ್ ಫೌಂಡೇಶನ್ ಆಫ್ ಇಂಡಿಯಾ (ಪಿಎಚ್ಎಫ್ಐ) ಮತ್ತು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ (ಎನ್ಐಎನ್) ಜಂಟಿಯಾಗಿ ಬಿಡುಗಡೆ ಮಾಡಿದ ವರದಿಯು, ಶೇಕಡಾ 39.3 ರಷ್ಟು ಮಕ್ಕಳ ಬೆಳವಣಿಗೆ ಕುಂಠಿತಗೊಂಡಿದೆ ಎಂದು ಉಲ್ಲೇಖ ಮಾಡಿದೆ. ದೇಶದಲ್ಲಿ 32.7 ಶೇಕಡಾ ಮಕ್ಕಳು ಕಡಿಮೆ ತೂಕ ಮತ್ತು 21.4 ಶೇಕಡಾ ಮಕ್ಕಳು ಕಡಿಮೆ ಜನನ ತೂಕವನ್ನು ಅನುಭವಿಸುತ್ತಿದ್ದಾರೆ. ಈ ವರದಿಯನ್ನು, ಆರೋಗ್ಯ ವಿಜ್ಞಾನಿಗಳು, ಅಪೌಷ್ಟಿಕತೆ ತಜ್ಞರು ಮತ್ತು ದೇಶಾದ್ಯಂತದ ನೀತಿ ನಿರೂಪಕರು ಎಲ್ಲಾ ರಾಜ್ಯಗಳಿಂದ ದತ್ತಾಂಶವನ್ನು ಸಂಗ್ರಹಿಸಿ ವರದಿಯನ್ನು ಸಿದ್ಧಪಡಿಸಿದ್ದರು.
ಮಕ್ಕಳಲ್ಲಿ ಅಪೌಷ್ಟಿಕತೆಯ ಹರಡುವಿಕೆಯನ್ನು ಕಡಿಮೆ ಮಾಡುವ ಉದ್ದೇಶದಿಂದ, ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಸಬ್ ಇನ್ಸ್ಪೆಕ್ಟರ್ ಹೈದರಾಬಾದ್ ಮೂಲದ ಶೇಖರ್ ಮರವಾಣಿ ಅವರು ಮಾರ್ಚ್ 24, 2018 ರಂದು ವೈಟ್ ವಾಲಂಟಿಯರ್ಸ್ ಫೌಂಡೇಶನ್ ಎಂಬ ಎನ್ಜಿಒವನ್ನು ಪ್ರಾರಂಭಿಸಿದರು.
“ಮಕ್ಕಳಿಗೆ ಚುಚ್ಚುಮದ್ದನ್ನು ನೀಡಿದಾಗ ಅವರು ಮೂರ್ಛೆ ಹೋಗುವುದನ್ನು ನಾನು ನೋಡಿದೆ. ಇದು ನಿಜವಾಗಿಯೂ ನನ್ನನ್ನು ಬೆಚ್ಚಿಬೀಳಿಸಿತು. ಆ ಮಕ್ಕಳು ಏನನ್ನೂ ತಿನ್ನುತ್ತಿಲ್ಲ ಎಂಬುದನ್ನು ನಾನು ಅರಿತುಕೊಂಡೆ, ಮಕ್ಕಳು ಮೂರ್ಛೆ ಹೋಗಲು ಸರಿಯಾಗಿ ತಿನ್ನದೇ ಇರುವುದೇ ಕಾರಣವಾಗಿತ್ತು” ಎಂದು ಶೇಖರ್ ಅವರು ವಿವರಿಸುತ್ತಾರೆ.
ಸಿಆರ್ಪಿಎಫ್ ಎಸ್ಐ ಆಗಿರುವ ಶೇಖರ್ ಮರವಾಣಿ ಅವರು 6 ಪ್ರಾಥಮಿಕ ಶಾಲೆಗಳಲ್ಲಿ ನಿತ್ಯಪಾಲಮೃತಂ ಕಾರ್ಯಕ್ರಮವನ್ನು ಪ್ರಾರಂಭ ಮಾಡಿದ್ದಾರೆ. ಸರ್ಕಾರಿ ಶಾಲೆಗಳಿಗೆ ಮತ್ತು ಅಂಗನವಾಡಿಗಳಿಗೆ ಹೋಗುವ ಪ್ರತಿ ಮಗುವಿಗೆ ಪ್ರತಿದಿನ ಕನಿಷ್ಠ 150 ಮಿಲಿ ಲೀಟರ್ ಹಾಲು ಕುಡಿಯುವುದನ್ನು ಖಚಿತಪಡಿಸಿಕೊಳ್ಳಲು ವೈಟ್ ವಾಲಂಟಿಯರ್ಸ್ ಫೌಂಡೇಶನ್ ಸಂಸ್ಥೆಯು ನಿತ್ಯಪಾಲಾಮೃತಂ ಕಾರ್ಯಕ್ರಮವನ್ನು ಪ್ರಾರಂಭಿಸಿದೆ.
