ಕೋಲ್ಕತ್ತಾ: ವಿಜ್ಞಾನದಲ್ಲಿ ವೈಫಲ್ಯ ಎಂಬುದು ಇರುವುದಿಲ್ಲ, ಕೇವಲ ಪ್ರಯತ್ನ, ಪ್ರಯೋಗ ಮತ್ತು ಸಫಲತೆ ಇರುತ್ತದೆ. ಈ ಮಾತನ್ನು ಮನಸ್ಸಿನಲ್ಲಿಟ್ಟುಕೊಂಡು ಮುನ್ನಡೆದರೆ ವಿಜ್ಞಾನ ಕ್ಷೇತ್ರದಲ್ಲಿ ಮತ್ತು ಜೀವನದಲ್ಲಿ ನಿಮಗೆ ಯಾವುದೇ ಕಷ್ಟಗಳು ಎದುರಾಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮಂಗಳವಾರ ಕೋಲ್ಕತ್ತಾದಲ್ಲಿ ನಡೆಯುತ್ತಿರುವ 5ನೇ ಇಂಡಿಯನ್ ಇಂಟರ್ನ್ಯಾಷನಲ್ ಸೈನ್ಸ್ ಫೆಸ್ಟಿವಲ್ ಅನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ವಿಜ್ಞಾನ ಮತ್ತು ಮಾನವ ಕಲ್ಯಾಣಕ್ಕೆ ಅಪ್ರತಿಮ ಕೊಡುಗೆದಾರರನ್ನು ನೀಡಿದ ನಾಡಿನಲ್ಲಿ ಇಂಟರ್ನ್ಯಾಷನಲ್ ಸೈನ್ಸ್ ಫೆಸ್ಟಿವಲ್ ಜರುಗುತ್ತಿದೆ ಎಂದು ಸಂತೋಷ ವ್ಯಕ್ತಪಡಿಸಿದರು.
“ವಿಜ್ಞಾನಕ್ಕೆ ಸಂಬಂಧಿಸಿದಂತೆ ನಮ್ಮ ಯುವ ವಿದ್ಯಾರ್ಥಿಗಳಲ್ಲಿ ಹೊಸ ಅಭಿರುಚಿ ಹುಟ್ಟಿಕೊಂಡಿದೆ. ವಿಜ್ಞಾನದ ಈ ಶಕ್ತಿಯನ್ನು, ಈ ಸಾಮರ್ಥ್ಯವನ್ನು 21ನೇ ಶತಮಾನದ ವೈಜ್ಞಾನಿಕ ಪರಿಸರದಲ್ಲಿ ಸರಿಯಾದ ದಿಶೆಯಲ್ಲಿ ಕೊಂಡೊಯ್ಯುವುದು, ಸರಿಯಾದ ವೇದಿಕೆಯನ್ನು ಕಲ್ಪಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ” ಎಂದರು.
ವಿಶ್ವಕ್ಕೆ ನಾವು ಹಲವಾರು ಶ್ರೇಷ್ಠ ವಿಜ್ಞಾನಿಗಳನ್ನು ನೀಡಿದ್ದೇವೆ. ನಮ್ಮ ಇತಿಹಾಸ ಶ್ರೀಮಂತವಾಗಿದೆ. ನಮ್ಮ ವಾಸ್ತವ ಸಂಪೂರ್ಣ ವಿಜ್ಞಾನ ಮತ್ತು ತಂತ್ರಜ್ಞಾನದಿಂದ ಪ್ರಭಾವಿತಗೊಂಡಿದೆ. ವಿಜ್ಞಾನ ಮತ್ತು ತಂತ್ರಜ್ಞಾನವಿಲ್ಲದೆ ಪ್ರಗತಿ ಹೊಂದಿದ ಯಾವುದೇ ದೇಶ ಇರಲು ಸಾಧ್ಯವಿಲ್ಲ ಎಂದರು.
“ಸಿ.ವಿ.ರಾಮನ್ ಮತ್ತು ಜಗದೀಶ್ ಚಂದ್ರ ಬೋಸ್ ಅವರ ಜನ್ಮ ದಿನಾಚರಣೆಯನ್ನು ಭಾರತ ನವೆಂಬರ್ 7 ಮತ್ತು ನವೆಂಬರ್ 30 ರಂದು ಆಚರಿಸುವ ಸಮಯದಲ್ಲೇ ಸೈನ್ಸ್ ಫೆಸ್ಟಿವಲ್ ನಡೆಸಲಾಗುತ್ತಿದೆ” ಎಂದು ಅವರು ಹೇಳಿದರು. ಅಲ್ಲದೇ, ”ಭಾರತವು ಅನೇಕ ಶ್ರೇಷ್ಠ ವಿಜ್ಞಾನಿಗಳನ್ನು ಜಗತ್ತಿಗೆ ನೀಡಿದೆ, ವಿಜ್ಞಾನ ನಮ್ಮ ಇತಿಹಾಸವು ನಮಗೆ ಹೆಮ್ಮೆ ತರುತ್ತದೆ ಮತ್ತು ನಮ್ಮ ವರ್ತಮಾನವು ಹೆಚ್ಚಾಗಿ ವಿಜ್ಞಾನದಿಂದ ಪ್ರಭಾವಿತವಾಗಿದೆ” ಎಂದು ಹೇಳಿದರು.
ವಿಶೇಷವೆಂದರೆ, ಈ ಸೈನ್ಸ್ ಫೆಸ್ಟಿವಲ್ ಅನ್ನು ‘RISEN: Research, Innovation, and Science Empowering the Nation’ ಎಂಬ ಥೀಮ್ನೊಂದಿಗೆ ಆಯೋಜನೆಗೊಳಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.