ನವದೆಹಲಿ: ತನ್ನ ಮಹತ್ವಾಕಾಂಕ್ಷೆಯ ಕಾರ್ಯಕ್ರಮದ ಮೂಲಕ ಭಾರತೀಯ ಸೇನೆಯು, ಪಾಕಿಸ್ಥಾನ ಬೆಂಬಲಿತ ಭಯೋತ್ಪಾದಕ ಸಂಘಟನೆಯತ್ತ ವಾಲಿದ್ದ ಜಮ್ಮು ಕಾಶ್ಮೀರದ ಸುಮಾರು 60 ಸ್ಥಳಿಯ ಯುವಕರನ್ನು ಭಯೋತ್ಪಾದನೆಯ ಕಪಿಮುಷ್ಟಿಯಿಂದ ಯಶಸ್ವಿಯಾಗಿ ಹೊರ ತಂದಿದೆ.
ಯುವಕರನ್ನು ಭಯೋತ್ಪಾದನೆಯಿಂದ ರಕ್ಷಿಸುವ ಸಲುವಾಗಿ ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್ (15 ಕಾರ್ಪ್ಸ್) ಫೆಬ್ರವರಿ ತಿಂಗಳಲ್ಲಿ ‘ಆಪರೇಶನ್ ಮಾ’ ಎಂಬ 8 ತಿಂಗಳ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಲೆಫ್ಟಿನೆಂಟ್ ಜನರಲ್ ಕೆಜೆಎಸ್ ದಿಲ್ಲಾನ್ ಅವರು ಚಿನಾರ್ ಕಾರ್ಪ್ಸ್ ಕಮಾಂಡರ್ ಆಗಿ ನೇಮಕವಾದ ಬಳಿಕ ಈ ಕಾರ್ಯಕ್ರಮವನ್ನು ಆರಂಭಿಸಲಾಗಿದೆ.
“ಪಾಕಿಸ್ಥಾನ ಬೆಂಬಲಿತ ಭಯೋತ್ಪಾದಕ ಸಂಘಟನೆಗಳಿಂದ ಬ್ರೇನ್ವಾಶ್ಗೊಳಗಾಗಿ ಭಯೋತ್ಪಾದನೆಯತ್ತ ಆಕರ್ಷಿತರಾಗುವ ಯುವಕರನ್ನು ಮತ್ತೆ ಸಮಾಜದ ಮುಖ್ಯವಾಹಿನಿಗೆ ಕರೆತರುವುದು ಈ ಕಾರ್ಯಕ್ರಮದ ಹಿಂದಿನ ಮೂಲ ಉದ್ದೇಶವಾಗಿದೆ. ಈ ಕಾರ್ಯಕ್ರಮದ ಮೂಲಕ ಉಗ್ರ ಪಥವನ್ನು ಆಯ್ಕೆ ಮಾಡಿಕೊಂಡಿರುವ ಕಣಿವೆಯ ಸ್ಥಳಿಯ ಯುವಕರನ್ನು ಸಮಾಜದ ಮುಖ್ಯವಾಹಿನಿಗೆ ತಂದು ಅವರ ಪುನರ್ವಸತಿಗಾಗಿ ಎಲ್ಲಾ ವಿಧಾನದಲ್ಲೂ ಸಹಾಯ ಮಾಡಲಾಗುತ್ತದೆ” ಎಂದು ಸೇನೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸೇನೆಯ ಮೂಲಗಳ ಪ್ರಕಾರ, ಭಯೋತ್ಪಾದಕ ಗುಂಪುಗಳಿಂದ ದೂರವಾದ ಸುಮಾರು 50 ಯುವಕರಿಗೆ ಈಗಾಗಲೇ ಪುನರ್ವಸತಿ ಕಲ್ಪಿಸಿಕೊಡಲಾಗಿದೆ. ಇನ್ನೂ 10 ಯುವಕರನ್ನು ಪುನರ್ವಸತಿಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದಿದ್ದಾರೆ.
ತಾಯಂದಿರ ಮೂಲಕ ಯುವಕರನ್ನು ಸಮಾಜದ ಮುಖ್ಯವಾಹಿನಿಗೆ ಕರೆ ತರುವ ಪ್ರಯತ್ನಗಳನ್ನು ನಡೆಸಲಾಗುತ್ತದೆ. ಅದಕ್ಕಾಗಿಯೇ ಈ ಕಾರ್ಯಕ್ರಮಕ್ಕೆ ‘ಆಪರೇಶನ್ ಮಾ’ ಎಂದು ಹೆಸರಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.