ಕಾರ್ಯಕ್ರಮ ಪ್ರಾರಂಭಿಸಿದಾಗಿನಿಂದ, ಈ ಎನ್ಜಿಒ ತೆಲಂಗಾಣ ಮತ್ತು ಜಮ್ಮುವಿನ 124 ಮಕ್ಕಳಿಗೆ ಕನಿಷ್ಠ 4,536 ಲೀಟರ್ ಹಾಲನ್ನು ಒದಗಿಸಿದೆ. ಅಲ್ಲಿನ ಸ್ಥಳೀಯ ಎನ್ಜಿಒಗಳ ಸಹಯೋಗದೊಂದಿಗೆ ಕೆಲಸವನ್ನು ಈ ಸಂಸ್ಥೆ ಮಾಡುತ್ತಿದೆ.
ಅಧ್ಯಯನ ಮಾಡುವ ಮಕ್ಕಳ ಆಧಾರದ ಮೇಲೆ ಶಾಲೆಗಳನ್ನು ಆಯ್ಕೆ ಮಾಡಲಾಗುತ್ತದೆ.
ಎನ್ಜಿಒವು ತೆಲಂಗಾಣ, ಆಂಧ್ರಪ್ರದೇಶ, ಜಮ್ಮು ಮುಂತಾದ ವಿವಿಧ ಪ್ರದೇಶಗಳಲ್ಲಿ ಸುಮಾರು 2,000 ಸ್ವಯಂಸೇವಕರನ್ನು ಹೊಂದಿದೆ ಮತ್ತು ಅಲ್ಲಿ ಶಾಲೆಗಳನ್ನೂ ದತ್ತುಪಡೆದುಕೊಂಡಿದೆ. ನವದೆಹಲಿ ಮತ್ತು ಪಂಜಾಬ್ನಂತಹ ರಾಜ್ಯಗಳಿಂದ ಸ್ವಯಂಸೇವಕರು ಶೇಖರ್ ಅವರೊಂದಿಗೆ ಸಂಪರ್ಕ ಹೊಂದಿದ್ದಾರೆ.
“ಬಡತನದ ಹಿನ್ನಲೆಯಿಂದ ಬಂದಿರುವ ಮಕ್ಕಳು ಇರುವ ಶಾಲೆಗಳನ್ನು ನಾವು ಗುರಿಯಾಗಿಸಿಕೊಂಡು ಕಾರ್ಯಕ್ರಮ ಆರಂಭಿಸಿದ್ದೇವೆ. ಕಾರ್ಯಕ್ರಮ ಆರಂಭಿಸುವುದಕ್ಕೂ ಮುನ್ನ ಈ ಶಾಲೆಗಳಲ್ಲಿನ ಶಿಕ್ಷಕರು, ಶಾಲಾ ನಿರ್ವಹಣೆ, ಮಕ್ಕಳ ಕುಟುಂಬಗಳೊಂದಿಗೆ ನಾವು ಮಾತುಕತೆಯನ್ನು ನಡೆಸುತ್ತೇವೆ” ಎಂದು ಅವರು ವಿವರಿಸಿದ್ದಾರೆ.
ಈ ಶಾಲೆಗಳಲ್ಲಿ ವ್ಯಾಸಂಗ ಮಾಡುವ ಹೆಚ್ಚಿನ ಮಕ್ಕಳು 3 ವರ್ಷದಿಂದ 12 ವರ್ಷದೊಳಗಿನವರು.
“ಪ್ರತಿದಿನ, ಶಾಲೆಯಲ್ಲಿನ ಆಯಾಗಳು ಸಹಕಾರಿ ಹಾಲಿನ ಅಂಗಡಿಗೆ ಹೋಗಿ, ಹಾಲನ್ನು ಖರೀದಿ ಮಾಡಿ ಅದನ್ನು ಮಕ್ಕಳಿಗೆ ಕುಡಿಯಲು ನೀಡುತ್ತಾರೆ. ಹಾಲಿನ ಕಾರ್ಯಕ್ರಮವು ಸುಗಮವಾಗಿ ನಡೆಯುತ್ತಿದೆಯೇ ಎಂದು ಪರಿಶೀಲಿಸಲು ನನ್ನ ತಂಡವು ಪ್ರತಿ ವಾರ ಅಲ್ಲಿಗೆ ಭೇಟಿ ನೀಡುತ್ತದೆ” ಎಂದು ಅವರು ಹೇಳುತ್ತಾರೆ.
ಹೈದರಾಬಾದ್ನ ಸ್ನೇಹಿತರು, ಸ್ಥಳೀಯರು ಮತ್ತು ಪ್ರಾಯೋಜಕರ ಬೆಂಬಲ ಮತ್ತು ದೇಣಿಗೆ ಮೂಲಕ ಎನ್ಜಿಒ ತಮ್ಮ ಕಾರ್ಯಕ್ರಮಗಳಿಗೆ ಹಣವನ್ನು ಸಂಗ್ರಹಿಸುತ್ತಿದೆ. ತೆಲಂಗಾಣದ ಸುಮಾರು ಐದು ಸರ್ಕಾರಿ ಶಾಲೆಗಳಲ್ಲಿ ಮತ್ತು ಶೇಖರ್ ಅವರು ನಿಯೋಜಿತರಾಗಿರುವ ಜಮ್ಮುವಿನ ಒಂದು ಶಾಲೆಯಲ್ಲಿ ಹಾಲಿನ ಕಾರ್ಯಕ್ರಮ ನಡೆಯುತ್ತಿದೆ.
ಸಿಆರ್ಪಿಎಫ್ ಯೋಧನಾದ ಮರವಾಣಿ ಅವರು ತಮ್ಮ ಜೀವನದಲ್ಲಿ ಹಲವಾರು ಹೆಗ್ಗಳಿಕೆಗಳನ್ನು ಹೊಂದಿದ್ದಾರೆ. 2008 ರಲ್ಲಿ ಬಿಕಾಂ ಪದವಿ ಮುಗಿಸಿದ ನಂತರ, ಅವರು ಎಚ್ಡಿಎಫ್ಸಿ ಬ್ಯಾಂಕಿನಲ್ಲಿ ಆರಂಭದಲ್ಲಿ ನೇಮಕಾತಿ ಸಲಹೆಗಾರರಾಗಿ ಮತ್ತು ನಂತರ 3 ವರ್ಷಗಳ ಕಾಲ ಸೇಲ್ಸ್ ಡೆವಲಪ್ಮೆಂಟ್ ಮ್ಯಾನೇಜರ್ ಆಗಿ ಕೆಲಸ ಮಾಡಿದರು. ಬಳಿಕ ಕೆಲಸ ಮಾಡುತ್ತಲೇ ಸರ್ಕಾರಿ ಉದ್ಯೋಗಗಳಿಗೆ ತಯಾರಿ ನಡೆಸುತ್ತಿದ್ದರು, ಪರೀಕ್ಷೆಯನ್ನು ತೇರ್ಗಡೆಯಾದ ಬಳಿಕ ಅಂತಿಮವಾಗಿ ಅವರು 2012 ರಲ್ಲಿ ಸಿಆರ್ಪಿಎಫ್ ಸಬ್ ಇನ್ಸ್ಪೆಕ್ಟರ್ ನಿಯುಕ್ತರಾದರು.
ಬಳಿಕ ಅವರು ಕೊಯಮತ್ತೂರಿನಲ್ಲಿ ತಮ್ಮ ತರಬೇತಿಯನ್ನು ಮುಗಿಸಿದರು ಮತ್ತು ಜೂನ್ 2013ರಲ್ಲಿ ಅಸ್ಸಾಂನಲ್ಲಿ ನೇಮಕಗೊಂಡರು. ಅಸ್ಸಾಂ ನಂತರ ಅವರು ಛತ್ತೀಸ್ಗಢದಲ್ಲಿ ಕರ್ತವ್ಯ ನಿರ್ವಹಣೆ ಮಾಡಿದರು. ಎರಡೂ ರಾಜ್ಯಗಳಲ್ಲಿನ ಅವರ ಅನುಭವಗಳು ದೇಶದಲ್ಲಿ ಚಾಲ್ತಿಯಲ್ಲಿದ್ದ ಅಭಿವೃದ್ಧಿ ವಿಷಯಗಳ ಬಗ್ಗೆ ಅವರ ವಿಶ್ವ ದೃಷ್ಟಿಕೋನವನ್ನು ವಿಸ್ತರಿಸಿತು.
ಮಗುವಿನ ಬೆಳವಣಿಗೆ ಮತ್ತು ಬೆಳವಣಿಗೆಯಲ್ಲಿ ಪೌಷ್ಠಿಕಾಂಶವು ವಹಿಸುವ ಪ್ರಮುಖ ಪಾತ್ರವನ್ನು ಶೇಖರ್ ತಮ್ಮ ಕೆಲಸದ ಮೂಲಕ ಅರಿತುಕೊಂಡರು.
ಶೇಖರ್ ಅವರನ್ನು 2015 ರಿಂದ 2017 ರವರೆಗೆ ಛತ್ತೀಸ್ಗಢದ ಸುಕ್ಮಾ ಬಳಿಯ ಬಿಜಾಪುರ ಜಿಲ್ಲೆಯಲ್ಲಿ ನೇಮಕಗೊಂಡರು. ಅಲ್ಲಿ ಅವರು ಮಕ್ಕಳ ಆರೋಗ್ಯ ಮತ್ತು ಶಿಕ್ಷಣದ ಮೇಲೆ ಕೇಂದ್ರೀಕರಿಸಿ ಈ ಪ್ರದೇಶದ ಮಕ್ಕಳ ಕಲ್ಯಾಣ ಇಲಾಖೆಯೊಂದಿಗೆ ನಿಕಟವಾಗಿ ಕೆಲಸ ಮಾಡುವ ಜವಾಬ್ದಾರಿಯನ್ನು ಹೊಂದಿದ್ದರು.
ಅಲ್ಲಿ ಮಕ್ಕಳ ಸ್ಥಿತಿಗತಿ ತುಂಬಾ ಕೆಟ್ಟದ್ದಾಗಿತ್ತು, ಶಾಲೆಗಳಲ್ಲಿ ಮಕ್ಕಳ ಸಂಖ್ಯೆಯು ಕೆಲವೊಮ್ಮೆ ಒಂದು ಕೂಡ ಇರುತ್ತಿರಲಿಲ್ಲ ಎಂದು ಮರವಾಣಿ ನೆನಪಿಸಿಕೊಳ್ಳುತ್ತಾರೆ. ಅಲ್ಲಿ ವೈದ್ಯರುಗಳು ಮಕ್ಕಳಿಗೆ ಚುಚ್ಚು ಮದ್ದು ಕೊಡುತ್ತಿದ್ದಾಗ ಮಕ್ಕಳು ತಲೆತಿರುಗಿ ಬೀಳುವುದನ್ನು ಅವರು ನೋಡುತ್ತಿದ್ದರು. ಇದು ಅವರಿಗೆ ನಿತ್ಯಪಾಲಾಮೃತಂ ಯೋಜನೆ ಆರಂಭಿಸಲು ಪ್ರೇರಣೆಯಾಯಿತು.
ಅವರು ಛತ್ತೀಸ್ಗಢ ಪೋಸ್ಟ್ನಿಂದ ಹಿಂದಿರುಗಿದ ನಂತರ, ತೆಲಂಗಾಣ ಸೊಸೈಟೀಸ್ ಆ್ಯಕ್ಟ್ -2001 ಅಡಿಯಲ್ಲಿ ಎನ್ಜಿಒ ವೈಟ್ ವಾಲೆಂಟಿಯರ್ಸ್ ಎನ್ ಜಿ ಓ ಅನ್ನು ನೋಂದಾಯಿಸಿದರು. ಈ ಎನ್ಜಿಓ ಸ್ವಯಂಸೇವಕರು ಕೊಳೆಗೇರಿ ಭೇಟಿ, ಅಲ್ಲಿನ ಮಕ್ಕಳಿಗೆ ಶಿಕ್ಷಣದ ಮಹತ್ವದ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನೂ ಮಾಡುತ್ತಿದ್ದಾರೆ.
ನಿತ್ಯಪಾಲಾಮೃತಂ ಮಾತ್ರವಲ್ಲದೇ ಈ ಎನ್ ಜಿ ಓ ವಸ್ತ್ರದಾನ ಕಾರ್ಯಕ್ರಮವನ್ನು ಕೂಡ ಹಮ್ಮಿಕೊಳ್ಳುತ್ತಿದೆ. ಈ ಕಾರ್ಯಕ್ರಮದಡಿ ಹೈದರಾಬಾದಿನಾದ್ಯಂತ ಇರುವ ಸುಮಾರು 24 ಕೊಳೆಗೇರಿಗಳಲ್ಲಿ ಅಗತ್ಯವಿರುವವರಿಗೆ ಬಟ್ಟೆಗಳನ್ನು ಒದಗಿಸಲಾಗುತ್ತದೆ. ಪ್ರಸ್ತುತ ಈ ಎನ್ಜಿಒ ಸರ್ಕಾರಿ ಶಾಲೆಗಳಿಗೆ ನಿತ್ಯ 4000 ಲೀಟರ್ ಹಾಲನ್ನು ಹಂಚಿಕೆ ಮಾಡುತ್ತಿದೆ.
ಶೇಖರ್ ಮರವಾಣಿ ಅವರು ಆರಂಭಿಸಿರುವ ಈ ಕಾರ್ಯಕ್ರಮಗಳು ನಿಜಕ್ಕೂ ಸಮಾಜದಲ್ಲಿ ಮಹತ್ವದ ಬದಲಾವಣೆಯನ್ನು ತರುವ ನಿಟ್ಟಿನಲ್ಲಿ ಪ್ರೇರಣಾದಾಯಕವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.